ಬೆಂಗಳೂರು: ಶ್ರೀ ಸುಬ್ರಮಣ್ಣೇಶ್ವರ ಕೋ-ಅಪರೇಟಿವ್ ಬ್ಯಾಂಕ್ 2025ನೇ ಸಾಲಿನಲ್ಲಿ ನಡೆಸಿದ ಚುನಾವಣೆಯಲ್ಲಿ ಶಿಕ್ಷಣ ತಜ್ಞ, ಡಿ.ಆರ್.ವಿಜಯಸಾರಥಿ ಸರ್ವಾನುಮತದಿಂದ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೆಲಸದಲ್ಲಿ ಶಿಸ್ತು. ಬದ್ದತೆ ಇದ್ದರೆ ಯಶ್ವಸಿಯಾಗಲು ಸಾಧ್ಯ. ಶ್ರೀ ಸುಬ್ರಮಣ್ಣೇಶ್ವರ ಕೋ-ಅಪರೇಟಿವ್ ಬ್ಯಾಂಕ್ ನಲ್ಲಿ 5 ವರ್ಷಗಳ ಕಾಲ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು, ಈ ಅವಧಿಯಲ್ಲಿ ಬ್ಯಾಂಕ್ ಅಂದಾಜು 9 ಕೋಟಿ ನಿವ್ವಳ ಲಾಭ ಗಳಿಸಿ ಮಹತ್ವದ ಸಾಧನೆ ಮಾಡಿದೆ. ಬ್ಯಾಂಕ್ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿರುವುದನ್ನು ಗುರುತಿಸಿದ ಮತದಾರರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಠೇವಣೆದಾರರಿಗೆ ಆಕರ್ಷಕ ಬಡ್ಡಿ ಮತ್ತು ಸರಳ ಸುಲಭವಾಗಿ ಸಾಲ ಸೌಲಭ್ಯ ನೀಡಲಾಗುವುದು ಅಲ್ಲದೆ, ಯಾವುದೇ ಕಾರಣಕ್ಕೂ ಠೇವಣೆದಾರರಿಗೆ ಅನ್ಯಾಯವಾದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಡಿ.ಆರ್.ವಿಜಯಸಾರಥಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಡಾ.ಕೆ. ಎಂ. ರಂಗಧಾಮಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ನಿರ್ದೇಶಕರಾಗಿ ವೆಂಕಟಾಚಲಪತಿ ಬಿ.ಎಲ್. ಪಿ. ರುದ್ರಮೂರ್ತಿ, ಎಸ್. ಸತ್ಯಮೂರ್ತಿ, ಎಂ.ಸಿ. ಫಾಲನೇತ್ರ, ಲೋಹಿತ್ ಜಿ. ನಂಜೇಗೌಡ, ಪಿ.ಕೆ. ರವೀಂದ್ರ, ಎನ್. ಮಹಾಲಕ್ಷ್ಮಿ, ಎಚ್. ಮಾರುತಿ, ಅನ್ನಪೂರ್ಣಮ್ಮ, ಜಯಲಕ್ಷ್ಮಿ ಜಿ. ತೋಟಗೇರ, ಪ್ರಭಾರ ಪ್ರಧಾನ ವ್ಯವಸ್ಥಾಪಕರಾಗಿ ಕೆ.ಎನ್. ಕೃಷ್ಣಯ್ಯ ಶೆಟ್ಟಿ, ಪೂರ್ಣಾವಧಿ ಸಲಹೆಗಾರರಾಗಿ ಬಿ.ಆರ್. ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ವೇಳೆ ಶ್ರೀ ಸುಬ್ರಮಣ್ಣೇಶ್ವರ ಕೋ-ಅಪರೇಟಿವ್ ಬ್ಯಾಂಕ್ ಸಾರಥಿಯಾಗಿ ಆಯ್ಕೆಯಾಗಿರುವ ಡಿ.ಆರ್.ವಿಜಯಸಾರಥಿ ಅವರಿಗೆ ಬ್ಯಾಂಕ್ ಸಿಬ್ಬಂದಿವರ್ಗದವರು ಹಾಗೂ ವಾಸವಿ ಶಿಕ್ಷಣ ಸಮೂಹ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹೂಗುಚ್ಚ ನೀಡಿ ಶುಭ ಹಾರೈಸಿದರು.