More

    ದೀಪಿಕಾ ಸ್ಥಾನಕ್ಕೆ ಶ್ರದ್ಧಾ: ರಣಬೀರ್ ಜತೆ ಮೊದಲ ಸಿನಿಮಾ

    ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಮುಂದಿನ ಚಿತ್ರದಲ್ಲಿ ‘ಸಾಹೋ’ ಬೆಡಗಿ ಶ್ರದ್ಧಾ ಕಪೂರ್ ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಅವರು ಮೊದಲ ಬಾರಿಗೆ ರಣಬೀರ್ ಜತೆ ಪರದೆ ಹಂಚಿಕೊಳ್ಳಲಿದ್ದಾರೆ.

    ಈ ಸಿನಿಮಾಗೆ ನಿರ್ದೇಶಕ ಲವ್ ರಂಜನ್ ಆಕ್ಷನ್-ಕಟ್ ಹೇಳುತ್ತಿದ್ದು, ಚಿತ್ರದ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಈ ಚಿತ್ರದಲ್ಲಿ ಮುಂಚೆ ರಣಬೀರ್ ಕಪೂರ್​ಗೆ ಜತೆಯಾಗಿ ದೀಪಿಕಾ ಪಡುಕೋಣೆ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು. ‘ತಮಾಷಾ’ ಚಿತ್ರದ ಬಳಿಕ ಈ ಜೋಡಿ ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳಲಿದೆ ಎಂಬ ಸುದ್ದಿ ಇಬ್ಬರ ಅಭಿಮಾನಿಗಳಲ್ಲಿ ಸಂತಸ ಕೂಡ ಮೂಡಿಸಿತ್ತು. ಆದರೆ, ಸದ್ಯ ಬೇರೆ ಚಿತ್ರಗಳಲ್ಲಿ ಬಿಜಿ ಆಗಿರುವುದರಿಂದ ದೀಪಿಕಾ ಪಡುಕೋಣೆ ಈ ಸಿನಿಮಾದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ದೀಪಿಕಾ ಅಭಿನಯಿಸಬೇಕಿದ್ದ ಪಾತ್ರ ಇದೀಗ ಶ್ರದ್ಧಾ ಕಪೂರ್ ಪಾಲಾಗಿದ್ದು, ಲವ್ ಆಂಡ್ ರೊಮ್ಯಾಂಟಿಕ್ ಕಥೆ ಹೊಂದಿರುವ ಈ ಚಿತ್ರದಲ್ಲಿ ರಣಬೀರ್ ಜತೆ ರೊಮ್ಯಾನ್ಸ್ ಮಾಡಲಿ ದ್ದಾರಂತೆ. ಈ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿರುವ ಬಗ್ಗೆ ಸಂತಸ ಹಂಚಿಕೊಂಡಿ ರುವ ಶ್ರದ್ಧಾ, ‘ರಣಬೀರ್ ಕಪೂರ್ ಜತೆ ಸಿನಿಮಾ ಮಾಡಲು ಉತ್ಸುಕಳಾ ಗಿದ್ದೇನೆ’ ಎಂದಿದ್ದಾರೆ.

    ನಟಿ ಶ್ರದ್ಧಾ ಕಪೂರ್ ಸದ್ಯ ಟೈಗರ್ ಶ್ರಾಫ್ ನಟನೆಯ ‘ಭಾಗಿ 3’ ಚಿತ್ರದ ಶೂಟಿಂಗ್​ನಲ್ಲಿ ಬಿಜಿ ಆಗಿದ್ದು, ವರುಣ್ ಧವನ್​ಗೆ ಜೋಡಿ ಆಗಿ ಅಭಿನಯಿಸಿರುವ ‘ಸ್ಟ್ರೀಟ್ ಡಾನ್ಸರ್ 3ಡಿ’ ಚಿತ್ರ ಜ.24ರಂದು ಬಿಡುಗಡೆ ಆಗಲಿದೆ. ನಟ ರಣಬೀರ್ ಕಪೂರ್ ಕೂಡ ಎರಡು ಚಿತ್ರಗಳ ಶೂಟಿಂಗ್​ನಲ್ಲಿ ಸಕ್ರಿಯರಾಗಿದ್ದಾರೆ. ಕರಣ್ ಮಲ್ಹೋತ್ರಾ ನಿರ್ದೇಶನದ ‘ಷಂಷೀರಾ’ ಹಾಗೂ ಅಜಯ್ ಮುಖರ್ಜಿ ಆಕ್ಷನ್-ಕಟ್ ಹೇಳಿರುವ, ಹಿರಿಯ ನಟ ಅಮಿತಾಭ್ ಬಚ್ಚನ್ ಸೇರಿ ಬಹುದೊಡ್ಡ ತಾರಾಬಳಗದ ‘ಬ್ರಹ್ಮಾಸ್ತ್ರ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿ ಕೊಂಡಿದ್ದಾರೆ. ಇದೀಗ ರಣಬೀರ್ ಕಪೂರ್-ಶ್ರದ್ಧಾ ಜತೆ ಆಗಿರುವ ಸಿನಿಮಾದ ಚಿತ್ರೀಕರಣ ಮಾರ್ಚ್​ನಲ್ಲಿ ಆರಂಭವಾಗುತ್ತದೆ ಎನ್ನಲಾಗಿದೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts