ಹಳ್ಳೂರ: ಸಮೀಪದ ಖಾನಟ್ಟಿ ಗ್ರಾಮದ ಐತಿಹಾಸಿಕ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಈಚೆಗೆ ವಿಜೃಂಭ-ಣೆ-ಯಿಂದ ಜರುಗಿತು. ಬೆಳ-ಗ್ಗೆ ಶಿವಲಿಂಗೇಶ್ವರ ಕರ್ತೃ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ, ನೈವೇದ್ಯ, ಮಧ್ಯಾಹ್ನ ಮಹಾಪ್ರಸಾದ, ಸಂಜೆ ಪಲ್ಲಕ್ಕಿ ಉತ್ಸವದೊಂದಿಗೆ ರಥೋತ್ಸವ ಜರುಗಿತು. ರಂಜ್ ಪಥಕ್, ವಿವಿಧ ವಾದ್ಯಮೇಳಗಳು ಜಾತ್ರೆಗೆ ಮೆರ-ಗು ಹೆಚ್ಚಿ-ಸಿ-ದ-ವು. ಸಾವಳಗಿ ಸಿದ್ದ ಸಂಸ್ಥಾನ ಪೀಠದ ಶ್ರೀ ಶೂನ್ಯ ಸಿಂಹಾಸನಾಧೀಶ ಶ್ರೀಮನ್ ಮಹಾರಾಜ ನಿರಂಜನ, ಜಗದ್ಗುರು -ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿ ಶ್ರೀಗಳು ಜಾತ್ರಾ ಮಹೋತ್ಸವ ಹಾಗೂ ರಥೋತ್ಸವಕ್ಕೆ ಚಾಲನೆ ನೀಡಿ-ದರು.
