ಸರ್ಕಾರಿ ಶಾಲೆಗೆ ಸಹಾಯಹಸ್ತ ಚಾಚಿದ ಶಿವರಾಜ್​ಕುಮಾರ್​!

ನೆಲಮಂಗಲ: ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕು, ಮಕ್ಕಳು ವಿದ್ಯಾಭ್ಯಾಸ ಚೆನ್ನಾಗಿ ನಡೆಯಬೇಕು ಅಂತಹ ಯಾವುದೇ ಸೇವೆಗೂ ನಾನು ಸದಾ ಸಿದ್ಧ ಎಂದಿರುವ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ನೆಲಮಂಗಲ ಶಾಲೆಗೆ ಗಿಫ್ಟ್​ ನೀಡಿದ್ದಾರೆ.

ಹೌದು, ದ್ರೋಣ ಚಿತ್ರದ ಚಿತ್ರೀಕರಣದ ವೇಳೆ ನೆಲಮಂಗಲ ಸರ್ಕಾರಿ ಶಾಲೆಗೆ 10 ಗ್ರೀನ್ ಬೋರ್ಡ್, ವಾಟರ್ ಫಿಲ್ಟರ್ ಮತ್ತು ಯುಪಿಎಸ್ ನೀಡುವ ಮೂಲಕ ಸರ್ಕಾರಿ ಶಾಲೆಗೆ ಶಿವರಾಜ್​ಕುಮಾರ್​ ಸಹಾಯ ಹಸ್ತ ಚಾಚಿದ್ದಾರೆ. ಹಾಗೇ ದ್ರೋಣದ ಚಿತ್ರದ ಆಡಿಯೋ ರಿಲೀಸ್​ ಕೂಡ ಇದೇ ಶಾಲೆಯಲ್ಲಿ ನಡೆಯಲಿದೆ ಎಂದರು.

ಈ ವೇಳೆ ಮಾತನಾಡಿದ ಅವರು, ಸರ್ಕಾರ ಕೂಡ ಕನ್ನಡ ಮಾಧ್ಯಮ ಶಾಲೆಗಳ ಉಳಿಯುವಿಕೆ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ. ಹಾಗೇ ಶಾಲಾ ಮಕ್ಕಳಿಗೆ ಸಿಹಿ ಹಂಚಿ ಶಿವರಾಜ್​ಕುಮಾರ್​ ದಂಪತಿ ಕೆಲಕಾಲ ಮಕ್ಕಳೊಂದಿಗೆ ಸಮಯ ಕಳೆದಿದ್ದಾರೆ. (ದಿಗ್ವಿಜಯ ನ್ಯೂಸ್​)