ಫ್ಲೋರಿಡಾದ ಯೋಗ ಸ್ಟುಡಿಯೋಗೆ ನುಗ್ಗಿ ಇಬ್ಬರನ್ನು ಕೊಂದು ತಾನೂ ಸತ್ತ

ಟಲ್ಲಾಹಸ್ಸಿ: ಫ್ಲೋರಿಡಾದ ಯೋಗ ಸ್ಟುಡಿಯೋಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಯೊಬ್ಬ ಇಬ್ಬರನ್ನು ಕೊಂದು, ಹಲವರನ್ನು ಗಾಯಗೊಳಿಸಿ ತಾನೂ ಪ್ರಾಣ ಕಳೆದುಕೊಂಡಿದ್ದಾನೆ.

ಒಬ್ಬ ವ್ಯಕ್ತಿಯಿಂದ ಈ ಗುಂಡಿನ ದಾಳಿ ನಡೆದಿದ್ದು, ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದರ ಕುರಿತು ಇನ್ನೂ ಮಾಹಿತಿ ದೊರಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ 5.47ರ ಸುಮಾರಿಗೆ ನಮಗೆ ವಿಷಯ ತಿಳಿಯಿತು. ಸ್ಥಳಕ್ಕೆ ಭೇಟಿ ನೀಡುವಷ್ಟರಲ್ಲಿ ಗುಂಡಿನ ದಾಳಿಯಿಂದ ಹಲವರು ಗಾಯಗೊಂಡಿದ್ದರು. ತಕ್ಷಣ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಘಟನೆ ಕುರಿತು ಪೊಲೀಸ್​ ಅಧಿಕಾರಿ ಮೈಕಲ್​ ಡೆಲಿಯೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಘಟನೆ ನಡೆದಾಗ ಸ್ಟುಡಿಯೋದಲ್ಲಿದ್ದ ಹಲವರು ತಮ್ಮ ಪ್ರಾಣದ ಜತೆ ಉಳಿದವರ ಪ್ರಾಣ ರಕ್ಷಿಸಿಕೊಳ್ಳಲು ಸಾಕಷ್ಟು ಹೋರಾಟ ಮಾಡಿರುವುದು ತಿಳಿದುಬಂದಿದೆ. ಇದು ಅವರ ಧೈರ್ಯದ ಪುರಾವೆಯಾಗಿದೆ ಎಂದಿದ್ದಾರೆ. (ಏಜೆನ್ಸೀಸ್)