22.5 C
Bengaluru
Sunday, January 19, 2020

ಶ್ರೀರಾಮ ಅಖಂಡ ದೇಶದ ಸಂಕೇತ

Latest News

ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ...

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ...

ಪೋಲಿಯೋ ಲಸಿಕಾ ಕಾರ್ಯಕ್ರಮ

ರಾಣೆಬೆನ್ನೂರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು...

ಇಬ್ಬರು ಮನೆಗಳ್ಳರು ಖಾಕಿ ಬಲೆಗೆ

ಗದಗ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೆಟ್ಲಮೆಂಟ್ ನಿವಾಸಿಗಳಾದ ಸುರೇಶ...

ಕಾಲನಲ್ಲಿ ಲೀನವಾದ ‘ಪ್ರಳಯ’

ಅಕ್ಕಿಆಲೂರ: ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸಮೀಪದ ಮಲಗುಂದ ಗ್ರಾಮದ ಪ್ರಳಯ ಎಂಬ ಹೆಸರಿನ ಹೋರಿ ಶನಿವಾರ ಅನಾರೊಗ್ಯದಿಂದ ಅಸುನಿಗಿದ್ದು,...

ಬಾಗಲಕೋಟೆ: ಶ್ರೀರಾಮ ಯಾವುದೇ ಒಂದು ಜಾತಿ, ಧರ್ಮ, ಭಾಷೆಗೆ ಸೀಮಿತವಲ್ಲ. ಅಖಂಡ ದೇಶದ ಸಂಕೇತ. ರಾಮ ಮಂದಿರ ನಿರ್ವಣ ರಾಷ್ಟ್ರೀಯತೆಯ ಕಾರ್ಯಕ್ರಮ. ಡಿಸೆಂಬರ್ ಒಳಗಾಗಿ ಮಂದಿರ ನಿರ್ವಣ ಆಗಬೇಕಿದೆ. ಇದಕ್ಕಾಗಿ ದೇಶದ ಪ್ರತಿಯೊಬ್ಬರೂ ಕೈಜೋಡಿಸá-ವಂತೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಕೋರಿದ್ದಾರೆ.

ರಾಮ ಮಂದಿರ ನಿರ್ವಣಕ್ಕಾಗಿ ವಿಶ್ವ ಹಿಂದು ಪರಿಷತ್ ವತಿಯಿಂದ ಬಾಗಲಕೋಟೆ ಬಿವಿವಿ ಸಂಘದ ಮೈದಾನದಲ್ಲಿ ಭಾನá-ವಾರ ಸಂಜೆ ನಡೆದ ಬೃಹತ್ ಜನಾಗ್ರಹ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಮ ಮಂದಿರ ಇನ್ನೂ ನಿರ್ವಣ ಆಗಿಲ್ಲ ಎಂದರೆ ನಮ್ಮಂಥ ರಣಹೇಡಿಗಳು ಯಾರೂ ಇಲ್ಲ. ದೇಶದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹಿಂದುಗಳಿದ್ದಾರೆ. ರಾಮ ಮಂದಿರ ನಿರ್ವಣಕ್ಕೆ ವಿರೋಧ ಮಾಡಿ ಈ ದೇಶದಲ್ಲಿ ಹೇಗೆ ಬದá-ಕá-ತ್ತಾರೆ ಎಂದು ನಾವೆಲ್ಲ ನೋಡಬೇಕಿದೆ ಎಂದು ಹೇಳಿದರು.

ಅಧಿವೇಶನ ವೇಳೆ ಸುಗ್ರೀವಾಜ್ಞೆ ಹೊರಡಿಸಲು ಬರಲ್ಲ. ಹೀಗಾಗಿ ರಾಮ ಮಂದಿರ ನಿರ್ವಣಕ್ಕೆ ಕೇಂದ್ರ ಸರ್ಕಾರ ಕಾನೂನು ತರಲಿ. ಇದಕ್ಕೆ ಯಾವ ಸಂಸದರು ವಿರೋಧ ಮಾಡá-ತ್ತಾರೆ ನೋಡೋಣ. ಇದು ಯಾವುದೇ ರಾಜೕಯ ಪಕ್ಷ ಅಥವಾ ಧರ್ಮದ ಕಾರ್ಯಕ್ರಮವಲ್ಲ. ಇದು ರಾಷ್ಟ್ರೀಯತೆಯ ಕಾರ್ಯ. ಇದಕ್ಕೆ ಯಾರ ವಿರೋಧವೂ ಇರಲ್ಲ. ಮಹಾತ್ಮ ಗಾಂಧೀಜಿ ಅವರೇ ರಾಮರಾಜ್ಯ ನಿರ್ವಣ ಆಗಬೇಕು ಎಂದಿದ್ದರು. ಭಾರತದಲ್ಲಿ ಶಾಂತಿ ನೆಲೆಸಲು, ಸಾಮರಸ್ಯ ಉಳಿಯಲು, ಜಗತ್ತಿನಲ್ಲಿ ವಿಶೇಷ ಸ್ಥಾನ ದೊರೆಯಲು ರಾಮ ಮಂದಿರ ನಿರ್ವಣ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಭಾಷಣ ಮಾಡಿದ ಆರ್​ಎಸ್​ಎಸ್ ಕ್ಷೇತ್ರೀಯ ಸಂಘಟನಾ ಕಾರ್ಯರ್ದ ಕಲ್ಲಡ್ಕ ಪ್ರಭಾಕರ ಭಟ್, ಮಂದಿರ ನಿರ್ವಣಕ್ಕೆ ವಿರೋಧಿಸá-ವವರ ವಿರá-ದ್ಧ ಗುಡá-ಗಿದರು. ಬುದ್ಧಿಜೀವಿಗಳನ್ನು ದುರ್ಬುದ್ಧಿ ಜೀವಿಗಳು ಎಂದು ಜರಿದರು. ಗೋಮಾಂಸ ತಿನ್ನುತ್ತೇನೆ ಇವರದ್ದೇನು ಎಂದು ಪ್ರಶ್ನೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರá-ದ್ಧ ವಾಗ್ದಾಳಿ ನಡೆಸಿದರು. ಟಿಪ್ಪು ಸುಲ್ತಾನ್ ಒಬ್ಬ ಹಲ್ಕಾ, ಅತ್ಯಾಚಾರಿ ಎಂದು ಜರಿದರು. ಭವಿಷ್ಯದಲ್ಲಿ ದೇಶದಲ್ಲಿ ಬಾಬರಿ ಮಸೀದಿ ನಿರ್ವಣ, ಸ್ಮಾರಕ ನಿರ್ವಣಕ್ಕೆ ಮುಂದಾದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.

ಇತಿಹಾಸದಲ್ಲಿ ನಮಗೆ ಸಾಕಷ್ಟು ಅನ್ಯಾಯವಾಗಿದೆ. ಸಾವಿರಾರು ದೇವಾಲಯ ನೆಲಸಮ ಮಾಡಿದ್ದಾರೆ. ಈಗಲೂ ದೇಶದಿಂದ ಯಾರನ್ನೂ ಹೊರಹಾಕಲು ಮನಸ್ಸು ಇಲ್ಲ. ಆಗಿರá-ವ ಅನ್ಯಾಯ ಮರೆಯá-ತ್ತೇವೆ. ಮಾತá-ಕತೆ ನಡೆಸಲು ಸಿದ್ಧರಿದ್ದೇವೆ. ಆದರೆ, ನಿಮ್ಮ ಉದ್ಧಟತನ ಕೈಬಿಡಿ. ದೇಶದ ಹಿಂದá-ಗಳ ಭಾವನೆಗೆ ಸ್ಪಂದಿಸಿ. ಅದನ್ನು ಬಿಟ್ಟು ಬಾಬರಿ ಮಸೀದಿ ನಿರ್ವಣ ಮಾಡá-ತ್ತೇವೆ, ಸ್ಮಾರಕ ನಿರ್ವಿುಸá-ತ್ತೇವೆ ಎಂದು ಬಂದರೆ ಸಮಾಧಿಯಾಗಿ ಹೋಗá-ತ್ತೀರಿ ಎಂದು ಎಚ್ಚರಿಸಿದರು.

ಶ್ರೀರಾಮ ಶ್ರೇಷ್ಠ ರಾಜ, ಅಣ್ಣ, ಗಂಡ ಹೀಗೆ ಎಲ್ಲದರಲ್ಲೂ ಸರ್ವಶ್ರೇಷ್ಠ ವ್ಯಕ್ತಿ. ರಾಮನನ್ನು ಬಿಟ್ಟರೆ ನಮ್ಮ ದೇಶಕ್ಕೆ ಏನು ಶಕ್ತಿ ಇದೆ. ರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ವಣ ಆಗಬೇಕು. ದುರ್ಬುದ್ಧಿಯ ಬುದ್ಧಿಜೀವಿಗಳು ರಾಮ ಅಲ್ಲಿಯೇ ಹುಟ್ಟಿದ್ದಕ್ಕೆ ಸಾಕ್ಷಿ ಏನು ಅಂತಾರೆ ? ನಾವು ನಂಬಿಕೆಗಳ ಮೇಲೆ ಜೀವನ ನಡೆಸá-ವವರು. ರಾಮ ಅಲ್ಲಿಯೇ ಹುಟ್ಟಿದ್ದು ಅಂತ ಕೌಶಲ್ಯಮಾತೆ ಹೇಳಿದ್ದಾರೆ. ಅದನ್ನು ನಮ್ಮ ದೇಶದ ಕೋಟ್ಯಂತರ ತಾಯಿಯರು ಹೇಳಿಕೊಂಡು ಬಂದಿದ್ದಾರೆ. ನಾವು ದುರ್ಬರಲ್ಲ. ಹಾಗೆಂದು ಹೇಳಿಕೊಂಡು ಬಂದಿದ್ದರು. ಮಂಗನಂತೆ ಇದ್ದ ನಮ್ಮ ಜನರು ಹನá-ಮಂತನಂತಾಗಿದ್ದಾರೆ. ಆ ಶಕ್ತಿ ಏನು ಅನ್ನೋದು 1992ರಲ್ಲಿ ಗೊತ್ತಾಗಿದೆ. ಇದೀಗ ಅದೇ ಶಕ್ತಿ ಒಗ್ಗೂಡಿಕೊಂಡು ಮುಂದಿನ ವರ್ಷದಲ್ಲಿ ರಾಮ ಮಂದಿರ ನಿರ್ವಣ ಮಾಡಲಿದೆ. ಇದಕ್ಕೆ ದೇಶದ ಸಂತರ ನೇತೃತ್ವ ಇದೆ ಎಂದು ಹೇಳಿದರು.

ಶಿವಯೋಗ ಮಂದಿರ ಅಧ್ಯಕ್ಷ ಡಾ.ಸಂಗನಬಸವ ಸ್ವಾಮೀಜಿ, ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಕಲಾದಗಿ ಹಿರೇಮಠದ ಮಹಾಂತ ದೇವರು, ರಾಮಾರೂಢ ಮಠದ ಪರಮಾರೂಢ ಸ್ವಾಮೀಜಿ, ಮಳೆಯಪ್ಪಯ್ಯ ಸ್ವಾಮೀಜಿ, ಶಿವುಕುಮಾರ ಸ್ವಾಮೀಜಿ, ಕೊಟ್ಟೂರು ದೇವರು, ಅಭಿನವ ಬಸವರಾಜೇಂದ್ರ ಸ್ವಾಮೀಜಿ, ಘನಲಿಂಗ ಸ್ವಾಮೀಜಿ, ನೀಲಾನಗರದ ಕುಮಾರಮಹಾರಾಜ ಸ್ವಾಮೀಜಿ, ವಿಶ್ವನಾಥ ಸ್ವಾಮೀಜಿ, ಶಂಕರಾರೂಢ ಸ್ವಾಮೀಜಿ, ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ನಿತ್ಯಾನಂದ ಸ್ವಾಮೀಜಿ, ಶಿವಪುತ್ರ ಅವಧೂತ ಸ್ವಾಮೀಜಿ, ಚನಯ್ಯ ಸ್ವಾಮೀಜಿ, ರಾಜಶೇಖರ ದೇವರು ಸೇರಿ ವಿವಿಧ ಮಠಾಧೀಶರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ರಾಷ್ಟ್ರಧ್ವಜ ಕೇಸರಿಯಾಗಲಿ: ಈ ದೇಶದ ರಾಷ್ಟ್ರಧ್ವಜ ಸಂಪೂಣವಾಗಿ ಕೇಸರಿ ಇರಬೇಕು. ಒಂದು ಮೂಲೆಯಲ್ಲಿ ಚರಕದ ಚಿಹ್ನೆ ಇರಬೇಕಿತ್ತು. ನಮ್ಮ ದೇಶದ ಷಂಡ ನಾಯಕತ್ವ ದೇಶದ್ರೋಹಿಗಳಿಗೆ ಹೆದರಿ ತಲೆಬಾಗಿ ರಾಷ್ಟ್ರಧ್ವಜದಲ್ಲಿ ಹಸಿರು ಸೇರಿಸಿದರು. ಕೆಲವರು ದೇಶವನ್ನು ಹಸಿರುಮಯ ಮಾಡಲು ಹೊರಟಿದ್ದಾರೆ. ಅದು ಸಾಧ್ಯವಾಗದು. ಈ ದೇಶವೆ ಕೇಸರಿ. ಇನ್ನು ಕೇಸರಿಕರಣ ಎಲ್ಲಿಂದ ಬಂತು ಎಂದು ಕಲ್ಲಡ್ಕಕ ಪ್ರಭಾಕರ ಭಟ್ಟರು ಹೇಳಿದರು.

ಎಂಥ ತಾಯಿಗೆ ಇವನೆಂಥ ಮಗ: ಮಾಜಿ ಸಿಎಂ ಸಿದ್ದರಾಮಯ್ಯ ವಿರá-ದ್ಧವೂ ಪ್ರಭಾಕರ ಭಟ್ ತೀವ್ರ ಹರಿಹಾ್ದಯು. ಮಾಜಿ ಸಿಎಂ ಸಿದ್ದರಾಮಯ್ಯ, ಹಿಂದು ದೇವಾಲಯಗಳನ್ನು ನಾಶ ಮಾಡಿದ ಟಿಪ್ಪುವನ್ನು ಬೆಂಬಲಿಸá-ತ್ತಾರೆ. ನಮ್ಮದು ಛತ್ರಪತಿ ಶಿವಾಜಿ ವಂಶ, ಟಿಪ್ಪು ವಂಶದವರು ನಾವಲ್ಲ. ನಮಗೆ ಅಬ್ದುಲ್ ಕಲಾಂ ಸಂತತಿ ಬೇಕೆ ವಿನಃ ಬಾಬರಿ ಸಂತತಿ ಅಲ್ಲ ಎಂದು ಗುಡುಗಿದರು. ನಾಲ್ಕು ರಸ್ತೆ ಮೇಲೆ ನಿಂತು ಗೋಮಾಂಸ ತಿಂತೇನೆ ಅಂತಾರೆ. ಆದರೆ, ಅವರ ತಾಯಿ ಗೋವು ತಾಯಿ ಅಂತ ಪೂಜೆ ಮಾಡಿದವರು. ಎಂಥ ತಾಯಿಗೆ ಇವನೆಂಥ ಮಗ. ನಿಮಗೆ ತಿನ್ನಲು ಬೇರೆ ಮಾಂಸ ಇಲ್ಲವೇ ? ತಾಯಿ ಎಂದು ಪೂಜೆ ಮಾಡá-ವ ಗೋಮಾಂಸವೇ ತಿನ್ನಬೇಕಾ ಎಂದು ಪ್ರ್ನಶಿಸಿದರು.

ನೆಹರು ವಂಶದಿಂದ ಅನ್ಯಾಯ: ಭಾರತ ದೇಶಕ್ಕೆ, ಹಿಂದುಗಳಿಗೆ ನೆಹರು ವಂಶದಿಂದ ಆಗಿರá-ವ ಅನ್ಯಾಯ ಮತ್ಱಾರಿಂದಲೂ ಆಗಿಲ್ಲ. ಸೋಮನಾಥ ದೇವಾಲಯ ಕೆಡವಿ ಮಸೀದಿ ಕಟ್ಟಿದ್ದರು. ಆದರೆ, ವಲ್ಲಭಭಾಯಿ ಪಟೇಲರು ಮಸೀದಿ ನೆಲಸಮ ಮಾಡಲು ಮುಂದಾದಾಗ ಇದಕ್ಕೆ ನೆಹರು ವಿರೋಧ ಮಾಡಿದ್ದರು. ಈಗ ರಾಮಮಂದಿರ ನಿರ್ವಣ ಆಗಬೇಕಿದೆ. ಈಗಲೂ ಕೆಲವರು ಮತ್ತೆ ಅಡ್ಡಿ ಮಾಡá-ತ್ತಿದ್ದಾರೆ. ದೇಶದಲ್ಲಿ ರಾಮಮಂದಿರ ನಿರ್ವಣ ಆಗಲೇಬೇಕು ಎಂದು ಹೇಳಿದರು.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...