25.7 C
Bangalore
Sunday, December 15, 2019

ಶುಭಾ ಪೂಂಜಾ ಮತ್ತೆ ದೇವಿ

Latest News

ಗಾಂಧೀಜಿಯವರ ವಿಚಾರಧಾರೆ ದಾರಿದೀಪವಾಗಲಿ

ವಿಜಯಪುರ: ಗಾಂಧೀಜಿ ಅವರ ವಿಚಾರಧಾರೆಗಳು ನಮ್ಮ ಬದುಕಿಗೆ ದಾರಿ ದೀಪವಾಗಲಿ ಎಂದು ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಂಜೀವ ಕುಲಕರ್ಣಿ ಹೇಳಿದರು.ನಗರದ...

ಬಿಎಸ್‌ವೈ ವೈಟ್‌ಡ್ರೆಸ್ ರಮೇಶ ಬ್ಲ್ಯಾಕ್ ಮಾಡ್ತಾನೆ

ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧರಿಸುವ ವೈಟ್ ಡ್ರೆಸ್‌ಅನ್ನು ಬ್ಲಾೃಕ್ ಮಾಡುತ್ತಾನೆ ಎಂದು ಶಾಸಕ ಸತೀಶ ಜಾರಕಿಹೊಳಿ...

ನಗ ನಗದುಗಳೊಂದಿಗೆ ಮಾವನ ಮನೆಯಿಂದ ರಾತ್ರೋರಾತ್ರಿ ಪರಾರಿಯಾದ ಮದುಮಗಳು; ಮದುಮಗ ಕಂಗಾಲು!

ಬದೌನ್​ (ಉತ್ತರಪ್ರದೇಶ): ಹೊಸದಾಗಿ ಮದುವೆಯಾಗಿದ್ದ ಮದುಮಗಳು ಗಂಡನ ಮನೆಯವರಿಗೆ ಆಹಾರದಲ್ಲಿ ಮತ್ತು ಬರುವ ಔಷಧ ಬೆರಸಿ ಮನೆಯಲ್ಲಿದ್ದ ನಗ ನಾಣ್ಯ ದೋಚಿ ಪರಾರಿಯಾಗಿದ್ದಾಳೆ. ಬದೌನ್​ ಜಿಲ್ಲೆಯ ಚೋಟಾ...

ಪೌರತ್ವ ತಿದ್ದುಪಡಿ ಕಾಯ್ದೆ ಶೇ.1000 ಪಟ್ಟು ಸರಿ: ಪ್ರತಿಭಟನೆಗಳಿಗೆ ಕಾಂಗ್ರೆಸ್​​ ಮಿತ್ರಪಕ್ಷಗಳು ಕಾರಣ

ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್​ ಮತ್ತು ಅದರ ಮಿತ್ರ ಪಕ್ಷಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ...

ಕಳ್ಳಬಟ್ಟಿ ಸಾರಾಯಿ ಮಾರಾಟಗಾರನ ಬಂಧನ

ರಾಯಬಾಗ: ತಾಲೂಕಿನ ಮೊರಬ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ, ಆರೋಪಿಯನ್ನು ಬಂಧಿಸಿ, ಆತನಿಂದ...

ಬೆಂಗಳೂರು: ನಟಿ ಶುಭಾ ಪೂಂಜಾ ಸದ್ಯದಲ್ಲೇ ತ್ರಿದೇವಿ ಆಗಿ ಪರದೆ ಮೇಲೆ ಮೂಡಿ ಬರಲಿದ್ದಾರೆ. ಇದೇನು ಶ್ರೀದೇವಿಯನ್ನು ತಪ್ಪಾಗಿ ಬರೆಯಲಾಗಿದೆಯೇ? ಎಂದು ಯೋಚಿಸಬೇಡಿ. ಅದು ‘ತ್ರಿದೇವಿ’ಯೇ, ಅಂದರೆ ಮೂರು ದೇವಿಯರು ಎಂದರ್ಥ. ಶುಭಾ ಜತೆಗೆ ಇನ್ನಿಬ್ಬರು ಹೊಸ ನಟಿಯರೇ ಈ ಚಿತ್ರದ ಪ್ರಧಾನ ಪಾತ್ರಗಳಾದ್ದರಿಂದ ಚಿತ್ರಕ್ಕೆ ‘ತ್ರಿದೇವಿ’ ಎಂದು ಹೆಸರಿಡಲಾಗಿದೆ.

ರಂಗಭೂಮಿ ಹಿನ್ನೆಲೆಯ ಅಶ್ವಿನ್ ಮ್ಯಾಥ್ಯೂ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ‘ಈ ಸಿನಿಮಾದಲ್ಲಿ ಮೂರು ಮಹಿಳಾ ಪಾತ್ರಗಳು ಪ್ರಧಾನವಾಗಿರಲಿವೆ. ಈ ಮೂವರೂ ಒಂದು ಕಡೆ ಸೇರಿ ಪ್ರವಾಸಕ್ಕೆ ಹೊರಟು ಕಾಡೊಂದನ್ನು ಸೇರಿಕೊಳ್ಳುತ್ತಾರೆ. ಅಲ್ಲಿ ಅವರು ಎದುರಿಸುವ ಸಮಸ್ಯೆಗಳನ್ನು ಅವರೇ ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂಬುದೇ ಸಿನಿಮಾ. ಪ್ರತಿ ಹೆಣ್ಣಲ್ಲೂ ಒಬ್ಬಳು ದೇವಿ ಇರುತ್ತಾಳೆ. ಸಮಸ್ಯೆ ಬಂದಾಗ ಅವಳು ಕಾಣಿಸಿಕೊಳ್ಳುತ್ತಾಳೆ ಎಂಬುದೇ ಚಿತ್ರದ ಸಂದೇಶ’ ಎನ್ನುತ್ತಾರೆ ನಿರ್ದೇಶಕ ಅಶ್ವಿನ್ ಮ್ಯಾಥ್ಯೂ. ‘ಚಿತ್ರದ ಮೊದಲಾರ್ಧ ಕಾಮಿಡಿ, ದ್ವಿತೀಯಾರ್ಧ ಥ್ರಿಲ್ಲರ್. ಇನ್ನು ಈ ಚಿತ್ರದಲ್ಲಿ ಪುರುಷ ಪಾತ್ರಧಾರಿಗಳಿದ್ದರೂ ಹೀರೋ ಅಂತ ಯಾರೂ ಇರುವುದಿಲ್ಲ. ಇಲ್ಲಿ ಹೀರೋಯಿನ್​ಗಳೇ ಹೀರೋಯಿಸಂ ಪ್ರದರ್ಶಿಸುತ್ತಾರೆ. ಮೂವರು ನಟಿಯರಿಗೂ ಇಲ್ಲಿ ಸಮಾನ ಸ್ಕ್ರೀನ್​ಸ್ಪೇಸ್ ಇದೆ. ಒಂದು ಪಾತ್ರಕ್ಕೆ ಶುಭಾ ಪೂಂಜಾ, ಇನ್ನೊಂದಕ್ಕೆ ರೂಪದರ್ಶಿ ಸಂಧ್ಯಾ ಡಿ ಏಂಜಲೀಸ್ ಆಯ್ಕೆ ಆಗಿದ್ದು, ಮತ್ತೊಂದು ಪಾತ್ರಕ್ಕಾಗಿ ಕಲಾವಿದೆಯ ಹುಡುಕಾಟ ನಡೆಯುತ್ತಿದೆ. ಈ ಹಿಂದೆ ಶುಭಾ ದೇವಿ ಪಾತ್ರ ಮಾಡಿದ್ದನ್ನು ನೋಡಿ ಅವರನ್ನು ಆರಿಸಿಕೊಂಡೆ. ಈ ಚಿತ್ರದಲ್ಲಿ ಸಿನಿಮಾ ನಟಿಯ ಪಾತ್ರ ಮಾಡಲಿರುವ ಅವರು ದೇವಿಯಾಗಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕರು.

ವಿಶೇಷವೆಂದರೆ ಈ ಸಿನಿಮಾದಲ್ಲಿ ಮೂವರು ನಟಿಯರೂ ಖುದ್ದಾಗಿ ಸಾಹಸದೃಶ್ಯಗಳಲ್ಲಿ ಭಾಗವಹಿಸಲಿದ್ದಾರಂತೆ. ಸಾಹಸ ಸನ್ನಿವೇಶದ ಶೇ. 90 ಭಾಗದಲ್ಲಿ ನಟಿಯರೇ ಪಾಲ್ಗೊಳ್ಳಲಿದ್ದಾರೆ. ಕೆಲವೊಂದು ಸೀನ್​ಗಳಿಗಷ್ಟೇ ಡ್ಯೂಪ್ ಬಳಸಬೇಕಾಗಬಹುದು ಎಂಬುದು ನಿರ್ದೇಶಕರು ನೀಡುವ ಮಾಹಿತಿ. ‘ಈ ಸಿನಿಮಾದಲ್ಲಿ ನಾನು ಒಬ್ಬ ಚಿತ್ರನಟಿಯಾಗಿ ಅಭಿನಯಿಸಿದ್ದೇನೆ. ಜತೆಗೆ ಫೈಟ್ ಕೂಡ ಮಾಡಲಿದ್ದೇನೆ. ಡಿಸೆಂಬರ್​ನಲ್ಲಿ ಅದಕ್ಕೆಂದೇ ಮೂವರೂ ನಟಿಯರಿಗೆ ಸಾಹಸ ತರಬೇತಿ ನೀಡಲಾಗುತ್ತದೆ. ಈ ಚಿತ್ರಕ್ಕಾಗಿ ನಾನು ಒಂದಷ್ಟು ತೂಕ ಕೂಡ ಇಳಿಸಿಕೊಳ್ಳಲಿದ್ದೇನೆ. ಈ ಹಿಂದೆ ಸಾಹಸ ಸನ್ನಿವೇಶದಲ್ಲಿ ಪಾಲ್ಗೊಂಡಿದ್ದರೂ ಇದರಲ್ಲಿ ವಿಶೇಷವಾದ ಸಾಹಸ ಸಂಯೋಜನೆ ಇರಲಿದೆ’ ಎನ್ನುತ್ತಾರೆ ಶುಭಾ ಪೂಂಜಾ. ಈ ಚಿತ್ರಕ್ಕೆ ಅಶ್ವಿನ್ ಕಥೆ ಬರೆದು ನಿರ್ದೇಶನ ಮಾಡುವುದಷ್ಟೇ ಅಲ್ಲದೆ, ಬಂಡವಾಳ ಹೂಡುವ ಮೂಲಕ ನಿರ್ವಪಕರಾಗಿಯೂ ತೊಡಗಿಸಿಕೊಂಡಿದ್ದಾರೆ. ಜನವರಿಯಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

ಹಿಂದಿಯಲ್ಲಿ ನಟಿ ಶ್ರೀದೇವಿ ಅವರ ‘ಇಂಗ್ಲಿಷ್- ವಿಂಗ್ಲಿಷ್’ನಲ್ಲಿ ಮೊದಲ ಸಲ ನಟಿಸಿದೆ. ಬಳಿಕ ಮಲಯಾಳಂ- ಹಿಂದಿಯ ಒಟ್ಟು 14 ಚಿತ್ರಗಳಲ್ಲಿ ನಟಿಸಿದ್ದು, ಕನ್ನಡ ಸಿನಿಮಾ ಮೂಲಕ ನಿರ್ದೇಶಕನಾಗುತ್ತಿದ್ದೇನೆ. ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲೇ ಆಗಿರುವುದರಿಂದ ಕನ್ನಡ ಸಿನಿಮಾಗೇ ಮೊದಲು ಆಕ್ಷನ್-ಕಟ್ ಹೇಳುತ್ತಿದ್ದೇನೆ.

| ಅಶ್ವಿನ್ ಮ್ಯಾಥ್ಯೂ ನಿರ್ದೇಶಕ/ನಿರ್ಮಾಪಕ

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...