ಲಂಡನ್​ನಲ್ಲಿ ಶಿವಣ್ಣ ಭುಜ ಶಸ್ತ್ರಚಿಕಿತ್ಸೆ ಯಶಸ್ವಿ​: ಇಂದು ಮಧ್ಯರಾತ್ರಿ 12ಕ್ಕೆ ಫೇಸ್​ಬುಕ್​ ಲೈವ್​ನಲ್ಲಿ ಅಭಿಮಾನಿಗಳ ಜತೆ ಮುಖಾಮುಖಿ

ಬೆಂಗಳೂರು: ಲಂಡನ್​ ಆಸ್ಪತ್ರೆಯಲ್ಲಿ ಬಲಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನಟ ಶಿವರಾಜ್​ ಕುಮಾರ್​ ಇಂದು ಬೆಳಗ್ಗೆ ಡಿಸ್ಚಾರ್ಜ್​ ಆಗಿದ್ದಾರೆ. ಆಸ್ಪತ್ರೆಯಿಂದ ಬರುತ್ತಿದ್ದಂತೆ ತಾನು ಆರೋಗ್ಯವಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ನಾಳೆ ಶಿವರಾಜ್​ ಕುಮಾರ್​ ಹುಟ್ಟುಹಬ್ಬವಾಗಿದ್ದು ತಮ್ಮ ಟ್ವಿಟರ್​, ಫೇಸ್​ಬುಕ್​ನಲ್ಲಿ ಅಭಿಮಾನಿಗಳಿಗೆ ಸಂದೇಶವೊಂದನ್ನು ಅವರು ನೀಡಿದ್ದಾರೆ. ನಿಮ್ಮೆಲ್ಲರ ಹಾರೈಕೆಯಿಂದ ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಿಮ್ಮ ಶಿವಣ್ಣ ಸೇಫ್​ ಆಗಿದ್ದಾರೆ. ನಾನಿನ್ನೂ ಲಂಡನ್​ನಲ್ಲೇ ಇರುವ ಕಾರಣ ನನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ ನಿಮ್ಮನ್ನೆಲ್ಲ ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ವಾಪಸ್​ ಬರುವೆ. ಹಾಗೇ ಇಂದು ಮಧ್ಯರಾತ್ರಿ 12ಕ್ಕೆ ನನ್ನ ಅಫಿಷಿಯಲ್​ ಫೇಸ್​ಬುಕ್​ನಲ್ಲಿ ಲೈವ್​ ಬರುತ್ತೇನೆ ಎಂದು ತಿಳಿಸಿದ್ದಾರೆ. ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಜ್​ಕುಮಾರ್ ಅಷ್ಟೊಂದು ಸಕ್ರಿಯರಾಗಿ ಇರಲಿಲ್ಲ.

ಶಿವರಾಜ್​ಕುಮಾರ್​ ಲಂಡನ್​ಗೆ ತೆರಳಿ ಈಗಾಗಲೇ ಐದಾರು ದಿನಗಳಾಗಿದ್ದು ನಿನ್ನೆ ಸರ್ಜರಿ ನಡೆದಿತ್ತು. ಅಣ್ಣನನ್ನು ನೋಡಲು ಪುನೀತ್​ ರಾಜಕುಮಾರ್​ ಕೂಡ ತೆರಳಿದ್ದರು.

Leave a Reply

Your email address will not be published. Required fields are marked *