18 C
Bangalore
Friday, December 6, 2019

ನೇದಲಗಿಗೆ ಒಲಿದ ಜಿಪಂ ಅಧ್ಯಕ್ಷ ಪಟ್ಟ

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ವಿಜಯಪುರ: ನೂತನ ಗೃಹ ಸಚಿವ ಎಂ.ಬಿ.ಪಾಟೀಲರ ತವರೂರಿನಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದ್ದು, ಹೊಸ ವರ್ಷದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಿದೆ.

ನೀಲಮ್ಮ ಮೇಟಿ ಸ್ಥಾನದಿಂದ ತೆರವಾಗಿದ್ದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನ ಸಾಲೋಟಗಿ ಜಿಪಂ ಕ್ಷೇತ್ರದ ಸದಸ್ಯ ಶಿವಯೋಗೆಪ್ಪ ನೇದಲಗಿ ಅವರಿಗೆ ಅಧ್ಯಕ್ಷ ಪಟ್ಟ ಒಲಿಯಿತು. ಇದರಿಂದಾಗಿ ಬಿಜೆಪಿ ಪಾಳಯದಲ್ಲಿ ತೀವ್ರ ಮುಖಭಂಗ ಅನುಭವಿಸಿದಂತಾಗಿದೆ.

ಹಿಂದುಳಿದ ಅ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಿಟ್ಟಿದ್ದರಿಂದ ಕಾಂಗ್ರೆಸ್​ನಿಂದ ಶಿವಯೋಗೆಪ್ಪ ನೇದಲಗಿ ಏಕಾಂಗಿಯಾಗಿ ನಾಮಪತ್ರ ಸಲ್ಲಿಸಿದರೆ, ಬಿಜೆಪಿಯಿಂದ ಬಿಂದುರಾಯ ಪಾಟೀಲ, ಸಾಬು ಮಾಸ್ಯಾಳ, ಭೀಮಾಶಂಕರ ಬಿರಾದಾರ ಹಾಗೂ ನವೀನ ಅರಕೇರಿ ನಾಲ್ವರು ನಾಮಪತ್ರ ಸಲ್ಲಿಸಿದರು. ಕೊನೆಯಲ್ಲಿ ಭೀಮಾಶಂಕರ ಬಿರಾದಾರ ಹಾಗೂ ನವೀನ ಅರಕೇರಿ ನಾಮಪತ್ರ ಹಿಂಪಡೆದರು. ಅಂತಿಮ ಕಣದಲ್ಲಿ ಶಿವಯೋಗೆಪ್ಪ ನೇದಲಗಿ, ಬಿಂದುರಾಯ ಪಾಟೀಲ ಮತ್ತು ಸಾಬು ಮಾಸ್ಯಾಳ ಚುನಾವಣೆ ಎದುರಿಸಿದರು.

ನೇದಲಗಿಗೆ ಅಧ್ಯಕ್ಷ ಪಟ್ಟ: ಒಟ್ಟು 42 ಜಿಪಂ ಸದಸ್ಯರನ್ನು ಹೊಂದಿದ್ದು, ಅದರಲ್ಲಿ 38 ಸದಸ್ಯರು ಹಾಜರಿದ್ದರು. ಇನ್ನು ನಾಲ್ವರು ಗೈರಾಗಿದ್ದರು. ಶಿವಯೋಗೆಪ್ಪ ನೇದಲಗಿ ಪರ 21 ಸದಸ್ಯರು ಕೈ ಎತ್ತುವ ಮೂಲಕ ಹಾಗೂ ನಡವಳಿ ಪತ್ರದಲ್ಲಿ ಸಹಿ ಹಾಕುವ ಮೂಲಕ ಬೆಂಬಲ ಸೂಚಿಸಿದರು.

18 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಪರ ಏಕೈಕ ಪಕ್ಷೇತರ ಅಭ್ಯರ್ಥಿ ಚಾಂದಕವಟೆ ಕ್ಷೇತ್ರದ ಗುರುರಾಜ ಪಾಟೀಲ ಹಾಗೂ ಜೆಡಿಎಸ್​ನ ಬರಡೋಲ ಜಿಪಂ ಕ್ಷೇತ್ರದ ಕವಿತಾ ರಾಠೋಡ ಹಾಗೂ ಅಂಜುಟಗಿ ಕ್ಷೇತ್ರದ ರಾಮು ರಾಠೋಡ ಬೆಂಬಲ ಸೂಚಿಸಿದರು.

ಬಿಜೆಪಿಗೆ ಭಾರಿ ಮುಖಭಂಗ: 20 ಸದಸ್ಯರ ಬಲಾಬಲ ಹೊಂದಿರುವ ಬಿಜೆಪಿ ಭಾರಿ ಮುಖಭಂಗ ಅನುಭವಿಸುವಂತಾಯಿತು. ಅಂತಿಮ ಕಣದಲ್ಲಿ ಬಿಜೆಪಿ ಪರ ಸಾಬು ಮಾಸ್ಯಾಳ ಹಾಗೂ ಬಿಂದುರಾಯ ಪಾಟೀಲ ಸ್ಪರ್ಧಿಸಿದ್ದರು. ಸಾಬು ಮಾಸ್ಯಾಳ ಪರ 17 ಜನ ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಬಿಂದುರಾಯ ಪಾಟೀಲ ಕೂಡ ತಮಗೆ ತಾವೇ ಬೆಂಬಲ ಸೂಚಿಸದೆ ಪಕ್ಷದ ಹಿತದೃಷ್ಟಿಯಿಂದ ಸಾಬು ಮಾಸ್ಯಾಳಗೆ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು. 20 ಸದಸ್ಯರ ಬಲ ಹೊಂದಿದ್ದರೂ ಬಿಜೆಪಿಯ ನಾಲ್ವರು ಚುನಾವಣೆಯಿಂದ ದೂರ ಉಳಿದ ಪರಿಣಾಮ ಸದಸ್ಯರ ಬಲ 16ಕ್ಕೆ ಇಳಿಕೆಯಾಗಿತ್ತು. ಜೆಡಿಎಸ್​ನ ಬಸನಗೌಡ ವಣಕ್ಯಾಳ ಬಿಜೆಪಿಗೆ ಬೆಂಬಲಿಸಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ.

ಬಿಜೆಪಿಯ ನಾಲ್ವರು ಗೈರು: ಜಿಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಶ್ರೀದೇವಿ ಐಹೊಳ್ಳಿ, ಪ್ರಭಾವತಿ ಪಾಟೀಲ, ಪದ್ಮಾವತಿ ವಾಲೀಕರ, ವಿಜಯಲಕ್ಷ್ಮಿ ನಾಗೂರು ಚುನಾವಣೆಯಿಂದ ದೂರ ಉಳಿದಿದ್ದು ಬಿಜೆಪಿ ಸೋಲಿಗೂ ಪ್ರಮುಖ ಕಾರಣವಾಗಿತ್ತು. ಇನ್ನು ಬಿಜೆಪಿಯಲ್ಲಿ ನಾಯಕರಲ್ಲಿ ಮನೆಯೊಂದು ಮೂರು ಬಾಗಿಲು ಎಂಬಂತೆ ಆಗಿದ್ದು, ಮೂರು ಬಿಜೆಪಿ ಶಾಸಕರು, ಕೇಂದ್ರ ಸಚಿವರಿದ್ದರೂ ಜಿಪಂ ಗದ್ದುಗೆ ಏರಲು ಸಾಧ್ಯವಾಗದೆ ಇರುವುದು ಇಲ್ಲಿ ಒಗ್ಗಟಿನ ಕೊರತೆ ಎದುರಾಗಿತ್ತು.

ದೋಸ್ತಿಗೆ ಕೈಕೊಟ್ಟ ವಣಕ್ಯಾಳ: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿಯಲ್ಲಿ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಅದರಂತೆ ಜಿಪಂ, ತಾಪಂ, ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ದೋಸ್ತಿಗಳ ಪಾಲು ಅಧಿಕವಾಗಿದೆ. ಆದರೆ ಇಲ್ಲೊಬ್ಬ ಜಿಪಂ ಸದಸ್ಯ ದೋಸ್ತಿಗೆ ಕೈಕೊಟ್ಟು ಹೂ ಮುಡಿದ ಘಟನೆ ನಡೆಯಿತು.

ಸಾಲವಾಡಗಿ ಕ್ಷೇತ್ರದ ಜೆಡಿಎಸ್​ನ ಬಸನಗೌಡ ವಣಕ್ಯಾಳ ಬಿಜೆಪಿಗೆ ಬೆಂಬಲಿಸಿದ್ದು ವಿಶೇಷವಾಗಿತ್ತು. ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸಂಬಂಧಿಯಾಗಿರುವ ವಣಕ್ಯಾಳ ಅಧಿಕಾರದ ಗದ್ದುಗೆ ಏರಲು ಮಾಡಿದ ಮಾಸ್ಟರ್ ಪ್ಲ್ಯಾನ್ ಠುಸ್ ಆಯಿತು.

ಬರ ನಿರ್ವಹಣೆಗೆ ಆದ್ಯತೆ: ಈ ವೇಳೆ ಅಧ್ಯಕ್ಷ ಸ್ಥಾನ ಅಲಂಕರಿಸಿದ ಶಿವಯೋಗೆಪ್ಪ ನೇದಲಗಿ ಮಾತನಾಡಿ, ಜಿಲ್ಲೆಯಲ್ಲಿ ಬರ ಆವರಿಸಿದ್ದು, ಅದರ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈಗಾಗಲೇ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಹಾಕಿದ ಬೆಳೆ ಕೈ ಸೇರದೇ ರೈತರು ಆತಂಕದಲ್ಲಿದ್ದಾರೆ. ಇನ್ನು ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೊರೆ ಹೊಗಿದ್ದು, ರೈತರ ಪರವಾಗಿ ಕೆಲಸ ಮಾಡಲಾಗುವುದು. ಜಿಲ್ಲೆಯಲ್ಲಿ ಬೇರೆ ರಾಜ್ಯಗಳಿಗೆ ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗೆದ್ದ ಕೆಲವೇ ಕ್ಷಣದಲ್ಲಿ ಅಧಿಕಾರ: ಜಿಪಂ ಅಧ್ಯಕ್ಷ ಸ್ಥಾನ ಅಲಂಕರಿಸಿದ ಕೆಲವೇ ಕ್ಷೇತ್ರದಲ್ಲಿ ಜಿಪಂ ಆವರಣದಿಂದ ಹೊರ ಬಂದ ಶಿವಯೋಗೆಪ್ಪ ನೇದಲಗಿ ಸರ್ಕಾರಿ ವಾಹನದಲ್ಲಿ ಹೊರ ನಡೆದರು. ಆ ಮೂಲಕ ಕಲವೇ ನಿಮಿಷಗಳಲ್ಲಿ ಅವರು ಅಧಿಕಾರ ವಹಿಸಿಕೊಂಡಿದ್ದು ವಿಶೇಷವಾಗಿತ್ತು. ಜಿಪಂ ಆವರಣದ ಹೊರಭಾಗದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನೇದಲಗಿ ಅಭಿಮಾನಿಗಳ ಬಳಗ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರಿಗೆ ಹೂ ಮಾಲೆ ಹಾಕುವ ಮೂಲಕ ಸ್ವಾಗತ, ಅಭಿನಂದನೆಗಳ ಮಹಾಪೂರವೇ ಹರಿದಿತ್ತು.

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...