ಶ್ರೀ ಮಣ್ಣು ಬಸವೇಶ್ವರ ಸ್ವಾಮಿ ಉತ್ಸವ

blank

ಶಿಕಾರಿಪುರ: ಶಿಕಾರಿಪುರ ತಾಲೂಕು ಬರೀ ಶರಣರ ನಾಡಷ್ಟೇ ಅಲ್ಲ, ಹಲವು ವಿಸ್ಮಯಗಳ ಕ್ಷೇತ್ರವೂ ಹೌದು. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ನೂರಾರು ವರ್ಷಗಳಿಂದ ಪೂಜೆಗೊಳ್ಳುತ್ತಿರುವ ಈ ಮಣ್ಣು ಬಸವಣ್ಣನೇ ಸಾಕ್ಷಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಚಿಕ್ಕಕಲವತ್ತಿ ಶ್ರೀ ಮಣ್ಣು ಬಸವೇಶ್ವರ ಸ್ವಾಮಿಯ ಜಾತ್ರೋತ್ಸವದಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ನಾವು ಕಲ್ಲು, ಮಣ್ಣು, ಮರ, ಗಿಡ, ನದಿ, ಪರ್ವತಗಳಲ್ಲಿ ದೇವರನ್ನು ಕಾಣುವವರು, ಪ್ರಕೃತಿಯೇ ನಮಗೆ ದೈವ ಸಮಾನ. ಮಣ್ಣಿನಿಂದಲೇ ಮಾಡಲ್ಪಟ್ಟ ಶ್ರೀ ಮಣ್ಣು ಬಸವೇಶ್ವರ ಸ್ವಾಮಿ ಭಕ್ತರನ್ನು ಪೊರೆಯುತ್ತಾನೆ ಎಂದರು.
ನಮ್ಮ ಸನಾತನ ಧರ್ಮದ ಮಹತ್ವಕ್ಕೆ ಇವೆಲ್ಲವೂ ಸಾಕ್ಷಿ. ಈ ಭಾಗದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಲು ಇಲ್ಲಿನ ಜನ ಶ್ರೀಮಣ್ಣು ಬಸವೇಶ್ವರರ ಮೊರೆ ಹೋಗುತ್ತಾರೆ. ಈ ಪ್ರಾಂತ್ಯ ಕೆಳದಿ ರಾಣಿ ಚನ್ನಮ್ಮ ಜನಿಸಿದ ಪ್ರಾಂತ್ಯ. ಇವತ್ತಿಗೂ ಇಲ್ಲಿ ಕೋಟೆ ಕೊತ್ತಲಗಳ, ದೇವ ಮಂದಿರಗಳ ಕುರುಹುಗಳಿವೆ ಎಂದು ತಿಳಿಸಿದರು.
ಜಾತ್ರೆ, ಉತ್ಸವ, ಹಬ್ಬಗಳು ನಮ್ಮ ನೆಲದ ಸಂಸ್ಕೃತಿಯನ್ನು ಸಾರಿ ಹೇಳುತ್ತಿವೆ. ನಮ್ಮ ಜನರ ಆಚಾರ, ವಿಚಾರಗಳು, ಸಂಪ್ರದಾಯಗಳು ಅತ್ಯಂತ ವಿಶಿಷ್ಟ . ಸಹನೆ, ಶಾಂತಿ, ಸಹಬಾಳ್ವೆ, ಸೌಹಾರ್ದ ನಮ್ಮ ಧರ್ಮದ ಮೂಲ ಆಶಯ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಹುಲ್ಮಾರ್ ಮಹೇಶ್, ಸೋಮನಗೌಡ, ಮಾಜಿ ಸೈನಿಕ ಬಸವರಾಜ್, ಗ್ರಾಪಂ ಅಧ್ಯಕ್ಷ ವೀರೇಂದ್ರ ಪಾಟೀಲ್ ಇತರರಿದ್ದರು.

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…