Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಮಹಾಶಿವರಾತ್ರಿ: ನಾಡಿನೆಲ್ಲಡೆ ಸಂಭ್ರಮ, ಸಡಗರದಿಂದ ಆಚರಣೆ

Tuesday, 13.02.2018, 8:28 AM       No Comments

ಬೆಂಗಳೂರು: ರಾಜ್ಯಾದ್ಯಂತ ಮಹಾಶಿವರಾತ್ರಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ.

ವಿವಿಧೆಡೆ ಮುಂಜಾನೆಯಿಂದಲೇ ಶಿವನಿಗೆ ವಿವಿಧ ಪೂಜೆ, ಅಲಂಕಾರ ಮಾಡಲಾಗಿದೆ. ನಗರದ ಗವಿಪುರಂನಲ್ಲಿರೋ ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಮಹಾದೇವನ ದರ್ಶನ ಪಡೆಯಲು ಭಕ್ತರು ಬೆಳಗ್ಗೆಯಿಂದಲೇ ಸಾಲು ಗಟ್ಟಿ ನಿಂತಿದ್ದಾರೆ. ಶಿವನಿಗೆ ಬಿಲ್ವ ಪತ್ರೆ, ಕೆಂಪು ದಾಸವಾಳ, ತುಳಸಿ, ತುಂಬೆ ಹೂವುಗಳ ಅಭಿಷೇಕ ಮಾಡಲಾಗುತ್ತಿದೆ.

ಇನ್ನು ಮೈಸೂರು ಅರಮನೆ ಆವರಣದಲ್ಲಿನ ತ್ರಿನೇಶ್ವರ ದೇವಾಲಯದಲ್ಲಿ ಮುಂಜಾನೆ 5.30 ರಿಂದಲೇ ಪೂಜಾ ಕೈಂಕರ್ಯಗಳು ಶುರುವಾಗಿವೆ. ರುದ್ರಾಭಿಷೇಕ, ಪಂಚಾಮೃತ ಅಭಿಷೇಕದ ಬಳಿಕ ಕೊಳಗ ಧಾರಣೆಯಾಗಲಿದೆ.

ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಉಡುಗೊರೆ ನೀಡಿರುವ 11 ಕೆಜಿ ತೂಕದ ಚಿನ್ನದ ಕೊಳಗವನ್ನು ವರ್ಷಕ್ಕೊಮ್ಮೆ ಮಾತ್ರ ಲಿಂಗಕ್ಕೆ ಧಾರಣೆ ಮಾಡುವುದು ವಿಶೇಷ.

Leave a Reply

Your email address will not be published. Required fields are marked *

Back To Top