More

    ಶಿವಕುಮಾರ ಶ್ರೀಗಳ ಜೀವನಾದರ್ಶನದಂತೆ ಶ್ರೀ ಸಿದ್ಧಲಿಂಗಸ್ವಾಮೀಜಿ ಮಾರ್ಗದರ್ಶನದಲ್ಲಿ ಮಠದ ಪರಂಪರೆ ಮುಂದುವರಿಯಲಿ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶಯ

    ತುಮಕೂರು: ದೇಶದಲ್ಲಿ ಸಂಕಷ್ಟದ ಸನ್ನಿವೇಶವಿದ್ದು ಜನರ ಭಯ ತೊಲಗಿಸಲು ಜಗತ್ತಿನಲ್ಲಿ ಸುಖ, ಶಾಂತಿಯಿಂದ ಬದುಕುವ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಶಿವಕುಮಾರ ಶ್ರೀಗಳಂತ ಸಂತ ಮಹಂತರ ಆಶಿರ್ವಾದವಿರಲಿ ಎಂದು ಸುತ್ತೂರುಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶಯವ್ಯಕ್ತಪಡಿಸಿದರು.

    ಶಿವಕುಮಾರ ಶ್ರೀಗಳ ಮಾರ್ಗದರ್ಶನದಲ್ಲಿ ಮಠದ ಪರಂಪರೆ ನಡೆದುಕೊಂಡು ಸಾಗಲಿ. ಶ್ರೀ ಸಿದ್ಧಲಿಂಗಸ್ವಾಮೀಜಿ ಸಮಾಜಕ್ಕೆ ಮಾರ್ಗದರ್ಶನ ಮುಂದುವರಿಸಲಿ ಎಂದರು.
    ಪೂಜ್ಯ ಶ್ರೀಶಿವಕುಮಾರ ಸ್ವಾಮೀಜಿ ಭೌತಿಕವಾಗಿ ನಮ್ಮಿಂದ ಮರೆಯಾಗಿದ್ದರೂ ಮಠದಲ್ಲಿ ಅವರಿಲ್ಲ ಎಂಬ ಭಾವನೆ ನಮಗಿಲ್ಲ. ಮಠದ ಇತಿಹಾಸದಲ್ಲಿ ಶಾಶ್ವತವಾಗಿ ನಿಲ್ಲುವ ಅಪೂರ್ವ ವ್ಯಕ್ತಿತ್ವ ಹೊಂದಿದ್ದವರು ಎಂದು ಬಣ್ಣಿಸಿದರು.

    ಬದುಕಿದ 112 ವರ್ಷದಲ್ಲಿ ಯಾವ ಕ್ಷಣವನ್ನು ಲೋಪವಾಗಲು ಬಿಟ್ಟಿಲ್ಲ. ಗಂಧದ ಕೊರಡಿನಂತೆ ಇಡೀ ಜೀವನ ಸವೆಸಿ ನಾಡಿಗೆ ಮಾರ್ಗದರ್ಶನ ನೀಡಿದವರು ಶ್ರೀಗಳು. ಗಡಿಯಾರದಂತೆ ಜೀವನ ಸವೆಸಿದವರು ಸ್ವಾಮೀಜಿ. ಮಠದ ಅಧಿಪತಿಗಳಾಗಿ, ಪರಂಪರೆಗೆ ಕೀರ್ತಿಪ್ರಾಯರಾಗಿ ಸಂಪ್ರದಾಯ ಆಧುನೀಕತೆ ಮೈಗೂಡಿಸಿಕೊಂಡವರು ಎಂದರು.
    ಆಧುನಿಕ ವಿಷಯ ಒಪ್ಪಿಕೊಳ್ಳುವ ಹೃದಯ ಶ್ರೀಮಂತಿಕೆ ಹೊಂದಿದ್ದರು. ದೇಶದ ಅಭಿವೃದ್ಧಿಯ ಬಗ್ಗೆ ಕನಸು ಕಂಡಿದ್ದರು. ಸ್ವತಂತ್ರ ಭಾರತದ ಕಲ್ಪನೆಯನ್ನು ಕಂಡಿದ್ದರು, ರಾಷ್ಟ್ರ ಭಕ್ತಿಯನ್ನು ಜನರಿಗೆ ಬಿತ್ತಿದವರು. ಸಾವಿರಾರು ಜನಕ್ಕೆ ಏಕಕಾಲಕ್ಕೆ ಪ್ರಸಾದ ನೀಡಿದ ಸ್ವಾಮೀಜಿ ಅವರು ಪ್ರಸಾದವನ್ನು ಆಕ್ಷಣದ ಹೊಟ್ಟೆ ತುಂಬಿಸಿಕೊಳ್ಳಲು ಬಳಸದೇ ಜೀವನ ರೂಪಿಸಿಕೊಳ್ಳುವ ಪಾಠವಾದರು ಎಂದರು.

    ಕಾವಿ ಲಾಂಛನವಾಗಿಸಿಕೊಂಡು ಮಾದರಿಯಾಗಿ ಬದುಕಿ ತೋರಿಸಿದವರು ಸ್ವಾಮೀಜಿ. ನೆನೆದವರ ಮನದಲ್ಲಿ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ. ಸ್ವಾಮೀಜಿ ಕನಸಿನ ರಾಷ್ಟ್ರ, ಸಮಾಜದ ನಿರ್ಮಾಣದ ಕೆಲಸವಾಗಬೇಕು ಎಂದು ಸುತ್ತೂರುಶ್ರೀಗಳು ಅಭಿಪ್ರಾಯಪಟ್ಟರು.

    ನೋವು ನೆನಪು: ನುಡಿದಂತೆ ನಡೆದವರು, ಆಚಾರದಲ್ಲಿ ಬಸವಣ್ಣನ ಅನುಯಾಯಿ ಅಂತಿದ್ದರೆ ಅದು ಡಾ.ಶಿವಕುಮಾರಸ್ವಾಮೀಜಿಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
    ಜಾತಿ, ಧರ್ಮ ಮೀರಿ ಸಂಸ್ಕಾರವನ್ನು ಶ್ರೀಗಳು ಕಲಿಸಿಕೊಟ್ಟಿದ್ದಾರೆ. ಅಯಸ್ಕಾಂತದ ಜತೆ ಕಬ್ಬಿಣದ ಒಡನಾಟದಂತೆ ನಾವು ಇದ್ದೆವು. ಡಾ.ಶಿವಕುಮಾರ ಸ್ವಾಮೀಜಿ ನಮ್ಮಿಂದ ಎಂದೂ ದೂರವಾಗಿಲ್ಲ, ,ನಮೆಲ್ಲಾ ಒಳ್ಳೆಯ ಕೆಲಸಕ್ಕೆ ಅವರ ಆಶೀರ್ವಾದ ಇರುತ್ತದೆ. ನಮ್ಮ ನೋವನ್ನು ಹೇಳಿಕೊಳ್ಳಲು ಸ್ವಾಮೀಜಿ ಇದ್ದರು ಈಗ ಇಲ್ಲ ಎಂಬ ನೋವು ಇದೆ. ಜಿಲ್ಲೆ ಇನ್ನೂ ನೂರು ವರ್ಷಗಳ ಶ್ರೀಗಳ ಹೆಸರನ್ನು ಹೇಳಿಕೊಳ್ಳಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts