More

    19ನೇ ಆವೃತ್ತಿಯ ಏಷ್ಯನ್ ಕ್ರೀಡಾಹಬ್ಬಕ್ಕೆ ಅಧಿಕೃತ ಚಾಲನೆ: ಮಾಯಾಲೋಕ ಸೃಷ್ಟಿಸಿದ ಆತಿಥೇಯ ಚೀನಾ

    ಹಾಂಗ್‌ರೆೌ: ಆಧುನಿಕ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳೊಂದಿಗೆ ಆತಿಥೇಯ ಚೀನಾ ಹೊಸ ಮಾಯಾಲೋಕವನ್ನೇ ಸೃಷ್ಟಿಸುವುದರೊಂದಿಗೆ 19ನೇ ಆವೃತ್ತಿಯ ಏಷ್ಯನ್ ಕ್ರೀಡಾಕೂಟ, ಬೃಹತ್ ಕಮಲದ ಆಕಾರದ ಒಲಿಂಪಿಕ್ ಸ್ಪೋರ್ಟ್ಸ್ ಎಕ್ಸ್‌ಪೋ ಸೆಂಟರ್‌ನಲ್ಲಿ ಶನಿವಾರ ವರ್ಣರಂಜಿತ ಆರಂಭ ಕಂಡಿತು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ‘ಆಟಗಳು ತೆರೆದಿವೆ’ ಎಂದು ೋಷಿಸುವ ಮೂಲಕ 16 ದಿನಗಳ ಕ್ರೀಡಾಹಬ್ಬಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

    https://x.com/SonySportsNetwk/status/1705573085947260928?s=20


    ಸಮಾರಂಭಕ್ಕೆ ಸಾಕ್ಷಿಯಾದ ಏಷ್ಯನ್ ಒಲಿಂಪಿಕ್ಸ್ ಕೌನ್ಸಿಲ್‌ನ ಹಂಗಾಮಿ ಅಧ್ಯಕ್ಷ (ಒಸಿಎ) ರಣಧೀರ್ ಸಿಂಗ್ ಮಾತನಾಡಿ, ಕ್ರೀಡಾಕೂಟದ ಆಯೋಜನೆಗೆ ಹೆಮ್ಮೆ ಎನಿಸಿದ್ದು, ‘ಹೃದಯದಿಂದ ಹೃದಯದ ಭವಿಷ್ಯ’ ಎಂಬುದು ಕೇವಲ ಏಷ್ಯಾಡ್‌ನ ೋಷವಾಕ್ಯವಾಗಿಲ್ಲ, ಬದಲಾಗಿ ಭವಿಷ್ಯವೂ ಆಗಿದೆ ಎಂದರು. ಇಂಗಾಲ ಮುಕ್ತ ಮತ್ತು ಹಸಿರು ಏಷ್ಯಾಡ್ ಧ್ಯೇಯದೊಂದಿಗೆ ಎರಡು ಗಂಟೆಗೂ ಅಧಿಕ ಕಾಲ ನಡೆದ ಸಮಾರಂಭದಲ್ಲಿ ತಂತ್ರಜ್ಞಾನದ ಬಳಕೆಯೊಂದಿಗೆ ನೈಜ ಸುಡುಮದ್ದು ಪ್ರದರ್ಶನದಂತೆ ಭಾಸವಾಗುವಂತೆ ಡಿಜಿಟಲ್ ಪಟಾಕಿಗಳನ್ನು ಸಿಡಿಸಲಾಯಿತು. ಹಾಂಗ್‌ರೆೌನಲ್ಲಿ ಹರಿಯುವ ಕ್ಸಿಯಾನ್‌ಟಾಂಗ್ ನದಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ನೀರಿನ ಸಂರಕ್ಷಣಾ ಸಂದೇಶಗಳನ್ನೂ ಸಮಾರಂಭದಲ್ಲಿ ಪ್ರಮುಖವಾಗಿ ಸಾರಲಾಯಿತು.

    https://x.com/19thAGofficial/status/1705585789403627563?s=20


    80 ಸಾವಿರ ಆಸನ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆಧುನಿಕ ತಂತ್ರಜ್ಞಾನಗಳ ಆಕರ್ಷನ ಪ್ರದರ್ಶನ ಮೈನವಿರೇಳಿಸಿತು. 3ಡಿ ಡ್ಯುಯೆಲ್ ಏರಿಯಲ್ ತಂತ್ರಜ್ಞಾನವನ್ನು ಮೊದಲ ಬಾರಿಗೆ ಪ್ರಮುಖ ಕ್ರೀಡಾಂಗಣವೊಂದರಲ್ಲಿ ಬಳಸಲಾಯಿತು. ಎಲ್‌ಇಡಿ ನೆಲದ ಪ್ರದರ್ಶನದೊಂದಿಗೆ ಓರ್ವ ಪುರುಷ ಮತ್ತು ಮಹಿಳಾ ಕಲಾವಿದರು ಗಾಳಿಯಲ್ಲಿ ನೃತ್ಯ ಪ್ರದರ್ಶಿಸಿದರು. ಕಳೆದ ವರ್ಷವೇ ನಡೆಯಬೇಕಾಗಿದ್ದ ಈ ಕ್ರೀಡಾಕೂಟ, ಕರೊನಾ ಭೀತಿಯಿಂದಾಗಿ ಮುಂದೂಡಲ್ಪಟ್ಟಿತ್ತು.
    ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸಿ ಚೀನಾ ಸರ್ಕಾರ ಕ್ಯಾತೆ ತೆಗೆದ ಹಿನ್ನೆಲೆಯಲ್ಲಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಏಷ್ಯಾಡ್ ಆರಂಭೋತ್ಸವವನ್ನು ಬಹಿಷ್ಕರಿಸಿದ್ದರೆ, ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷೆ ಪಿಟಿ ಉಷಾ ಕೂಡ ಗೈರಾಗಿದ್ದರು.

    https://x.com/ShLetsMeet/status/1705556913318977844?s=20

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts