ನಿರ್ದೇಶನದತ್ತ ಶ್ರುತಿ

ಬೆಂಗಳೂರು: ಕಿರುತೆರೆಯಲ್ಲಿ ನಿರ್ಮಾಪಕಿಯಾಗಿ ಫೇಮಸ್ ಆಗಿದ್ದ ಶ್ರುತಿ ನಾಯ್ಡು, ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟರು. ಅವರ ಚೊಚ್ಚಲ ನಿರ್ವಣದ ಈ ಸಿನಿಮಾ ಇಂದು (ಮೇ 20) 25ನೇ ದಿನ ಪೂರೈಸಿದೆ. ಆ ಖುಷಿಯಲ್ಲೇ ಒಂದು ಹೊಸ ಸುದ್ದಿ ನೀಡಿದ್ದಾರೆ ಶ್ರುತಿ.

ಶೀಘ್ರದಲ್ಲೇ ಅವರು ನಿರ್ದೇಶಕಿಯಾಗಿಯೂ ಬಡ್ತಿ ಪಡೆಯಲಿದ್ದಾರಂತೆ. ಸದ್ಯ ಸ್ಕ್ರಿಪ್ಟ್ ಬರೆಯುವ ಕೆಲಸದಲ್ಲಿ ಅವರು ತೊಡಗಿಕೊಂಡಿದ್ದು, ಇದೇ ವರ್ಷ ಡಿಸೆಂಬರ್ ವೇಳೆಗೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ನಿರ್ದೇಶನದ ಜತೆಗೆ ನಿರ್ವಣದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಲಿದ್ದಾರೆ. ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.