ಭದ್ರಾವತಿ: ದತ್ತಮಾಲೆ ಅಭಿಯಾನದ ಅಂಗವಾಗಿ ವಿಶ್ವ ಹಿಂದು ಪರಿಷತ್, ಬಜರಂಗದಳದ ಕಾರ್ಯಕರ್ತರು ಗುರುವಾರ ನಗರದ ಪ್ರಮುಖ ಬೀದಿಗಳಲ್ಲಿ 14ನೇ ವರ್ಷದ ಸಂಕೀರ್ತನಾ ಯಾತ್ರೆ ನಡೆಸಿದರು.
ನಗರದ ಹೊಸಮನೆ ಶಿವಾಜಿ ಸರ್ಕಲ್‌ನಿಂದ ಆರಂಭವಾದ ಶೋಭಾಯಾತ್ರೆ ರಂಗಪ್ಪ ವೃತ್ತ, ಮಾಧವಾಚಾರ್ ಸರ್ಕಲ್, ತರೀಕೆರೆ ರಸ್ತೆ ಅಯ್ಯಪ್ಪಸ್ವಾಮಿ ದೇವಾಲಯದವರೆಗೂ ನಡೆಯಿತು.
ಪ್ರಮುಖರಾದ ಹಾ.ರಾಮಪ್ಪ, ಶಿವಕುಮಾರ್, ವಡಿವೇಲು, ಧನುಷ್, ಜಿ.ಧರ್ಮಪ್ರಸಾದ್, ಕೆ.ಎನ್.ಶ್ರೀಹರ್ಷ, ಮಂಜಣ್ಣ, ರಾಜು ರೇವಣಕರ್, ರಾಜಶೇಖರ್, ಅವಿನಾಶ್ ಇತರರಿದ್ದರು.