More

  ಶಿವಣ್ಣನಂತೆ ಪ್ರಾಣಿ ದತ್ತು ಪಡೆಯಲು ಮೈಸೂರಿನತ್ತ ಅಭಿಮಾನಿಗಳ ಪ್ರಯಾಣ

  ಬೆಂಗಳೂರು: ಸ್ಯಾಂಡಲ್​ವುಡ್​ ನಟ ಶಿವರಾಜ್​ಕುಮಾರ್​ ಇತ್ತೀಚೆಗಷ್ಟೇ ಆನೆ ವಿಚಾರಕ್ಕೆ ಸುದ್ದಿಯಾಗಿದ್ದರು. ಮೈಸೂರು ಮೃಗಾಲಯದಲ್ಲಿನ ಪಾರ್ವತಿ ಹೆಸರಿನ ಹೆಣ್ಣು ಆನೆಯೊಂದನ್ನು ದತ್ತು ಪಡೆದುಕೊಂಡಿದ್ದರು. ಇದೀಗ ಆ ಕೆಲಸವನ್ನು ಅವರ ಅಭಿಮಾನಿಗಳೂ ಮುಂದುವರಿಸಿದ್ದಾರೆ.

  ಇದನ್ನೂ ಓದಿ: ‘ಪಾರ್ವತಿ’ಯನ್ನು ದತ್ತು ಪಡೆದ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್​

  ಬೆಂಗಳೂರಿನ ಶಿವು ಅಡ್ಡ ಸಂಘದ ಸಾಕಷ್ಟು ಅಭಿಮಾನಿಗಳು ಈ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೆಚ್ಚಿನ ನಟನ ಕಾರ್ಯವನ್ನೇ ಅನುಸರಿಸಲು ಮುಂದಾಗಿದ್ದಾರೆ. ಇದೇ ಭಾನುವಾರ ಒಂದಷ್ಟು ಅಭಿಮಾನಿಗಳೆಲ್ಲ ಒಟ್ಟಾಗಿ ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.

  ಈಗಾಗಲೇ ಆ ಕಾರ್ಯಕ್ಕೆ ಇಳಿಯುವ ಮುನ್ನ ಬೃಹತ್​ ಬ್ಯಾನರ್​ವೊಂದನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿ ಶಿವಣ್ಣ ಅವರ ಸ್ಫೂರ್ತಿಯಿಂದ ಎಂದು ಬರೆಯಲಾಗಿದೆ. ಅಭಿಮಾನಿಗಳ ಈ ಕಾರ್ಯಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನಾವೂ ಕೈಜೋಡಿಸುವುದಾಗಿ ಸಾಕಷ್ಟು ಮಂದಿ ಹೇಳಿದ್ದಾರೆ.

  ಇದನ್ನೂ ಓದಿ: ‘ರಾಬರ್ಟ್​’ ಸುಂದರಿಯ ಫಸ್ಟ್​ ಲುಕ್​ ಕಣ್ತುಂಬಿಕೊಳ್ಳಲು ನಿಗದಿಯಾಯ್ತು ದಿನಾಂಕ

  ಅಂದಹಾಗೆ, ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಆಗಸ್ಟ್​ 20ರಿಂದ 2021ರ ಆಗಸ್ಟ್ 19ರ ವರೆಗೂ ಪಾರ್ವತಿ ಹೆಸರಿನ ಹೆಣ್ಣು ಆನೆಯನ್ನು ದತ್ತು ಪಡೆದಿದ್ದಾರೆ. ಅದರ ಆರೈಕೆಗೆ ಒಟ್ಟು 75 ಸಾವಿರ ರೂ ಮೊತ್ತ ನೀಡಿದ್ದಾರೆ. ಈ ವಿಚಾರವನ್ನು ಪ್ರಾಣಿ ಸಂಗ್ರಹಾಲಯದ ಕಾರ್ಯಕಾರಿ ನಿರ್ದೇಶಕ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

  ಇನ್ನು ಮೈಸೂರು ಮೃಗಾಲಯದಲ್ಲಿನ ಪ್ರಾಣಿಗಳನ್ನು ದತ್ತು ಪಡೆಯುವ ಕೆಲಸ ಇದೇ ಮೊದಲೇನಲ್ಲ. ಈ ಮೊದಲು ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದರು. ನಟ ಚಿಕ್ಕಣ್ಣ ಸೇರಿ ಕ್ರಿಕೆಟರ್​ ಜಾವಗಲ್​ ಶ್ರೀನಾಥ್​, ಜಹೀರ್​ ಖಾನ್​, ಅನಿಲ್​​ ಕುಂಬ್ಳೆ ಹಾಗೂ ಹಲವು ರಾಜಕಾರಣಿಗಳೂ ಸಂಗ್ರಹಾಲಯದಲ್ಲಿನ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.

  ‘ಸಲಗ’ನ ಡ್ಯುಯೆಟ್​ಗೆ ಪುನೀತ್​ ಮೆಚ್ಚುಗೆ …

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts