More

    ಗಮನ ಸೆಳೆದ ನಂದಿ ಧ್ವಜಗಳ ಉತ್ಸವ

    ವಿಜಯಪುರ: ಸಂಕ್ರಮಣದ ಜಾತ್ರಾ ಶತಮಾನೋತ್ಸವ ಅಂಗವಾಗಿ ಶ್ರೀ ಸಿದ್ಧೇಶ್ವರ ದೇವಸ್ಥಾನದ ಮುಂದೆ ಎಳ್ಳು ಬೆಲ್ಲ ವಿತರಣೆಯೊಂದಿಗೆ ಬುಧವಾರ ನಂದಿ ಧ್ವಜಗಳ ಉತ್ಸವಕ್ಕೆ ಚಾಲನೆ ನೀಡಲಾಯಿತು.
    ದೇವಾಲಯದ ಆವರಣದ ಮುಂದೆ ಜಾತ್ರೆ ನಿಮಿತ್ತ ಹೋಮ-ಹವನ ನಡೆಸಲಾಯಿತು. ಶ್ರೀ ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಹೋಮ ಹವನ ಭಕ್ತಿ ಶ್ರದ್ಧೆಗಳಿಂದ ನೆರವೇರಿಸಲಾಯಿತು.
    ಎಳ್ಳು ಧಾನ್ಯಗಳಿಂದ ಕೂಡಿದ ಕಟ್ಟೆಯ ಮೇಲೆ ಹಾವೇರಿ ಜಿಲ್ಲೆಯ ಕಿರಯ್ಯ ಶಾಸೀಗಳ ನೇತೃತ್ವದಲ್ಲಿ ಹೋಮ ಹವನ ಪೂಜಾ ಕಾರ್ಯಕ್ರಮ ನೆರವೇರಿತು. ಈರಯ್ಯ ಶಾಸೀಗಳು, ಬಸಯ್ಯ ಶಾಸೀಗಳು, ಸಿದ್ದರಾಮಯ್ಯ ಶಾಸೀಗಳು, ಮುರಗಯ್ಯ ಗಚ್ಚಿನಮಠ, ಬಸವರಾಜ ಶಾಸೀಗಳು ಇದ್ದರು.
    ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ, ಚೇರ್ಮನ್ ಬಸಯ್ಯ ಎಸ್. ಹಿರೇಮಠ, ಕಾರ್ಯದರ್ಶಿ ಸದಾನಂದ ದೇಸಾಯಿ, ಜಂಟಿ ಕಾರ್ಯದರ್ಶಿ ಎಂ.ಎಂ. ಸಜ್ಜನ, ಜಾತ್ರಾ ಸಮಿತಿಯ ಎಸ್.ಎಚ್. ನಾಡಗೌಡ, ಸದಾಶಿವ ಗುಡ್ಡೋಡಗಿ, ಗುರು ಗಚ್ಚಿನಮಠ, ಮಹಾದೇವ ಹತ್ತಿಕಾಳ, ವಿಜಯಕುಮಾರ ಡೋಣಿ, ಶಾಂತಪ್ಪ ಜತ್ತಿ, ಬಾಗಪ್ಪ ಕನ್ನೋಳ್ಳಿ ಇನ್ನಿತರರು ಪಾಲ್ಗೊಂಡಿದ್ದರು.

    ಸಿಎಂ ಬಿಎಸ್‌ವೈ ಭೇಟಿ ಇಂದು

    ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜ.16ರಂದು ವಿಜಯಪುರಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆಗೆ ವಿಜಯಪುರಕ್ಕೆ ಆಗಮಿಸಲಿರುವ ಸಿಎಂ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಸಿದ್ಧೇಶ್ವರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ವಿಜಯಪುರದಲ್ಲೇ ವಾಸ್ತವ್ಯ ಮಾಡಲಿದ್ದಾರೆ.

    ಸಿದ್ಧೇಶ್ವರ ರತ್ನ ಪ್ರಶಸ್ತಿ ಪ್ರಕಟ

    ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿಯೂ ಸಿದ್ಧೇಶ್ವರ ಜಾತ್ರೆ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡುವ ಸಿದ್ಧೇಶ್ವರ ರತ್ನ ಪ್ರಶಸ್ತಿ ಪ್ರಕಟಗೊಂಡಿದೆ. ಸುಷ್ಮಾ ಬಿರಾದಾರ (ಶಿಕ್ಷಣ ಕ್ಷೇತ್ರ), ಎಂ.ಎಸ್.ಮದಭಾವಿ (ಸಾಹಿತ್ಯ), ಅರವಿಂದ ಮಹೇಂದ್ರಕರ ಮತ್ತು ಈಶ್ವರವ್ವ ಮಾದರ (ಕಲಾ ಕ್ಷೇತ್ರ), ಅಶೋಕ ಯಡಹಳ್ಳಿ ಮತ್ತು ದೇವೇಂದ್ರ ಹೆಳವಾರ (ಮಾಧ್ಯಮ ಕ್ಷೇತ್ರ), ಬೀರಪ್ಪ ವಗ್ಗಿ (ಕೃಷಿ ಕ್ಷೇತ್ರ), ರವೀಂದ್ರ ಬೆಳ್ಳಿ (ಕೃಷಿ ಸಂಶೋಧನಾ ಕ್ಷೇತ್ರ), ಗಿರೀಶ ಭದ್ರಗೊಂಡ (ಕೃಷಿ ಉಪಕರಣ ಸಂಶೋಧನಾ ಕ್ಷೇತ್ರ), ಅಮಲಾ ಅಂಗಡಿ (ಕ್ರೀಡಾ ಕ್ಷೇತ್ರ) ಒಟ್ಟು 10 ಜನರಿಗೆ ಶ್ರೀ ಸಿದ್ಧೇಶ್ವರ ರತ್ನ ಪ್ರಶಸ್ತಿ ನೀಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts