ತಂದೆ ಸಾವಿನ ದುಃಖದಲ್ಲೂ ಅಳುತ್ತಲೇ ಪರೀಕ್ಷೆ ಬರೆದ ಸಚಿವ ಸಿ.ಎಸ್‌.ಶಿವಳ್ಳಿ ಪುತ್ರಿ

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ ಎಸ್‌ ಶಿವಳ್ಳಿ ನಿನ್ನೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದು, ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ. ಆದರೆ ಸಾವಿನ ದುಃಖದ ಮಧ್ಯೆಯೂ ಶಿವಳ್ಳಿ ಅವರ ಪುತ್ರಿ ಪರೀಕ್ಷೆ ಬರೆದಿದ್ದಾಳೆ.

ಮಂಜುನಾಥ ನಗರದ ಕೆ.ಎಲ್.ಇ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಶಿವಳ್ಳಿ ಪುತ್ರಿ ರೂಪಾ ಚೇತನಾ ಕಾಲೊನಿಯಲ್ಲಿರುವ ಸೇಂಟ್ ಆಂಟೊನಿ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದಾಳೆ.

ಸಿ ಎಸ್ ಶಿವಳ್ಳಿ ಅವರ ಎರಡನೇ ಪುತ್ರಿಯಾದ ರೂಪಾ ತಂದೆಯ ಅಗಲಿಕೆಯ ನಡುವೆ ಅಳುತ್ತಲೇ ಪರೀಕ್ಷೆ ಬರೆದು ತಂದೆಯ ಅಂತ್ಯಕ್ರಿಯೆಗೆ ಸ್ವಗ್ರಾಮ ಯರಗುಪ್ಪಿಗೆ ಕಾರಿನಲ್ಲಿ ತೆರಳಿದ್ದಾರೆ.

ಕಾರು ಹತ್ತಿಸುವಾಗ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಸಾಂತ್ವನ ಹೇಳಿ ಕಳುಹಿಸಿದರು. (ದಿಗ್ವಿಜಯ ನ್ಯೂಸ್)

7 Replies to “ತಂದೆ ಸಾವಿನ ದುಃಖದಲ್ಲೂ ಅಳುತ್ತಲೇ ಪರೀಕ್ಷೆ ಬರೆದ ಸಚಿವ ಸಿ.ಎಸ್‌.ಶಿವಳ್ಳಿ ಪುತ್ರಿ”

Comments are closed.