ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಅಧಿಕಾರ ಮೊಟಕು

ಅರಕಲಗೂಡು: ವಸತಿ ಯೋಜನೆಯಡಿ ನಿವೇಶನ ಹಾಗೂ ಮನೆಗಳ ವಿತರಣೆ ಅಧಿಕಾರವನ್ನು ವಸತಿ ಸಮಿತಿ ಹಾಗೂ ಶಾಸಕರಿಗೆ ನೀಡುವ ಮೂಲಕ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು ಸರ್ಕಾರ ಮೊಟಕುಗೊಳಿಸಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರಮೇಶ್ ವಾಟಾಳ್ ಬೇಸರ ವ್ಯಕ್ತಪಡಿಸಿದರು.


ಅಧ್ಯಕ್ಷ ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿ ಕೊಂಡಿದ್ದ ಪ.ಪಂ. ವಿಶೇಷ ಸಭೆಯಲ್ಲಿ ಅವರು ಮಾತನಾಡಿ, ನಾವೂ ಜನರಿಂದ ಚುನಾಯಿತರಾಗಿದ್ದೇವೆ. ಆದರೆ ಬಡವರು, ಸೂರಿಲ್ಲದವರಿಗೆ ಕನಿಷ್ಠ ಒಂದು ನಿವೇಶನ ಅಥವಾ ಮನೆ ಕೊಡಿಸುವ ಅಧಿಕಾರವೂ ನಮಗೆ ಇಲ್ಲದಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.


ನಿವೇಶನ ಮತ್ತು ಮನೆಗಳ ವಿತರಣೆ ಅಧಿಕಾರವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಮತ್ತು ಆಸೆ ತೋರಿಸಿ ಬಡಜನತೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾ ಗುತ್ತಿದೆ ಎಂದು ಆರೋಪಿಸಿದರು.


ಪಟ್ಟಣ ಪಂಚಾಯಿತಿ 350 ನಿವೇಶನ ಗುರುತಿಸಿ ದಶಕ ಕಳೆದರೂ ಈವರೆಗೆ ವಿತರಣೆ ಸಾಧ್ಯವಾಗಿಲ್ಲ. ಇಂತಹ ವ್ಯವಸ್ಥೆಯನ್ನು ರದ್ದುಗೊಳಿಸಿ, ನಿವೇಶನ ವಿತ ರಣೆ ಜವಾಬ್ದಾರಿಯನ್ನು ಸ್ಥಳೀಯ ಸಂಸ್ಥೆಗೆ ನೀಡಬೇಕು. ಸದಸ್ಯರಿಗೆ ಹಕ್ಕು ಮರಳಿಸುವ ಕುರಿತು ಸಭೆ ನಿರ್ಣಯ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.


ಇದಕ್ಕೆ ಸಹಮತ ವ್ಯಕ್ತಪಡಿಸಿದ ಸದಸ್ಯ ಮಂಜುಶೆಟ್ಟಿಗೌಡ, ನಿವೇಶನ ವಿತರಣೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.

ಮುಂದೆ ಬರದ ಫಲಾನುಭವಿಗಳು:  ಸರ್ಕಾರದ ನೂತನ ಯೋಜನೆ ಯಂತೆ ವಸತಿ ರಹಿತರಿಗೆ ನಿವೇಶನ ವಿತರಿಸುವಂತಿಲ್ಲ. ಗುರುತಿ ಸಿರುವ ನಿವೇಶನಗಳಲ್ಲಿ ಜಿ+1 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಿ ವಿತರಿಸ ಬೇಕು. ಇದಕ್ಕಾಗಿ ಫಲಾನುಭವಿ 2.20 ಲಕ್ಷ ರೂ. ಪಾವತಿ ಮಾಡಬೇಕು.

ಈ ರೀತಿನ ಸುಮಾರು 700 ಮನೆಗಳನ್ನು ನಿರ್ಮಿಸಿ ವಿತರಿಸಲು ಸಿದ್ಧ. ಆದರೆ ಇದಕ್ಕೆ ಫಲಾನುಭವಿ ಗಳು ಮುಂದೆ ಬರುತ್ತಿಲ್ಲ ಎಂದು ಮುಖ್ಯಾಧಿಕಾರಿ ಸುರೇಶ್‌ಬಾಬು ಸಭೆಗೆ ತಿಳಿಸಿದರು. ಈ ಸಂಬಂಧ ಸಾಕಷ್ಟು ಪ್ರಚಾರ ನಡೆದಿಲ್ಲ. ಬಹಳಷ್ಟು ಜನರಿಗೆ ಈ ವಿಷಯವೇ ತಿಳಿದಿಲ್ಲ. ವ್ಯಾಪಕ ಪ್ರಚಾರ ನಡೆಸಿದರೆ ಫಲಾನು ಭವಿಗಳು ಮುಂದೆ ಬರುತ್ತಾರೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಮಂಜು ಸಲಹೆ ಮಾಡಿದರು.


ಸದಸ್ಯರಾದ ಅಲೀಂ ಪಾಶ, ಎ.ಸಿ.ಮಂಜುನಾಥ್, ಅಹಮದ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಇಂಜಿ ನಿಯರ್ ಕೆ.ಆರ್.ಕವಿತಾ ವಿವಿಧ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.,