ಲಕ್ಷ್ಮೇಶ್ವರ: ಪಟ್ಟಣದ ಅಕ್ಕಾಮಹಾದೇವಿ ದೇವಸ್ಥಾನದಲ್ಲಿ ಪೂಜ್ಯ ಶ್ರೀ ಸಿದ್ಧೇಶ್ವರ ಸತ್ಸಂಗ ಬಳಗ, ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ, ಅಕ್ಕಮಹಾದೇವಿ ಬಳಗ, ಪ್ರೇಮಕ್ಕ ಅಭಿಮಾನಿ ಬಳಗ ಸಹಯೋಗದಲ್ಲಿ 19ನೇ ವರ್ಷದ ಶ್ರಾವಣ ಸಂಜೆ ಕಾರ್ಯಕ್ರಮ ಆ. 5ರಿಂದ ಸೆ. 3 ರವರೆಗೆ ನಡೆಯಲಿದೆ ಎಂದು ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ ಮತ್ತು ಹಿರಿಯ ಸಾಹಿತಿ ಲಲಿತಕ್ಕ ಕೆರಿಮನಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶ್ರಾವಣ ಮಾಸದ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾಹಿತಿ ನೀಡಿದರು.
ಆ. 5ರಂದು ಸಂಜೆ 6 ಗಂಟೆಗೆ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಹೂವಿನಶಿಗ್ಲಿಯ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾಗರಾಜ ಅರಳಿ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಚಂದ್ರಣ್ಣ ಮಹಾಜನಶೆಟ್ಟರ, ಡಾ.ಪರಶುರಾಮ ಬಾರ್ಕಿ, ಡಾ.ಶಿವಾನಂದ ಹೂವಿನ, ಎಲ್.ಎಸ್. ಅರಳಹಳ್ಳಿ, ನಿರ್ಮಲಾ ಅರಳಿ ಉಪಸ್ಥಿತರಿರುವರು ಎಂದರು.
ಸೆ. 3ರಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ನಿತ್ಯ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಶರಣರು, ಸಾಹಿತಿಗಳು, ಸಾಮಾಜಿ ಚಿಂತಕರು, ಸಂಪನ್ಮೂಲ ವ್ಯಕ್ತಿಗಳು, ಉಪನ್ಯಾಸಕರು ವಿಷಯ ಮಂಡನೆ ಮಾಡಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಕದಳಿ ಮಹಿಳಾ ವೇದಿಕೆಯ ಕಾರ್ಯದರ್ಶಿ ರತ್ನಾ ಕರ್ಕಿ, ಮಹಿಳಾ ಬಳಗದ ಸದಸ್ಯರಾದ ಅಶ್ವಿನಿ ಅಂಕಲಕೋಟಿ, ಪ್ರತಿಮಾ ಮಹಾಜನಶೆಟ್ಟರ, ವಿನುತಾ ಅರಳಿ, ಲತಾ ತಟ್ಟಿ, ಕಾಂಚನಾ ಹಸರಡ್ಡಿ, ಕವಿತಾ ಅರಳಹಳ್ಳಿ, ರೇಖಾ ವಡಕಣ್ಣನವರ, ಗಂಗಾಧರ ಅರಳಿ, ಶೈಲಾ ಆದಿ, ಶಕುಂತಲಾ ವಡಕಣ್ಣವರ, ಜಯಶ್ರೀ ಮತ್ತಿಗಟ್ಟಿ, ಎಂ.ಕೆ. ಕಳ್ಳಿಮಠ, ಬಸವರಾಜ ಬೆಂಡಿಗೇರಿ, ಪಾರ್ವತಿ ಕಳ್ಳಿಮಠ, ಶೋಭಾ ಗಾಂಜಿ, ಶಾರದಾ ಬಟಗುರ್ಕಿ, ವಿಜಯ ಹುಬ್ಬಳ್ಳಿ, ಇತರರಿದ್ದರು.