More

    ಭಾರತ, ಆಸ್ಟ್ರೇಲಿಯಾಗೆ ಹೋಗಿ ಪ್ರದರ್ಶನ ನೀಡಬೇಕೆ?: ಪಿಸಿಬಿ ವಿರುದ್ಧವೇ ಗುಡುಗಿದ ಕಮ್ರಾನ್​ ಅಕ್ಮಲ್​!

    ಇಸ್ಲಮಾಬಾದ್​: ಕ್ರಿಕೆಟಿಗ ಕಮ್ರಾನ್​ ಅಕ್ಮಲ್ ಆಟಗಾರರ ಆಯ್ಕೆ ಪ್ರಕ್ರಿಯೆ ವಿರುದ್ದ ಅಸಮಾಧಾನ ಹೊರಹಾಕಿದ್ದು,​ ಪಾಕಿಸ್ತಾನ ಕ್ರಿಕೆಟ್​ ಮಂಡಳಿ(ಪಿಸಿಬಿ) ವಿರುದ್ಧವೇ ತಿರುಗಿಬಿದ್ದಿದ್ದಾರೆ.

    ದೇಶಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರೂ, ಅದನ್ನು ಗುರುತಿಸದೇ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಪಿಸಿಬಿ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತುಂಬಾ ಹತಾಶಾರಾಗಿರುವ ಅಕ್ಮಲ್​, ಆಯ್ಕೆಯಾಗಲು ಪ್ರಧಾನ ಮಂತ್ರಿ ಮನೆಯ ಬಾಗಿಲು ತಟ್ಟಬೇಕೆ ಎಂದು ಪ್ರಶ್ನಿಸಿದ್ದಾರೆ.

    ಮುಂಬರುವ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ಆಯ್ಕೆ ಮಾಡದಿದ್ದಕ್ಕೆ ಅಕ್ಮಲ್​ ಪಿಸಿಬಿ ವಿರುದ್ಧವೇ ಗುಡುಗಿದ್ದಾರೆ. ಗಡಾಫಿ ಸ್ಟೇಡಿಯಂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕ್ಮಲ್​, ನನ್ನ ನಿಯಂತ್ರಣವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ, ಎಲ್ಲದಕ್ಕೂ ಒಂದು ಎಲ್ಲೆ ಇದೆ. ಹೊಸ ವ್ಯವಸ್ಥೆಯನ್ನು ತಂದು 5 ವರ್ಷಗಳಾಗಿವೆ. ಉತ್ತಮ ಗುಣ, ಪ್ರತಿಭೆ ಮತ್ತು ಯಾರು ಒಳ್ಳೆಯ ಪ್ರದರ್ಶನ ನೀಡುತ್ತಾರೋ ಅವರನ್ನು ಸ್ವಯಂಚಾಲಿತವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

    ನನ್ನನ್ನು ಪರಿಗಣಿಸಲು ಭಾರತ ಅಥವಾ ಆಸ್ಟ್ರೇಲಿಯಾಗೆ ಹೋಗಿ ಪ್ರದರ್ಶನ ನೀಡಬೇಕೆ? ನಾನೊಬ್ಬ ಪಾಕಿಸ್ತಾನಿ ಆಟಗಾರ, ಐದು ವರ್ಷದಿಂದ ಪ್ರದರ್ಶನ ನೀಡುತ್ತಾ ಬಂದಿದ್ದೇನೆ. ನಾನೆಷ್ಟು ಅಂತಾ ಸಹಿಸಿಕೊಳ್ಳಬೇಕು? ಪ್ರಧಾನಮಂತ್ರಿ ಮನೆಗೆ ಹೋಗಿ ನನ್ನ ಐದು ವರ್ಷದ ಪ್ರದರ್ಶನವಿದು ಎಂದು ಹೇಳಬೇಕೆ? ನನಗಿಂತ ಉತ್ತಮ ಪ್ರದರ್ಶನ ನೀಡಿದವರು ಆಯ್ಕೆಯಾದರೆ ಸರಿ ಆದರೆ, ಇಲ್ಲಿ ನಡೆಯುತ್ತಿರುವುದು ಏನೆಂದು ಪ್ರಶ್ನಿಸಿ ಟೀಕಾ ಪ್ರಹಾರ ನಡೆಸಿದ್ದಾರೆ.

    ಅಂದಹಾಗೆ ಅಕ್ಮಲ್​ 53 ಟೆಸ್ಟ್​, 157 ಏಕದಿನ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆ 11 ಶತಕಗಳೊಂದಿಗೆ 6 ಸಾವಿರ ರನ್​ ದಾಖಲಿಸಿದ್ದಾರೆ. 2017ರ ವೆಸ್ಟ್​ವಿಂಡೀಸ್​ ವಿರುದ್ಧ ಆಡಿದ ಪಂದ್ಯವೇ ಅಕ್ಮಲ್​ ಅವರ ಕೊನೆಯ ಪಂದ್ಯವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts