ಅಂಗಡಿ ಬಾಗಿಲು ಮುರಿದು ನಗದು ಕಳ್ಳತನ

ಹಿರೇಬಾಗೇವಾಡಿ: ಸಮೀಪದ ಹಲಗಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಿರಾಣಿ ಅಂಗಡಿ ಬಾಗಿಲು ಮುರಿದು ನಗದು ಸೇರಿದಂತೆ ಒಟ್ಟು 21,450 ರೂ.ಮೌಲ್ಯದ ದಿನಸಿ ಸಾಮಗ್ರಿ ಕಳವು ಮಾಡಲಾಗಿದೆ.

ಹಲಗಾದ ಶೆಟುಪ್ಪ ಜಿನ್ನಪ್ಪ ಸಾಮಜಿ ಕಿರಾಣಿ ಅಂಗಡಿಯಿಂದ ಅಕ್ಕಿ ಮೂಟೆಗಳು, ಎಣ್ಣೆ ಡಬ್ಬಿಗಳು, ಹೆಸರು ಬೇಳೆ, ಚನ್ನಂಗಿ ಬೇಳೆ, ಬಿಸ್ಕತ್ತು ಬಾಕ್ಸ್ , ಸೋಪಿನ ಬಾಕ್ಸ್ ಸೇರಿದಂತೆ 2,550 ರೂಪಾಯಿ ನಗದು ಕಳ್ಳತನ ಮಾಡಲಾಗಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *