ಧರೆ ಹತ್ತಿ ಉರಿದೆಡೆ ನಿಲ್ಲುವುದೇ

ವಿಜಯವಾಣಿ ಸುದ್ದಿಜಾಲ ಹರಪನಹಳ್ಳಿ
ಒಲೆ ಹತ್ತಿ ಉರಿದಡೆ ನಿಲಬಹುದು, ಧರೆ ಹತ್ತಿ ಉರಿದೆಡೆ ನಿಲ್ಲುವುದೇ ಎಂದು 12ನೇ ಶತಮಾನದಲ್ಲಿ ಬಸವಣ್ಣ ಪ್ರಕೃತಿ ವಿಕೋಪದ ಬಗ್ಗೆ ದೂರದೃಷ್ಟಿ ಹೊಂದಿದ್ದರು ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಡಗ್ಗಿಬಸಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕೊಡಗು, ಮಡಿಕೇರಿ ಮತ್ತು ಕೇರಳ ಪ್ರಕೃತಿಯ ಸೊಬಗು ಮೈದುಂಬಿಕೊಂಡು ಬೀಗುತ್ತಿದ್ದವು. ಆದರೆ, ಇಂದು ಅದೇ ಜನ ಯಾಕಾದರೂ ಆ ಸ್ಥಳದಲ್ಲಿ ಹುಟ್ಟಿದ್ದೇವೆ ಎನ್ನುವ ಬೇಸರ ತಳಿದಿದ್ದಾರೆ. ನೆರೆಹಾವಳಿಯ ಭಾರಿ ಅನಾಹುತಕ್ಕೆ ಮನುಷ್ಯನ ದುರಾಸೆಯೇ ಕಾರಣ ಎಂದು ಹೇಳಿದರು.
ಭೂತಾಯಿಯ ಸಹನೆಯ ಕಟ್ಟೆ ಒಡೆದು ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಸುನಾಮಿ ರೂಪದಲ್ಲಿ ಹೊರಬರುತ್ತಿದೆ. ಈಗಲಾದರೂ ಮನುಷ್ಯ ತಪ್ಪು ತಿದ್ದಿಕೊಳ್ಳದಿದ್ದರೆ ಅಪಾಯ ಹೆಚ್ಚಾಗುತ್ತದೆ. ದೇಶದಲ್ಲಿ ಅರಣ್ಯ ಸಂಪತ್ತು ನಾಶ ಕಾಯ್ದೆ ಬಿಗಿಗೊಳಿಸಬೇಕು ಎಂದರು.