ಗುಜರಾತ್​ನ 63 ಶಾಲೆಯ ಎಲ್ಲ ವಿದ್ಯಾರ್ಥಿಗಳು ಫೇಲ್​: ಅಚ್ಚರಿಗೆ ಕಾರಣವಾದ ಎಸ್ಸೆಸ್ಸೆಲ್ಸಿ ಫಲಿತಾಂಶ

ಗಾಂಧಿನಗರ: ಗುಜರಾತ್​ ರಾಜ್ಯದಲ್ಲಿ ಮಂಗಳವಾರ ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಫಲಿತಾಂಶದಿಂದ ಹಲವರು ಅಚ್ಚರಿಗೆ ಒಳಗಾಗಿದ್ದಾರೆ. ಅದಕ್ಕೆ ಕಾರಣ ರಾಜ್ಯದ 63 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿರುವುದು.

ಶೂನ್ಯ ಫಲಿತಾಂಶ ದಾಖಲಾದ 63 ಶಾಲೆಗಳಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಪಾಸ್​ ಆಗದಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಪರೀಕ್ಷೆ ಬರೆದ ರಾಜ್ಯದ ಒಟ್ಟು 8,22,823 ವಿದ್ಯಾರ್ಥಿಗಳಲ್ಲಿ 5,51,023 ವಿದ್ಯಾರ್ಥಿಗಳು ಮಾತ್ರ ಉರ್ತೀರ್ಣಗೊಂಡಿದ್ದಾರೆ ಎಂದು ರಾಜ್ಯ ಎಸ್​​ಎಸ್​​ಎಲ್​​ಸಿ ಮಂಡಳಿ ಅಧ್ಯಕ್ಷ ಎ.ಜೆ. ಷಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ರಾಜ್ಯದ 63 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಪ್ರಕಟವಾಗಿರುವುದು ರಾಜ್ಯಕ್ಕೆ ಭರಿಸಲಾಗದ ನಷ್ಟವಾಗಿದೆ. ಬಾಲಕಿಯರು ಉತ್ತಮ ಅಂಕ ಪಡೆದು ಮೇಲುಗೈ ಸಾಧಿಸಿದ್ದಾರೆ. ಶೇ. 17.23 ಪುನಾವರ್ತಿತ ಅಭ್ಯರ್ಥಿಗಳು ಉತೀರ್ಣಗೊಂಡಿರುವುದು ಗಮನಾರ್ಹವಾಗಿದೆ.

ಇಂಗ್ಲಿಷ್​​ ಮಾಧ್ಯಮ ವಿದ್ಯಾರ್ಥಿಗಳು ಶೇ. 88.11 ಅಂಕಗಳನ್ನು ಪಡೆದುಕೊಂಡರೆ, ಹಿಂದಿ ಮಾಧ್ಯಮ ವಿದ್ಯಾರ್ಥಿಗಳು ಶೇ. 72.66 ಅಂಕಗಳನ್ನು ಪಡೆದುಕೊಂಡಿದ್ದಾರೆ. ಗುಜರಾತಿ ಮಾಧ್ಯಮ ವಿದ್ಯಾರ್ಥಿಗಳು ಶೇ. 64.58 ಅಂಕ ಪಡೆದುಕೊಂಡಿದ್ದಾರೆ ಎಂದು ಷಾ ತಿಳಿಸಿದ್ದಾರೆ. (ಏಜನ್ಸೀಸ್​)