ಶಿವಯೋಗಮಂದಿರದಲ್ಲಿ ವಾರ್ಷಿಕ ಸಮ್ಮೇಳನ 

ಬಾದಾಮಿ: ತಾಲೂಕಿನ ಸುಕ್ಷೇತ್ರ ಮದ್ವೀರಶೈವ ಶಿವಯೋಗಮಂದಿರದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ಹಾಗೂ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆ ಆಶ್ರಯದಲ್ಲಿ ಅ. 26ರಿಂದ 28ರವರೆಗೆ 32ನೇ ವಾರ್ಷಿಕ ಸಮ್ಮೇಳನ ನಡೆಯಲಿದೆ ಎಂದು ಶಿವಯೋಗ ಮಂದಿರ ಸಂಸ್ಥೆ ಅಧ್ಯಕ್ಷ ಡಾ. ಸಂಗನಬಸವ ಶ್ರೀಗಳು ಹೇಳಿದರು.

ಚಿತ್ರದುರ್ಗದ ಶಾಸನ ತಜ್ಞ, ಇತಿಹಾಸಕಾರ ಡಾ. ರಾಜಶೇಖರಪ್ಪ ಸಮ್ಮೇಳನ ಸರ್ವಾಧ್ಯಕ್ಷ ಆಗಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇತಿಹಾಸ ಪ್ರಜ್ಞೆಯಿಂದ ದೇಶದ ಅಭಿವೃದ್ಧಿ ಸಾಧ್ಯ. ಐತಿಹಾಸಿಕ ಬಾದಾಮಿ ನಗರವನ್ನು ಸುಂದರವಾಗಿಸಲು ಪ್ರಯತ್ನ ಮಾಡಬೇಕಾಗಿದೆ. ಜನಪ್ರತಿನಿಧಿಗಳು ಬಾದಾಮಿ ಅಭಿವೃದ್ಧಿಗೆ ಮನಸ್ಸು ಮಾಡಬೇಕು ಎಂದರು.

ಡಾ. ಶಿಲಾಕಾಂತ ಪತ್ತಾರ ಮಾತನಾಡಿ, ಸಮ್ಮೇಳನದಲ್ಲಿ 350ಕ್ಕೂ ಹೆಚ್ಚು ಇತಿಹಾಸಕಾರರು, ಶಾಸನ ತಜ್ಞರು ಭಾಗವಹಿಸುವ ನಿರೀಕ್ಷೆ ಇದೆ. ಉದ್ಘಾಟನೆ ದಿನ ಬಾಳೆ ಹೊಸೂರಿನ ದಿಂಗಾಲೇಶ್ವರ ಶ್ರಿಗಳಿಂದ ಶಿವಯೋಗಮಂದಿರ ದರ್ಶನ ಕುರಿತು ಉಪನ್ಯಾಸ, ವಿಜಯಕುಮಾರ ಕಟಗಿಹಳ್ಳಿಮಠ ಅವರಿಂದ ಕುಮಾರ ಶಿವಯೋಗಿಗಳ ಕುರಿತು ಉಪನ್ಯಾಸ ನಡೆಯಲಿದೆ ಎಂದರು. ಸಮ್ಮೇಳನದಲ್ಲಿ ಸಾಹಿತಿ ಹಾಗೂ ಶಾಸನ ತಜ್ಞರನ್ನು ಸನ್ಮಾನಿಸಲಾಗುವುದು. ಇಷ್ಟಲಿಂಗ ಶಿರಸಿ, ಉಜ್ವಲ ಬಸರಿ, ರಾಘು ರಾವಳ, ಹನುಮಂತ ಇತರರಿದ್ದರು.