ಶ್ರದ್ಧಾ ಭಕ್ತಿಯ ಸ್ವಯಂವರ ಪಾರ್ವತಿ ಯಾಗ ಸಂಪನ್ನ

Latest News

ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ರಾಜ್ಯ ಬಿಜೆಪಿ ಸರ್ಕಾರ ಅಗೌರವ ತೋರಿದೆ ಎಂದು ಆರೋಪಿಸಿ ಚಂದಕವಾಡಿ ಹೋಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದ ವತಿಯಿಂದ ಭಾನುವಾರ...

ಪಕ್ಷಾಂತರಿಗಳ ವಿರುದ್ಧ ಆಕ್ರೋಶ

ಮೈಸೂರು: ಪಕ್ಷಾಂತರಿಗಳ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ರೈಲ್ವೆ ನಿಲ್ದಾಣದ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು. ಪಕ್ಷಾಂತರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು...

ನಗರದಲ್ಲಿ ಪೊರಕೆ ಹಿಡಿದು ಪ್ರತಿಭಟನೆ

Whispers and protests in the city ಚಾಮರಾಜನಗರ: ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ಶಿಕ್ಷಣ ಇಲಾಖೆಯು...

ಸುಪ್ರೀಂ ಕೋರ್ಟ್​ ನ್ಯಾಯಾಧೀಶ ಎಸ್​​. ಅಬ್ದುಲ್ ನಜೀರ್ ಅವರಿಗೆ Z ಕೆಟಗರಿ ಭದ್ರತೆ

ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ತೀರ್ಪು ನೀಡಿದ ಪೀಠದಲ್ಲಿದ್ದ ನ್ಯಾಯಾಧೀಶ ಎಸ್​​.ಅಬ್ದುಲ್ ನಜೀರ್​ ಅವರಿಗೆ "Z" ಕೆಟಗರಿ ಭದ್ರತೆ ನೀಡಲು ಕೇಂದ್ರ ಸರ್ಕಾರ...

ಸಂಘಗಳಿಗೆ ಸಾಲ ಪ್ರಮಾಣ ಕಡಿತ

ಶೃಂಗೇರಿ: ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಶೇ.22ರಷ್ಟು ರೈತರು ಸಾಲ ಸೌಲಭ್ಯ ಪಡೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ದಿಕ್ಕಿನಲ್ಲಿ ಆಲೋಚಿಸಿ...

ವಿಜಯವಾಣಿ ಸುದ್ದಿಜಾಲ ಕಲಬುರಗಿ
ವಿವಾಹ ಕಾರ್ಯಕ್ಕೆ ತೊಡಕಾಗುವ ಕಂಟಕ ನಿವಾರಿಸಿ, ಕಂಕಣಬಲ ತಂದುಕೊಡುವ `ಸ್ವಯಂವರ ಪಾರ್ವತಿ ಯಾಗ’ ನಗರದ ಖೂಬಾ ಪ್ಲಾಟ್ನಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಪಂಡಿತರ ಮಂತ್ರಘೋಷ ಹಾಗೂ ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿತು.

ವಿಜಯವಾಣಿ, ದಿಗ್ವಿಜಯ 24×7 ನ್ಯೂಸ್ ಮತ್ತು ಕನ್ನಡ ಮ್ಯಾಟ್ರಿಮೋನಿ ಸಹಯೋಗದಡಿ ನಾಡಿನ ವಿವಿಧೆಡೆ ಈ ಯಾಗ ಆಯೋಜಿಸಲಾಗುತ್ತಿದ್ದು, ಕಲಬುರಗಿಯಲ್ಲಿ ನಡೆದದ್ದು 8ನೇ ಸ್ವಯಂವರ ಪಾರ್ವತಿ ಯಾಗ ಆಗಿದೆ. ಕಲಬುರಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ವಿವಿಧೆಡೆಯಿಂದ ಆಗಮಿಸಿದ ಭಾವಿ ವಧು-ವರರು ಹಾಗೂ ಪಾಲಕರು ಸಂಕಲ್ಪ ಕೈಗೊಂಡರು.

ಬೆಳಗ್ಗೆ 9ರಿಂದ ಗಂಗೋತ್ರಿ ವೇದಪಾಠ ಶಾಲೆ ಸಂಸ್ಥಾಪಕ ವೇದಮೂರ್ತಿ ಮೋಹನಭಟ್ಟ ಜೋಶಿ ನೇತೃತ್ವದಲ್ಲಿ ಪಾರ್ವತಿ ಮತ್ತು ಪರಮೇಶ್ವರರ ಯಾಗದ ವಿಧಿ ವಿಧಾನ ನೆರವೇರಿತು. ಗಣಪತಿ ಪೂಜೆ ಬಳಿಕ ಮಹಾ ಸಂಕಲ್ಪ ಕೈಗೊಳ್ಳಲಾಯಿತು. ಪುಣ್ಯಾಹವಾಚನ, ಹೃತ್ತಿಕ್ವರ್ಣಿಕ, ಪಾರ್ವತಿ ದೇವಿಯ ಆಹ್ವಾನ, ಪರಿವಾರ ದೇವತೆಗಳ ಆಹ್ವಾನ, ನವಗ್ರಹ ಮಂಡಲ ಪೂಜೆ ನಂತರ ಆಯಾ ದೇವತೆಗಳಿಗೆ ಹವಿಸ್ಸು ಅರ್ಪಿಸಿ ಸ್ವಯಂವರ ಪಾರ್ವತಿ ಹೋಮದ ನಂತರ ಪೂರ್ಣಾಹುತಿ ನೀಡಿ ಫಲಪ್ರಸಾದ ವಿತರಿಸಲಾಯಿತು.

ಮೂರು ಗಂಟೆಗೂ ಹೆಚ್ಚು ನಡೆದ ಹೋಮದ ಪ್ರಕ್ರಿಯೆ ಸಂದರ್ಭದಲ್ಲಿ ಸಂಕಲ್ಪ ಕೈಗೊಂಡ ಎಲ್ಲರೂ ಭಗವಂತನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಾರ್ವತಿ ಯಾಗದ ಮಂತ್ರ ಮಠನದೊಂದಿಗೆ ಕಲ್ಯಾಣ ಕಾರ್ಯಕ್ಕೆ ಎದುರಾಗಿರುವ ದೋಷಗಳೆಲ್ಲವೂ ಹೋಮದ ಅಗ್ನಿಯಲ್ಲಿ ದಹಿಸಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದರು.

ಪಾರ್ವತಿ ಪರಮೇಶ್ವರರ ಅನುಗ್ರಹಕ್ಕೆ 108 ದ್ರವ್ಯದ ಪೂರ್ಣಾಹುತಿ, ವಸ್ತ್ರಾಹುತಿ, ಮಹಾ ಪೂರ್ಣಾಹುತಿ ಹಾಗೂ ಮಂಗಳಾರತಿ ಮಾಡಿ ಪ್ರಸಾದ ವಿತರಿಸಲಾಯಿತು.

ಯಾಗವಿಧಿ ಶುರುವಾಗುವ ಮುನ್ನ ಗಂಗೋತ್ರಿ ವೇದಪಾಠ ಶಾಲೆ ಆಚಾರ್ಯರಾದ ಡಾ.ಯೋಗೇಶ ಮೋಹನಭಟ್ಟ ಜೋಶಿ ಅವರು, ಸ್ವಯಂವರ ಮಂತ್ರದಿಂದ ಪಾರ್ವತಿಯು ಪರಮೇಶ್ವರನನ್ನು ಒಲಿಸಿಕೊಂಡ ಪರಿಯನ್ನು ವಿವರಿಸಿದರು. ಈ ಯಾಗದಿಂದ ಸೌಭಾಗ್ಯ, ಸಂತಾನ, ಕಲ್ಯಾಣಾಭಿವೃದ್ಧಿ, ಅನ್ಯ ಕಾರಣಗಳಿಂದ ಕಾರ್ಯ ವಿಳಂಬಕ್ಕೆ ಪರಿಹಾರ ಲಭಿಸುತ್ತದೆ ಎಂದು ಹೇಳಿದರು.

ಯಾಗದ ಉಸ್ತುವಾರಿಯನ್ನು ವಿಜಯಾಣಿ ಸ್ಥಾನಿಕ ಸಂಪಾದಕ ವಾದಿರಾಜ ವ್ಯಾಸಮುದ್ರ ವಹಿಸಿದ್ದರು. ಕನ್ನಡ ಮ್ಯಾಟ್ರಿಮೋನಿ ಪ್ರಧಾನ ವ್ಯವಸ್ಥಾಪಕ ಕಮಲ್ಕುಮಾರ್ ರಂಗನಾಥನ್, ವಿಭಾಗೀಯ ವ್ಯವಸ್ಥಾಪಕ ಪ್ರಶಾಂತ ಮಹಾಡಿಕರ್ ಉಪಸ್ಥಿತರಿದ್ದರು.

ತ್ವರಿತ ಫಲಪ್ರಾಪ್ತಿ: ಸ್ವಯಂವರ ಪಾರ್ವತಿ ಯಾಗದಲ್ಲಿ ಭಾಗವಹಿಸಿದ ಎಲ್ಲರಿಗೂ ತೆಂಗು, ಹೂ, ಹಣ್ಣು ಪ್ರಸಾದ ರೂಪದಲ್ಲಿ ನೀಡಲಾಯಿತು. ಪ್ರತಿನಿತ್ಯ ದೇವರಿಗೆ ತುಪ್ಪದ ದೀಪ ಹಚ್ಚಿ 21 ಬಾರಿ ಸ್ವಯಂವರ ಮಂತ್ರಿ ಪಠಿಸಿದರೆ ನವಗ್ರಹ ದೋಷ ನಾಶವಾಗುತ್ತದೆ. ತೆಂಗನ್ನು ಮನೆಯಲ್ಲಿಟ್ಟು ನಂತರ ಬಳಸಲು ಹೇಳಲಾಯಿತು. ಈ ಯಾಗದಲ್ಲಿ ಸಂಕಲ್ಪ ಮಾಡಿದ ಬಹುತೇಕರಿಗೆ ಅಲ್ಪಾವಧಿಯಲ್ಲೇ ಫಲ ಸಿಕ್ಕಿದೆ. ಶ್ರದ್ಧೆ ಮತ್ತು ಭಕ್ತಿಯಿಂದ ಪ್ರಾರ್ಥಿಸಿದವರಿಗೆ ಕಲ್ಯಾಣ ಯೋಗ ಖಚಿತ ಎಂದು ವೇದಮೂರ್ತಿ ಮೋಹನಭಟ್ಟ ಜೋಶಿ ಹೇಳಿದರು.

322 ನೋಂದಣಿ: ಸ್ವಯಂವರ ಪಾರ್ವತಿ ಯಾಗದಲ್ಲಿ 322 ವಧು-ವರರ ಪರವಾಗಿ ನೋಂದಣಿ ಮಾಡಿಸಲಾಗಿದೆ. ಇವರಲ್ಲಿ 6ಜನರು ಸ್ಥಳದಲ್ಲೇ ನಗದು ನೀಡಿ ಆನ್ಲೈನ್ ಬುಕಿಂಗ್ ಮಾಡಿದ್ದಾರೆ ಎಂದು ಕನ್ನಡ ಮ್ಯಾಟ್ರಿಮೋನಿ.ಕಾಮ್ ಏರಿಯಾ ಮ್ಯಾನೇಜರ್ ಪ್ರಶಾಂತ ಮಹಾಡಿಕರ್ ತಿಳಿಸಿದರು.

ನಾನು ವೈದ್ಯಕೀಯ ಪದವೀಧರೆಯಾಗಿದ್ದು, ಎಂ.ಡಿ. ಪದವಿ ಮುಗಿದಿದೆ. ವಿವಾಹ ಅಪೇಕ್ಷಿತಳಾಗಿ ಪಾರ್ವತಿ ಯಾಗದಲ್ಲಿ ನೋಂದಣಿ ಮಾಡಿಸಿದ್ದೇನೆ. ಶುಭವಾಗುವ ಭರವಸೆಯಿದೆ.
| ಸಹನಾ ಬಸವರಾಜ ಕಲಬುರಗಿ

ವೈದ್ಯಕೀಯ ಸ್ನಾತಕೋತ್ತರ ಪದವಿ ಪೂರೈಸಿ, ಸ್ವಯಂ ವೃತ್ತಿ ಕೈಗೊಳ್ಳುವ ಉದ್ದೇಶವಿರುವ ನನಗೆ ಅನುರೂಪಳಾದ ವಧು ಸಿಗಲಿ ಎಂದು ವಿಜಯವಾಣಿ ಆಯೋಜಿಸಿದ ಈ ಯಾಗದಲ್ಲಿ ನನ್ನ ತಂದೆ ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಬಸವರಾಜ ಕಲಬುರಗಿ ಭಾಗವಹಿಸಿದ್ದಾರೆ.
| ಸೂರಜ್ ಬಿ. ಕಲಬುರಗಿ

ನಾವೇ ನೇರವಾಗಿ ಯಾಗ ಮಾಡಿಸಬೇಕಾದರೆ ತುಂಬ ಹಣ ಖರ್ಚಾಗುತ್ತದೆ. ಪತ್ರಿಕೆಯವರೇ ಆಯೋಜನೆ ಮಾಡಿದ್ದರಿಂದ ಬಹಳ ಖುಷಿಯಾಗಿದೆ. ನನ್ನ ತಂಗಿಗೆ ವರ ಸಿಗುವುದೆಂಬ ನಂಬಿಕೆ, ವಿಶ್ವಾಸ ಮೂಡಿದೆ. ವಿಜಯವಾಣಿ ಮತ್ತು ದಿಗ್ವಿಜಯ ಚಾನಲ್ನವರು ಸಾರ್ವಜನಿಕ ಹಿತಾಸಕ್ತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಇಂಥ ಈ ಪುಣ್ಯದ ಕಾರ್ಯ ಮಾಡಿದ್ದು ಸಂತೋಷ ತಂದಿದೆ.
| ಡಾ.ಪ್ರಿಯದರ್ಶಿನಿ ಚಿಂಚನಸೂರ ಕನ್ನಡ ಉಪನ್ಯಾಸಕಿ

ಪಾರ್ವತಿ ಸ್ವಯಂವರ ಯಾಗ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ಬಂದಿರುವ ಎಲ್ಲರಿಗೂ ಒಳ್ಳೆಯದಾಗಬೇಕು ಎಂಬ ವಿಶಾಲ ದೃಷ್ಟಿಕೋನ ಪ್ರಶಂಸನೀಯ.
| ಗೀತಾ ರಾಜು ವಾಡೇಕರ್ ಪಾಲಿಕೆ ಸದಸ್ಯೆ ಕಲಬುರಗಿ

ದಿಗ್ವಿಜಯ ಟಿವಿಯಲ್ಲಿ ವಿಷಯ ತಿಳಿದು ಬಂದಿದ್ದೇವೆ. 2018ರ ವಿದಾಯ ಮತ್ತು 2019ರ ಸ್ವಾಗತದ ಈ ತಿಂಗಳಲ್ಲಿ ಜರುಗಿದ ಈ ಯಾಗದಲ್ಲಿ ಭಾಗವಹಿಸಿದ ಎಲ್ಲರಿಗೂ ಮುಂದಿನ ವರ್ಷದಲ್ಲಿ ಶುಭವಾಗಲಿದೆ ಎಂಬ ನಂಬಿಕೆ ಮೂಡಿದೆ.
| ರತ್ನಾಕರ ಸರಾಫ್ ಚಿತ್ತಾಪುರ

ನಾನು ವಿವಾಹ ಅಪೇಕ್ಷಿಯಾಗಿದ್ದು, ಪಾರ್ವತಿ ಯಾಗದಲ್ಲಿ ಭಾಗವಹಿಸಿದರೆ ಶೀಘ್ರ ಫಲ ಪ್ರಾಪ್ತಿಯಾಗುವ ಭರವಸೆಯಿಂದ ಬಂದಿದ್ದೆ. ತುಂಬ ಅಚ್ಚುಕಟ್ಟಾಗಿ ಕಾರ್ಯಕ್ರಮ ಏರ್ಪಡಿಸಿದ್ದು ಖುಷಿ ಕೊಟ್ಟಿದೆ.
| ಜಯತೀರ್ಥ ದೇಸಾಯಿ ಕಲಬುರಗಿ

- Advertisement -

Stay connected

278,541FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....