ಕರುಣಾನಿಧಿ ಅನಾರೋಗ್ಯ ಸುದ್ದಿ ಕೇಳಿ ಸತ್ತವರು 21 ಮಂದಿ!

ಚೆನ್ನೈ: ಡಿಎಂಕೆ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿಯನ್ನು ಕೇಳಿ ಆಘಾತದಿಂದ ಈವರೆಗೂ ಸುಮಾರು 21 ಜನ ಪಕ್ಷದ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಡಿಎಂಕೆ ಪಕ್ಷ ಬುಧವಾರ ತಿಳಿಸಿದೆ.

ಅಲ್ಲದೆ, 94 ವರ್ಷ ವಯಸ್ಸಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅನಾರೋಗ್ಯದ ಹಿನ್ನೆಲೆಯಲ್ಲಿ ಮನನೊಂದು ಸಾವು ನೋವಿಗೆ ಕಾರ್ಯಕರ್ತರು ಮುಂದಾಗಬಾರದು ಎಂದು ಕೋರಿದೆ.

ಈ ಕುರಿತು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌ ಮಾತನಾಡಿ, ಕರುಣಾನಿಧಿ ಅವರ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿರುವ ಸುದ್ದಿಯನ್ನು ಕೇಳಿ 21 ಪಕ್ಷದ ಕಾರ್ಯಕರ್ತರು ಮೃತಪಟ್ಟಿರುವುದನ್ನು ಕೇಳಿ ನೋವಾಗಿದೆ ಎಂದು ತಿಳಿಸಿದ್ದಾರೆ.

ಪಕ್ಷದ ಕಾರ್ಯಕರ್ತರು ಮೃತಪಟ್ಟಿರುವ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಕರುಣಾನಿಧಿ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ತಿಳಿಸಿದ್ದಾರೆ.

ಕರುಣಾನಿಧಿ ಅವರು ಕಾವೇರಿ ಆಸ್ಪತ್ರೆ ಸೇರಿ ಇಂದಿಗೆ ಐದು ದಿನ ಕಳೆದಿದ್ದು, ಇನ್ನು ಚಿಕಿತ್ಸೆ ಮುಂದುವರಿದಿದೆ. (ಏಜೆನ್ಸೀಸ್)