ತಾಯಿ ಎದುರೇ ಪ್ರಿಯತಮೆಯ ಅತ್ಯಾಚಾರ ಎಸಗಿದ ಕಿರುಚಿತ್ರದ ನಿರ್ದೇಶಕ?

ಬೆಂಗಳೂರು: ಕಿರುಚಿತ್ರದ ನಿರ್ದೇಶಕನಾಗಿದ್ದ ವ್ಯಕ್ತಿಯೋರ್ವ ತನ್ನ ತಾಯಿಯ ಎದುರೇ ತನ್ನ ಪ್ರಿಯತಮೆಯನ್ನು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ವಿವೇಕನಗರದಲ್ಲಿ ಘಟನೆ ನಡೆದಿದ್ದು, ಕಿರು ಚಿತ್ರದ ನಿರ್ದೇಶಕ ಪ್ರಮೋದ್ ಎಂಬಾತ ಕೃತ್ಯ ಎಸಗಿದ್ದಾನೆ. ಅತ್ಯಾಚಾರ ಮಾಡುತ್ತಿದ್ದರೂ ಅದನ್ನು ತಡೆಯದೆ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಆತನ ತಾಯಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಈಗ ಕಂಬಿ ಎಣಿಸುತ್ತಿದ್ದಾನೆ.

ಕಳೆದೆರೆಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವೇಳೆ ಮದುವೆಯಾಗುವುದಾಗಿ ನಂಬಿಸಿ ಮೇ 10ರಂದು ಬರ್ತಡೇ ಪಾರ್ಟಿಗೆ ಕರೆದು ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದ್ದು, ಸಂತ್ರಸ್ತೆ ಹಾಗೂ ಪ್ರಮೋದ್ ಅಕ್ಕ ಪಕ್ಕದ ಮನೆಯ ನಿವಾಸಿಗಳಾಗಿದ್ದಾರೆ.

ಸಂತ್ರಸ್ತೆ ವಿವೇಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)