PHOTOS| ಮಾರುವೇಷದಲ್ಲಿ ಹೋಗಿ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳದ ಮೇಲೆ ದಾಳಿ ಮಾಡಿದ ತಹಸೀಲ್ದಾರ್!

ಶಿವಮೊಗ್ಗ: ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಸ್ಥಳದ ಮೇಲೆ ಶಿವಮೊಗ್ಗದ ತಹಸೀಲ್ದಾರ್​ ಮಾರುವೇಷದಲ್ಲಿ ದಾಳಿ ನಡೆಸಿ ಅನೇಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಸಾರ್ವಜನಿಕರು ನೀಡಿದ ದೂರಿನ ಅನ್ವಯ ತಹಸೀಲ್ದಾರ್ ಗಿರೀಶ್​, ಗ್ರಾಮಲೆಕ್ಕಾಧಿಕಾರಿ ಪ್ರಭು ಅವರೊಡನೆ ಸೇರಿ ತಲೆಗೆ ಟವೆಲ್ ಸುತ್ತಿಕೊಂಡು ಬೈಕ್​ನಲ್ಲಿ ಸಾಮಾನ್ಯರಂತೆ ತೆರಳಿ ಗಣಿಗಾರಿಕೆ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ.

ಶಿವಮೊಗ್ಗದ ಹೊರವಲಯದ ಗೆಜ್ಜೆನಹಳ್ಳಿಯ ಕ್ವಾರಿಯ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಎರಡು ಟ್ರ್ಯಾಕ್ಟರ್, ಒಂದು ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ. ದಂಧೆಕೋರರು ಕೃಷಿಭೂಮಿಯಲ್ಲಿ ಅನುಮತಿಯಿಲ್ಲದೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಈ ಬಗ್ಗೆ ಗೆಜ್ಜೆನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಸಾಕಷ್ಟು ದೂರು ನೀಡಿದ್ದರು. ಆದರೆ, ಪ್ರತಿಬಾರಿ ದಾಳಿಗೆ ಮುಂದಾದಾಗಲೂ ದಾಳಿ ಮೂನ್ಸೂಚನೆ ದೊರೆಯುತ್ತಿದ್ದಂತೆ ದಂಧೆಕೋರರು ತಪ್ಪಿಸಿಕೊಳ್ಳುತ್ತಿದ್ದರು. ಹೀಗಾಗಿ ಮಾರುವೇಷದಲ್ಲಿ ದಾಳಿ ನಡೆಸಲಾಗಿದೆ.

ದಂಧೆಕೋರರ ವಿರುದ್ಧ ತಹಸೀಲ್ದಾರ್​ ಕ್ರಮಕೈಗೊಂಡಿದ್ದು, ಮುಂದೆ ಕೃಷಿಭೂಮಿಯಲ್ಲಿ ಅನುಮತಿಯಿಲ್ಲದೇ ಕಲ್ಲು ಗಣಿಗಾರಿಕೆ ನಡೆಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *