ಯೋಧನಾಗಲಿರುವ ಶಿವರಾಜಕುಮಾರ್ … ಅಣ್ಣಾವ್ರ ಹುಟ್ಟುಹಬ್ಬದಂದು ಹೊಸ ಚಿತ್ರದ ಘೋಷಣೆ

ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ಮಿನಿಮಮ್ ಮೂರು ಚಿತ್ರಗಳು ಯಾರದ್ದಾದರೂ ಬಿಡುಗಡೆಯಾಗುತ್ತದೆ ಎಂದರೆ ಅದು ಶಿವರಾಜಕುಮಾರ್ ಅವರದ್ದು ಮಾತ್ರ. ಶಿವಣ್ಣ ಈಗಲೂ ಫುಲ್ ಜೋಶ್‌ನಲ್ಲಿ ಸಿನಿಮಾ ಮೇಲೆ ಸಿನಿಮಾ ಒಪ್ಪುತ್ತಿದ್ದಾರೆ ಮತ್ತು ವರ್ಷಕ್ಕೆ ಅವರ ಅಭಿನಯದ ಮೂರ‌್ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತವೆ. ಈಗ್ಯಾಕೆ ಈ ವಿಷಯ ಎಂದರೆ, ಶಿವರಾಜಕುಮಾರ್ ಸದ್ದಿಲ್ಲದೆ ಹೊಸ ಚಿತ್ರವೊಂದು ಒಪ್ಪಿಕೊಂಡಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ನಾಳೆ ಏಪ್ರಿಲ್ 24ರಂದು ಅಣ್ಣಾವ್ರ ಹುಟ್ಟುಹಬ್ಬವಿರುವುದರಿಂದ, ಚಿತ್ರದ ಅಧಿಕೃತ ಘೋಷಣೆ ಮಾಡಲಾಗುತ್ತದೆ. ಈ ಹಿಂದೆ ತೆಲುಗಿನಲ್ಲಿ ಕೆಲವು ಚಿತ್ರಗಳಿಗೆ … Continue reading ಯೋಧನಾಗಲಿರುವ ಶಿವರಾಜಕುಮಾರ್ … ಅಣ್ಣಾವ್ರ ಹುಟ್ಟುಹಬ್ಬದಂದು ಹೊಸ ಚಿತ್ರದ ಘೋಷಣೆ