More

  ರಾಜ್ಯ ಸರ್ಕಾರ ದಪ್ಪ ಚರ್ಮದಿಂದ ಕೂಡಿದೆ

  ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ನಾಡಿನ ರೈತರ ಕೃಷಿಗೆ ನೀರು ಹರಿಸದೆ, ಕುಡಿಯುವ ನೀರು ಉಳಿಸದೆ ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಸರ್ಕಾರ ನಮ್ಮ ಪಾಲಿಗೆ ಸತ್ತುಹೋಗಿದೆ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಆಕ್ರೋಶ ವ್ಯಕ್ತಪಡಿಸಿದರು.
  ಪಟ್ಟಣದ ಕುವೆಂಪು ವೃತ್ತದಲ್ಲಿ ಜಮಾವಣೆಗೊಂಡ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ಬೆಂಗಳೂರು-ಮೈಸೂರು ವೃತ್ತದಿಂದ ಮುಖ್ಯರಸ್ತೆ ಮಾರ್ಗವಾಗಿ ತಾಲೂಕು ಕಚೇರಿವರೆಗೂ ಸಂಗೀತವಾದ್ಯ, ಭಜನಾ ಗೀತೆಗಳ ಹಾಡುವ ಮೂಲಕ ವಿನೂತನ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
  ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಆಮಿಷಗಳನ್ನು ತೋರಿ ಅಧಿಕಾರ ಹಿಡಿದಿದ್ದು, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಭವಿಷ್ಯಕ್ಕಾಗಿ ತಮಿಳುನಾಡಿಗೆ ಅಧಿಕವಾಗಿ ಕಾವೇರಿ ನೀರು ಹರಿಸಿ ಅಲ್ಲಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪಾದತೊಳೆಯಲು ಮುಂದಾಗಿದ್ದಾರೆ. ಇಂತಹ ಮಹಾನಾಯಕರು ಮುನ್ನಡೆಸುತ್ತಿರುವ ರಾಜ್ಯ ಸರ್ಕಾರ ದಪ್ಪ ಚರ್ಮದಿಂದ ಕೂಡಿದ್ದು, ರೈತಾಪಿ ಜನರ ಹೋರಾಟಗಳು ಮುಂದೆ ಹಿಂಸಾಚಾರಕ್ಕೆ ತಿರುಗಿದರೂ ಸಂಶಯವಿಲ್ಲ. ರಾಜ್ಯದ ನೆಲ, ಜಲ ಮತ್ತು ಜನ-ಜಾನುವಾರುಗಳ ಹಿತಾಶಕ್ತಿ ಕಾಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದ್ದು, ಇವರಿಗೆ ಜಾನಪದ ಶೈಲಿಯಲ್ಲಿ ಭಜನಾ ಗೀತೆಗಳ ಮೂಲಕ ಶ್ರದ್ಧಾಂಜಲಿ ಕೋರುತ್ತಿದ್ದೇವೆ ಎಂದರು.
  ಕನ್ನಡಿಗರಿಗೆ ಕುಡಿಯಲು ಕಾವೇರಿ ನೀರು ಗೋವಿಂದ.., ರೈತಾಪಿ ಜನರ ಕೃಷಿ ಬದುಕು ಗೋವಿಂದ.., ತಮಿಳುನಾಡು ಸರ್ಕಾರದ ಹಿತ ಕಾದ ರಾಜ್ಯ ಕಾಂಗ್ರೆಸ್ ಸರ್ಕಾರ ತೊಲಗಲಿ, ಕಾವೇರಿ ನೀರು ಪ್ರಾಧಿಕಾರ ತೊಲಗಲಿ ಎಂದು ಸಾಲು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭೂಮಿತಾಯಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರಾದ ಹನಿಯಂಬಾಡಿ ನಾಗರಾಜು, ಜಯರಾಮೇಗೌಡ, ಪ್ರಧಾನ ಕಾರ್ಯದರ್ಶಿಗಳಾದ ಎಂ.ವಿ.ಕೃಷ್ಣ, ದರ್ಶನ್, ಖಜಾಂಚಿ ಪುಟ್ಟಮಾದು, ಸಂಚಾಲಕ ಡಿ.ಮಂಜುನಾಥ್, ಹುಳುವಾಡಿ ನಾಗೇಂದ್ರ, ಸಂಘಟನಾ ಕಾರ್ಯದರ್ಶಿಗಳಾದ ಪಾಲಹಳ್ಳಿ ರಾಮಚಂದ್ರು, ಕಡತನಾಳು ಚಾಮರಾಜು, ಅಚ್ಚಪ್ಪನಕೊಪ್ಪಲು ರವಿ ಲಕ್ಷ್ಮಣ, ರಮೇಶ, ಕೃಷ್ಣ, ಕೂಡಕುಪ್ಪೆ ಆಲೆಮನೆ ಸೋಮ, ರಾಜು, ಸೊಸೈಟಿ ದೇವರಾಜು, ಮೇಳಾಪುರ ದೇವರಾಜು ಇತರರು ಇದ್ದರು.

  See also  ಕೊಣಾಜೆಯಲ್ಲಿ ಬಸ್ ತಂಗುದಾಣ ಉದ್ಘಾಟನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts