Vishnupriya Movie Review; ಮಲೆನಾಡ ಮಳೆಯಲ್ಲಿ ಪ್ರೀತಿಯ ಕಿಚ್ಚು

blank

ಚಿತ್ರ: ವಿಷ್ಣುಪ್ರಿಯ
ನಿರ್ದೇಶನ: ವಿ.ಕೆ. ಪ್ರಕಾಶ್​
ನಿರ್ಮಾಣ: ಕೆ.ಮಂಜು
ತಾರಾಗಣ: ಶ್ರೇಯಸ್​ ಮಂಜು, ಪ್ರಿಯಾ ವಾರಿಯರ್​, ಅಚ್ಯುತ್​ ಕುಮಾರ್​, ಸುಚೇಂದ್ರ ಪ್ರಸಾದ್​, ನಿಹಾಲ್​ ಮತ್ತಿತರರು.

| ಹರ್ಷವರ್ಧನ್​ ಬ್ಯಾಡನೂರು

Vishnupriya Movie Review; ಮಲೆನಾಡ ಮಳೆಯಲ್ಲಿ ಪ್ರೀತಿಯ ಕಿಚ್ಚು

“ಈ ಪ್ರೀತಿನೇ ಹಿಂಗೆ ಪ್ರಿಯ… ನೀನ್​ ಸಿಗೋಕೂ ಮುಂಚೆ ಸಿಂಹದ ಥರಾ ಓಡಾಡಿಕೊಂಡಿದ್ದೆ. ಆದ್ರೆ, ನೀನು ಐ ಲವ್​ ಯೂ ಅಂತ ಹೇಳಿದ್​ ಮೇಲೆ, ನನ್​ ಹೃದಯ ಮುದ್ರುಕೊಂಡು ಮೊಲದ ಮರಿ ಥರಾ ಆಗೋಯ್ತು. ಈ ಪ್ರೀತಿ ಗೆಲ್ಸುತ್ತೆ, ಅಳ್ಸುತ್ತೆ, ಸೋಲ್ಸುತ್ತೆ, ಸಾಯ್ಸುತ್ತೆ…’ ಅಂತ ಪ್ರಿಯ ಮುಂದೆ ಕಣ್ಣೀರು ಹಾಕುತ್ತಾನೆ ವಿಷ್ಣು (ಶ್ರೇಯಸ್​). ಮಲೆನಾಡಿನ ಮಡಿಲಲ್ಲಿ ನಡೆಯುವ 90ರ ದಶಕದ ಭಾವತೀವ್ರ ಪ್ರೇಮಕಥೆ “ವಿಷ್ಣುಪ್ರಿಯ’.

Vishnupriya Movie Review; ಮಲೆನಾಡ ಮಳೆಯಲ್ಲಿ ಪ್ರೀತಿಯ ಕಿಚ್ಚು

ಗೆಳೆಯ ಬಾಲು (ನಿಹಾಲ್​) ಪ್ರೀತಿಸುತ್ತಿದ್ದ ಹುಡುಗಿ ಪ್ರಿಯಾ. ಗೆಳೆಯನ ಪರ ಮಾತನಾಡಲು ಹೋಗುವ ವಿಷ್ಣುಗೆ, ಪ್ರಿಯ ಈತನನ್ನೇ ಪ್ರೀತಿಸುತ್ತಿರುವುದು ತಿಳಿಯುತ್ತದೆ. ಕಾಲೇಜು ಹುಡುಗನ ಹುಚ್ಚುಕೋಡಿ ಮನಸ್ಸಿನ ತುಂಬ ಪ್ರಿಯ ತುಂಬಿಕೊಂಡುಬಿಡುತ್ತಾಳೆ. ವಿಷ್ಣು&ಪ್ರಿಯ ವಿಷಯ ಬಾಲುಗೆ ಗೊತ್ತಾಗಿ, ಆತನೂ ಹೇಗಾದರೂ ಇಬ್ಬರನ್ನೂ ದೂರ ಮಾಡಿ, ಪ್ರಿಯಳನ್ನು ಪಡೆಯಬೇಕು ಅಂತ ನಿರ್ಧರಿಸುತ್ತಾನೆ. ಮತ್ತೊಂದೆಡೆ ಕದ್ದು&ಮುಚ್ಚಿ ಭೇಟಿಯಾಗುತ್ತಿದ್ದ ವಿಷ್ಣು&ಪ್ರಿಯ, ಮೊದಲು ಪೊಲೀಸರಿಗೆ ನಂತೆ ಮನೆಯವರಿಗೆ ಸಿಕ್ಕೀಬಿಳುತ್ತಾರೆ. ಮುಂದೆ? ಇಬ್ಬರೂ ಒಂದಾಗುತ್ತಾರಾ? ಇವರ ಪ್ರೀತಿಗೆ ಮನೆಯವರು ಒಪು$್ಪತ್ತಾರಾ? ತಿಳಿಯಲು ಸಿನಿಮಾ ನೋಡಿ.

Vishnupriya Movie Review; ಮಲೆನಾಡ ಮಳೆಯಲ್ಲಿ ಪ್ರೀತಿಯ ಕಿಚ್ಚು
ಫೆಬ್ರವರಿಯಲ್ಲೇ ನೆತ್ತಿಸುಡುವ ಬಿಸಿಲು ಶುರುವಾಗಿದೆ. ಆದರೆ, ಥಿಯೇಟರ್​ ಒಳಗೆ ಮಲೆನಾಡಿದ ಹಸಿರ ಸಿರಿಯ ನಡುವೆ, ಜಿಟಿಜಿಟಿ ಮಳೆಯ ಸಿಂಚನದ ತಣ್ಣನೆಯ ಅನುಭವ ನೀಡುವ “ವಿಷ್ಣುಪ್ರಿಯ’, ಕೊನೆಗೆ ಹೃದಯಬಡಿತ ಹೆಚ್ಚಿಸಿ, ಉಸಿರು ಬಿಸಿಯಾಗಿಸಿ, ಮನಸ್ಸು ಭಾರವಾಗಿಸುತ್ತದೆ. ತೆರೆಯ ಮೇಲೆ 90ನೆಯ ದಶಕವನ್ನು ಸೃಷ್ಟಿಸುವಲ್ಲಿ ಎಡವಟ್ಟುಗಳಾಗಿವೆ. ಅತಿ ಎನಿಸುವ ಕ್ಲೋಸಪ್​ ಶಾಟ್​ಗಳು ಬೇಕಿತ್ತಾ ಎಂಬ ಪ್ರಶ್ನೆ ಮೂಡಿಸುತ್ತವೆ. ಚಿತ್ರದ ಮೊದರ್ಲಧ ನಿಧಾನ, ದ್ವೀತಿಯಾರ್ಧವೇ ಪ್ರಧಾನ. ನಾಯಕ ಶ್ರೇಯಸ್​ ಈ ಚಿತ್ರದಲ್ಲಿ ಮತ್ತಷ್ಟು ಮಾಗಿದ್ದಾರೆ. ೈಟ್​ಗಳಲ್ಲಿ ಅಬ್ಬರಿಸುವ ಅವರು, ನಟನೆಯಲ್ಲೂ ಗಮನ ಸೆಳೆಯುತ್ತಾರೆ. ಪ್ರಿಯ ನೋಡುಗರಿಗೆ ಪ್ರಿಯವಾಗುತ್ತಾರೆ. ಅಚ್ಯುತ್​ ಕುಮಾರ್​, ಸುಚೇಂದ್ರ ಪ್ರಸಾದ್​, ನಿಹಾಲ್​ ಸೇರಿ ಉಳಿದ ತಾರಾಗಣದವರೂ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ವಿನೋದ್​ ಭಾರತಿ ಛಾಯಾಗ್ರಹಣದಲ್ಲಿ ಮಲೆನಾಡು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ. ಮುನಿಸು ಮರೆತು ನಿರ್ಮಾಪಕ ಕೆ. ಮಂಜು ಗಾಯಕ ಸಂಚಿತ್​ ಹೆಗ್ಡೆ ಅವರಿಂದ “ಕ್ಷಣ ಕ್ಷಣ’ ಸಾಂಗ್​ ಹಾಡಿಸಿದ್ದಾರೆ. ಪ್ರೀತಿಸಿದ, ಪ್ರೀತಿಸುವ ಹೃದಯಗಳಿಗೆ “ವಿಷ್ಣುಪ್ರಿಯ’ ಆಪ್ತವಾಗುವುದರಲ್ಲಿ ಸಂದೇಹವಿಲ್ಲ.

 

Share This Article

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…