18.1 C
Bangalore
Saturday, December 7, 2019

ವೀರಾಪುರದ ವಿರಾಗಿ….

Latest News

ಅಂಗನವಾಡಿಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿ

ಕಾರವಾರ: ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೃಷಿ ಮಾರಾಟ ಇಲಾಖೆ

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಹಾಗೂ ಏಜೆನ್ಸಿ ನಿಗದಿಪಡಿಸಲು ಕೋರಿ ಕೃಷಿ ಮಾರಾಟ...

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೀರಾಪುರ(ಈಗಿನ ರಾಮನಗರ ಜಿಲ್ಲೆ ಮಾಗಡಿ ತಾಲೂಕು) ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು. ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಈ ಹಳ್ಳಿಗೆ ನಾಡಿನ ಭೂಪಟದಲ್ಲಿ ವಿಶೇಷ ಸ್ಥಾನಮಾನ. ವೀರಾಪುರದ ಪಟೇಲ್ ಹೊನ್ನೇಗೌಡ, ಗಂಗಮ್ಮ ದಂಪತಿಯ 13ನೇ ಮಗನಾಗಿ ಶಿವಣ್ಣ 1908ರ ಏಪ್ರಿಲ್ 1ರಂದು ಜನ್ಮತಳೆದರು. ತಂದೆ, ತಾಯಿ, ಅಣ್ಣ ಕೆಂಪನಂಜಪ್ಪ ಶಿವಣ್ಣ ಪಾಲಿಗೆ ಆದರ್ಶಪ್ರಾಯರು. ವೀರಾಪುರ, ಪಾಲನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ. ಅದು ಕೂಲಿಮಠದಲ್ಲಿ. ಅಭ್ಯಾಸದಲ್ಲಿ ಚುರುಕು, ಬಲುಚೂಟಿ. ಎಂಟನೇ ವಯಸ್ಸಿನಲ್ಲಿ ತಾಯಿ ಕಳೆದುಕೊಂಡ ಶಿವಣ್ಣ, ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ಹಿರಿಯಕ್ಕ ಪುಟ್ಟಹೊನ್ನಮ್ಮ ಶಿವಣ್ಣನನ್ನು ತಾಯಿಯಂತೆ ಸಲಹಿದರು. 1919ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆ. 1921ರಲ್ಲಿ ಇಂಗ್ಲಿಷ್ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. 1922ರಲ್ಲಿ ತುಮಕೂರಿನ ಸರ್ಕಾರಿ ಹೈಸ್ಕೂಲ್ ಸೇರಿದ ಶಿವಣ್ಣ ಓದಿನ ಒತ್ತಾಸೆಯಾಗಿ ಅಣ್ಣ ಲಿಂಗಪ್ಪ ನಿಂತರು. ಇಲ್ಲಿ ಕೆಂಬಳಲಿನ ಕಾಳಪ್ಪ ಜೀವದ ಗೆಳೆಯರಾದರು. ಶೆಟ್ಟಿಹಳ್ಳಿಯಲ್ಲಿ ಕೊಠಡಿಯೊಂದರಲ್ಲಿ ಅಣ್ಣನ ಜತೆ ವಾಸ. ಈ ವೇಳೆ ಪ್ಲೇಗ್ ರೋಗ ಕಾಣಿಸಿಕೊಂಡು ಊರಿಗೆ ಹಿಂದಿರುಗುವ ಕಷ್ಟ ಎದುರಾಯಿತು. ಅಣ್ಣ ಲಿಂಗಪ್ಪ ವಿದ್ಯಾಭ್ಯಾಸ ಮೊಟಕುಗೊಳಿಸಿ ಊರು ಸೇರಿದರು. ಆಗ ಊಟ, ವಸತಿಗಾಗಿ ಶಿವಣ್ಣ(ಶ್ರೀಗಳ ಪೂರ್ವಾಶ್ರಮದ ಹೆಸರು) ಶ್ರೀಮಠದ ಆಶ್ರಯ ಬಯಸಬೇಕಾಯಿತು. 1926ರಲ್ಲಿ ಮಠದಲ್ಲಿದ್ದುಕೊಂಡೇ ಮೆಟ್ರಿಕ್ಯುಲೇಷನ್ ಮುಗಿಸಿದರು. ಉದ್ಧಾನ ಶಿವಯೋಗಿಗಳ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ಮರುಳಾರಾಧ್ಯ ಶ್ರೀಗಳ ಕಣ್ಣಿಗೆ ಶಿವಣ್ಣ ಬಿದ್ದರು. 1927ರಲ್ಲಿ ಮೆಟ್ರಿಕ್ಯುಲೇಶನ್ ನಂತರ ಬಿಎ, ಆನರ್ಸ್ ವ್ಯಾಸಂಗಕ್ಕೆ ಬೆಂಗಳೂರಿಗೆ ತೆರಳಿದರು. ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರ, ಗಣಿತ ಐಚ್ಛಿಕ ವಿಷಯವನ್ನು ತೆಗೆದುಕೊಂಡಿದ್ದರು. ಸಿದ್ಧಗಂಗೆಯ ಉತ್ತರಾಧಿಕಾರಿಗಳಾಗಿದ್ದ ಶ್ರೀ ಮರುಳಾರಾಧ್ಯರು 1930ರ ಜನವರಿ 16ರಂದು ಅನಾರೋಗ್ಯದಿಂದ ಲಿಂಗೈಕ್ಯರಾದಾಗ ಖಾಲಿಯಾದ ಉತ್ತರಾಧಿಕಾರಿ ಸ್ಥಾನಕ್ಕೆ ಶ್ರೀ ಉದ್ದಾನ ಶಿವಯೋಗಿಗಳು ಆಯ್ಕೆ ಮಾಡಿದ ಏಕೈಕ ಹೆಸರು ಶಿವಣ್ಣ. ಅನಿರೀಕ್ಷಿತವಾಗಿ ಈ ಅವಕಾಶ ಬಂದರೂ ಅರ್ಥಪೂರ್ಣವಾದ ಹುದ್ದೆಯನ್ನು ಅಲಂಕರಿಸಿ ವಿರಕ್ತ ದೀಕ್ಷೆಯನ್ನು ಸ್ವೀಕರಿಸಿ 1930ರಿಂದ ನಿರಂತರವಾಗಿ ಶ್ರೀಮಠವನ್ನು ಜವಾಬ್ದಾರಿಯಿಂದ ಮುನ್ನಡೆಸಿದ್ದರು. 1930ರ ಮಾ.3ರಂದು ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಶಿವಣ್ಣ ಅವರನ್ನು ಆಯ್ಕೆ ಮಾಡಲಾಯಿತು. ಸಂನ್ಯಾಸ ದೀಕ್ಷೆ ಪಡೆದ ಶಿವಣ್ಣ ಶಿವಕುಮಾರ ಸ್ವಾಮೀಜಿಯಾದರು. ಆಗ ಮಠಕ್ಕಿದ್ದುದು ಕೇವಲ 16 ಎಕರೆ ಜಮೀನು. ಉತ್ಪನ್ನ ಕಡಿಮೆ. ವಜ್ರಕಾಠಿಣ್ಯದಂಥ ವ್ಯಕ್ತಿತ್ವವುಳ್ಳ ಉದ್ಧಾನ ಶಿವಯೋಗಿಗಳ ನೆರಳಲ್ಲಿ ಶ್ರೀಗಳ ಸಂನ್ಯಾಸ ವ್ರತ ಆರಂಭ. ಅಷ್ಟರಲ್ಲಾಗಲೇ ಮಠದಲ್ಲಿ ಶ್ರೀಸಿದ್ದಲಿಂಗೇಶ್ವರ ಸಂಸ್ಕೃತ ಪಾಠಶಾಲೆಯಲ್ಲಿ ಹತ್ತಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. 1941ರ ಜನವರಿ 11ರಂದು ಉದ್ಧಾನ ಶಿವಯೋಗಿಗಳು ಲಿಂಗೈಕ್ಯರಾದರು. ಶಿವಕುಮಾರ ಸ್ವಾಮೀಜಿ ಗುರುಗಳ ವಿಯೋಗದಿಂದ ತಾಯಿಯನ್ನು ಕಳೆದುಕೊಂಡ ಮಗುವಿನಂತಾದರು. ಇಡೀ ಮಠದ ಜವಾಬ್ದಾರಿ ಶ್ರೀಗಳ ಹೆಗಲಿಗೆ ಬಿತ್ತು. ಶ್ರೀಗಳಿಗೆ ಆಗಿನ್ನೂ 33ರ ತಾರುಣ್ಯ. ಹಲವು ಸಂಕಷ್ಟಗಳು ಎದುರಾದವು. ಜೋಳಿಗೆ ಹಿಡಿದು ಊರೂರು ಸುತ್ತಿದರು. ಶ್ರೀಮಠವನ್ನು ಕಟ್ಟಿದರು. ಮಠದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೃದ್ಧಿಸತೊಡಗಿತು. ಅಕ್ಷರ, ಅನ್ನದಾಸೋಹಕ್ಕೆ ಶ್ರೀಗಳು ಟೊಂಕಕಟ್ಟಿ ನಿಂತರು. 1966ರಲ್ಲಿ ರಾಜ್ಯದಲ್ಲಿ ತಲೆದೋರಿದ ಭೀಕರ ಕ್ಷಾಮ ಶ್ರೀಮಠದ ಸತ್ವವನ್ನೇ ಪಣಕ್ಕಿಟ್ಟಿತು. ಅದು ಶ್ರೀಗಳ ನಿಜವಾದ ‘ಅಗ್ನಿಪರೀಕ್ಷೆ’ ದಿನಗಳು. ಎಲ್ಲವನ್ನೂ ಎದುರಿಸಿ ತ್ರಿವಿಧ ದಾಸೋಹವನ್ನು ಸಮರ್ಥವಾಗಿ ನಿಭಾಯಿಸಿದರು.

ಸಿದ್ಧಗಂಗೆಯ ಊಟ ಚೆಂದ

ಶಿವಕುಮಾರ ಸ್ವಾಮಿಗಳಂತಹ ಕಾಯಕನಿಷ್ಠರಿನ್ನೊಬ್ಬರನ್ನು ಕಾಣಲು ಸಾಧ್ಯವೇ ಇಲ್ಲ. ಶ್ರೀಗಳು ತಾರುಣ್ಯದಲ್ಲಿದ್ದಾಗ ಮಠದ ಜಮೀನಿನಲ್ಲಿ ಸ್ವತಃ ನಾಟಿ ಮಾಡುವುದರಿಂದ ಹಿಡಿದು, ಮೆದೆ ಹಾಕುವುದು, ಒಕ್ಕಲು ಕೆಲಸ ಮಾಡುವುದು, ಗೂಡೆ ನೀರೆತ್ತುವ ಕೆಲಸವನ್ನು ಸ್ವತಃ ಮಾಡುತ್ತಿದ್ದರು. ಅವರ ಮೊದಲ ಆದ್ಯತೆ ದಾಸೋಹ ಮತ್ತು ಕಾಯಕ. ಮಠದ ಜಾತ್ರೆಯಂತಹ ಸಂದರ್ಭದಲ್ಲಿ ಎಷ್ಟೇ ಜನ ಬಂದರೂ ಎಲ್ಲರಿಗೂ ದಾಸೋಹ ಮಾಡಿಸಬೇಕೆಂಬ ಸದಿಚ್ಛೆ ಶ್ರೀಗಳದ್ದಾಗಿತ್ತು. ಅಂದಿನ ಅವರ ಆ ಸಂಕಲ್ಪ ಇಂದಿಗೂ ಚಾಲ್ತಿಯಲ್ಲಿದೆ. ಆದ್ದರಿಂದಲೇ ‘ಸಿದ್ಧಗಂಗೆಯ ಊಟ ಚೆಂದ, ಶಿವಗಂಗೆಯ ನೋಟ ಚೆಂದ‘ ಎಂಬ ನಾಣ್ಣುಡಿ ನಿಜವಾಗಿದೆ.

ದಾಸೋಹದ ಮಹಾಮನೆ

ಸಿದ್ಧಗಂಗೆ ಪುಣ್ಯಕ್ಷೇತ್ರ ಮಾತ್ರವಲ್ಲ. ದಾಸೋಹದ ಮಹಾಮನೆ. ಜ್ಞಾನಪ್ರಸಾರದ ಮಹಾವಿದ್ಯಾಲಯವಾಗಿ ರೂಪುಗೊಂಡಿದೆ. ಇದೆಲ್ಲ ಸಾಧ್ಯವಾದುದು ಶಿವಕುಮಾರ ಶ್ರೀಗಳ ತಪಸ್ಸಿನಿಂದ. ಶ್ರೀಗಳು ಮಠಾಧ್ಯಕ್ಷರಾದಾಗ ಮಠದ ಅಂಗಳದಲ್ಲಿ ಸಂಸ್ಕೃತ ಪಾಠಶಾಲೆ, ಪುಟ್ಟದೊಂದು ವಿದ್ಯಾರ್ಥಿನಿಲಯವಷ್ಟೇ ಇತ್ತು.

ಇಂದು ಜಗತ್ತಿನೆಲ್ಲೆಡೆ ಶ್ರೀಮಠದ ಹೆಸರು ಪಸರಿಸಿದೆ. ಮಠದಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಉದ್ಧಾನ ಶಿವಯೋಗಿಗಳು ಧರ್ಮದ ತಳಹದಿಯಲ್ಲಿ ಹಾಕಿಕೊಟ್ಟಿದ್ದ ಶಿಕ್ಷಣ ಕೇಂದ್ರವನ್ನು ತ್ರಿವಿಧ ದಾಸೋಹದ ಸೌಧವನ್ನಾಗಿ ರೂಪಿಸಿದ ಶಿವಕುಮಾರ ಶ್ರೀಗಳು, ಜಗತ್ತಿನ ಶ್ರೇಷ್ಠ ಸಂತರೆನಿಸಿದರು. ಶ್ರೀಮಠ ಪೀಠಾಧ್ಯಕ್ಷರಾಗಿ 82 ವರ್ಷಗಳ ದೀರ್ಘ ಸೇವೆ ಸಲ್ಲಿಸಿರುವ ‘ಸಂತ’ ಶಿವಕುಮಾರ ಶ್ರೀಗಳು ಸಾಮಾಜಿಕ, ಶೈಕ್ಷಣಿಕ ಪರಿವರ್ತನೆಗಳ ಸಮಾಜ ಸುಧಾರಕರೆನಿಸಿದ್ದರು.

ವೀರಶೈವ ಮಠವಾದರೂ ಇಲ್ಲಿ ಜಾತಿ, ಮತ, ಭೇದವಿಲ್ಲ. ಅಂದು ಬೆರಳೆಣಿಕೆಯಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 10 ಸಾವಿರ ದಾಟಿದೆ. ಮಠದಲ್ಲಿ ಆಶ್ರಯ ಪಡೆಯುತ್ತಿರುವ ನಾಡಿನ ವಿವಿಧೆಡೆಯ ಬಡ, ದೀನ, ದಲಿತ ಮಕ್ಕಳು ಶ್ರೀಗಳಲ್ಲಿ ಮಾತೃವಾತ್ಸಲ್ಯ ಕಾಣುತ್ತಿದ್ದರು. ಮಠದಲ್ಲಿನ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಕಾಯಕ ಸದ್ಭಾವ, ಸಮತಾಭಾವ ಹಾಗೂ ಶ್ರಮಜೀವನ ತನ್ನಿಂತಾನೇ ಮೈಗೂಡಿರುತ್ತದೆ. ಮಠದಲ್ಲಿ ಓದಿದ್ದಾನೆಂದರೆ ಎಲ್ಲಿ ಬೇಕಾದರೂ ಸಲ್ಲುತ್ತಾನೆ ಎಂಬ ಮಾತು ಈಗಲೂ ಚಾಲ್ತಿಯಲ್ಲಿದೆ.

ಕಾಯಕ ತತ್ತ್ವದಲ್ಲಿ ಪೂರ್ಣ ನಂಬಿಕೆಯಿಟ್ಟಿದ್ದ ಶ್ರೀಗಳು ಶರಣ ಪಂಥದವರು. ಬದುಕನ್ನು ಸಮಾಜಕ್ಕಾಗಿ ಅರ್ಪಿಸಿಕೊಂಡ ಮಹಾಪುರುಷರು. ಮಠಾಧಿಪತಿಯಾಗಿ ವೈಯಕ್ತಿಕ ಸಂತೋಷಕ್ಕಿಂತ ಸಾಮಾಜಿಕ ಕರ್ತವ್ಯದಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡು ಲಕ್ಷಾಂತರ ಜನರ ಬಾಳಿಗೆ ಜ್ಯೋತಿಯಾಗಿದ್ದಾರೆ.

ಪೂಜಾನುಷ್ಠಾನ, ಉತ್ಸವಗಳಿಗೆ ಸೀಮಿತವಾಗದೆ ರಾಷ್ಟ್ರ ಕಟ್ಟುವ ಕೆಲಸದಲ್ಲಿ ಮಠಗಳು ಮುಂದಾಗಬೇಕು. ಸಾಮಾಜಿಕ ಪ್ರಜ್ಞೆ ಮಠಗಳಿಗಿರಬೇಕೆಂಬ ವೈಚಾರಿಕತೆ ನಿಲುವು ಶ್ರೀಗಳದ್ದಾಗಿತ್ತು. ದಾಸೋಹದ ಜತೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಸಂಸ್ಕಾರದ ಜತೆಗೆ ಶಿಕ್ಷಣ ನೀಡಿ ಉತ್ತಮ ನಾಗರಿಕರನ್ನಾಗಿ ರೂಪಿಸಲು ಅಹರ್ನಿಶಿ ದುಡಿದಿದ್ದರು.

ಜ್ಞಾನ, ವಿಜ್ಞಾನ, ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಶ್ರೀಮಠದಲ್ಲಿ ಪಸರಿಸಲಾಗುತ್ತದೆ. ದಾರಿದ್ರ್ಯ ಪರಿಸ್ಥಿತಿಯಲ್ಲಿ ವಿದ್ಯಾರ್ಜನೆ ಬಯಸಿ ಬಂದ ವಿದ್ಯಾರ್ಥಿಗಳಿಗೆ ಶ್ರೀಗಳು ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ವಸತಿ ಸೌಕರ್ಯ ಕಲ್ಪಿಸಿಕೊಡುತ್ತಿದ್ದರು. ಶ್ರೀಮಠವನ್ನು ಪವಾಡಮಯ ಕೇಂದ್ರವನ್ನಾಗಿ ಪರಿವರ್ತಿಸಿದ ಶ್ರೀಗಳು ವೈಚಾರಿಕತೆಯ ಹರಿಕಾರರಲ್ಲಿ ಶ್ರೇಷ್ಠರೆನಿಸಿದ್ದರು.

ಉತ್ತರಾಧಿಕಾರಿ ಆದ ಸಂದರ್ಭ

ಶ್ರೀ ಸಿದ್ಧಗಂಗಾ ಮಠದಲ್ಲಿ ತಮ್ಮ ನಡೆ-ನುಡಿಯಿಂದ ಶಿವಣ್ಣ ಎಲ್ಲರ ಪ್ರೀತಿ, ಪ್ರಶಂಸೆಗೆ ಪಾತ್ರರಾದರು. ಮಠದಲ್ಲಿದ್ದ ಎಲ್ಲರ ಅದರಲ್ಲೂ ಉತ್ತರಾಧಿಕಾರಿಯಾಗಿದ್ದ ಶ್ರೀ ಮರುಳಾರಾಧ್ಯರ ವಿಶೇಷ ವಿಶ್ವಾಸ ಗಳಿಸಿದ್ದರು. ಆ ವಿಶ್ವಾಸದ ಫಲವಾಗಿ ರಜಾದಿನಗಳಲ್ಲಿ ತಮ್ಮ ಊರಾದ ವೀರಾಪುರಕ್ಕೆ ಹೋಗದೆ ಮಠಕ್ಕೆ ಬರುತ್ತಿದ್ದರು. ಶ್ರೀ ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಶ್ರೀ ಮರುಳಾರಾಧ್ಯರು 1930ರ ಜನವರಿ 16ರಂದು ಲಿಂಗೈಕ್ಯರಾದರು. ಶಿವಣ್ಣನವರು ಬೆಂಗಳೂರಿನಿಂದ ಬಂದು ಸಿದ್ಧಗಂಗೆಯಲ್ಲಿ ಸಮಾಧಿ ಮಾಡುವ ಕಾರ್ಯದಲ್ಲಿ ನಿರತರಾದರು. ಶ್ರೀ ಉದ್ಧಾನ ಶಿವಯೋಗಿಗಳು ಹುಟ್ಟುತ್ತ ಯೋಗ ಪುರುಷರು, ಹಲವು ಲೀಲೆಗಳನ್ನು, ಪವಾಡಗಳನ್ನು ಮಾಡಿದ ಅದ್ಭುತವಾದ ಪುರುಷ ಶಕ್ತಿಯನ್ನು ಹೊಂದಿದ್ದವರು. 1930ನೇ ವರ್ಷದಲ್ಲಿ 60 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿದ್ದರು. ಅವರ ಸಂಕಲ್ಪಶಕ್ತಿ ಅಸಾಧಾರಣ. ಅವರು ಅಂದುಕೊಂಡದ್ದೆಲ್ಲ ನಿರಾಯಾಸವಾಗಿ ಆಗಿಹೋಗುತ್ತಿತ್ತು. ಶ್ರೀ ಉದ್ಧಾನ ಶಿವಯೋಗಿಗಳು ಬೆಟ್ಟದ ಮೇಲಿನ ಗುಹೆಗಳಲ್ಲಿ ಶಿವಯೋಗಾಭ್ಯಾಸ ಸಾಧನೆ ಮಾಡುತ್ತಿದ್ದರು. ಈ ಅಕಾಲಿಕ ಸನ್ನಿವೇಶದಲ್ಲಿ ಬೆಟ್ಟದ ಮೇಲಿನ ಗುಹೆಯಲ್ಲಿ ತಪಸ್ಸು ಮಾಡಿ ಶಿವಯೋಗ ಸಮಾಧಿಯಲ್ಲಿ ಕುಳಿತರು. ಶಿವಯೋಗ ಸಮಾಧಿ ಸ್ಥಿತಿಯಲ್ಲಿ ಶ್ರೀಮಠದ ಮುಂದಿನ ಉತ್ತರಾಧಿಕಾರಿಯಾಗಿ ಶಿವಣ್ಣನವರನ್ನು ದೈವ ನಿರ್ಣಯವೆಂದು ತಿಳಿದು ಬೆಟ್ಟದಿಂದ ಕೆಳಗೆ ಬಂದು ಶಿವಣ್ಣನನ್ನು ಕರೆದು ‘ಶಿವಣ್ಣ ನೀನೇ ಶ್ರೀ ಸಿದ್ಧಗಂಗಾ ಮಠದ ಉತ್ತರಾಧಿಕಾರಿ, ನಮಸ್ಕಾರ ಹಾಕು’ ಎಂದರು. ಹಿಂದೆ ಮುಂದೆ ಯೋಚಿಸದ ಶಿವಣ್ಣ ಶ್ರೀ ಉದ್ಧಾನ ಶಿವಯೋಗಿಗಳವರ ಪಾದಕ್ಕೆ ಶಿರಸಾಷ್ಟಾಂಗ ನಮಸ್ಕಾರ ಮಾಡಿ ಒಪ್ಪಿಕೊಂಡರು.

ಶರಣ ತತ್ತ್ವ

ಶ್ರೀ ಸಿದ್ಧಗಂಗಾ ಮಠವು ಶರಣತತ್ತ್ವ ಪ್ರಯೋಗ ಶಾಲೆ. ಶರಣರ ತತ್ತ್ವ, ಆದರ್ಶಗಳು ಶ್ರೀಮಠದ ಎಲ್ಲ ಕಾರ್ಯಗಳಲ್ಲಿಯೂ ಪ್ರತಿಫಲಿತವಾಗುತ್ತವೆ. ಕಾಯಕ, ದಾಸೋಹ, ಸಮಾನತೆಯ ಸಾಮಾಜಿಕ ಕ್ರಿಯಾಶೀಲತೆ, ಅಷ್ಟಾವರಣ, ಪಂಚಾಚಾರ, ಷಟ್​ಸ್ಥಲಗಳ ಧಾರ್ವಿುಕ ಕ್ರಿಯಾಶೀಲತೆ ಇಲ್ಲಿನ ವೈಶಿಷ್ಟ್ಯ ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ, ಮಠಕ್ಕೆ ಬಂದು ಹೋಗುವ ಭಕ್ತರಿಗೆ, ಶ್ರೀಮಠದಲ್ಲಿ ವೃತ್ತಿ ಮಾಡುವ ಸಕಲರಿಗೂ ಸಿದ್ಧಗಂಗಾ ಮಠವು ಶರಣತತ್ತ್ವ ಪ್ರಯೋಗಶಾಲೆಯಂತೆ ಗೋಚರವಾದರೆ ಅಚ್ಚರಿಯಿಲ್ಲ. ‘ವ್ಯಕ್ತಿ ಎಷ್ಟೇ ದೊಡ್ಡವನಾದರೂ ತಾತ್ಕಾಲಿಕ, ತತ್ತ್ವ ಎಷ್ಟೇ ಚಿಕ್ಕದಾದರೂ ಶಾಶ್ವತ’ ಎನ್ನುವ ಸಾಕ್ರೆಟೀಸ್​ನ ಮಾತನ್ನು ನೂರಕ್ಕೆ ನೂರು ಅಳವಡಿಸಿಕೊಂಡು ತತ್ತ್ವದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದ ಸೇವಾಸಿರಿ ಶಿವಕುಮಾರ ಸ್ವಾಮೀಜಿ. ತಾವೇ ಸ್ಥಾಪಿಸಿದ ನೂರಾರು ಸಂಸ್ಥೆಗಳಲ್ಲಿ ಒಂದಕ್ಕೂ ತಮ್ಮ ಹೆಸರನ್ನು ಇಟ್ಟಿಲ್ಲ. ಸರ್ಕಾರ ಹೊಸದಾಗಿ ಆರಂಭಿಸಿದ ತುಮಕೂರು ವಿಶ್ವವಿದ್ಯಾಲಯಕ್ಕೆ ತಮ್ಮ ಹೆಸರನ್ನಿಡುವ ನಿರ್ಧಾರವನ್ನು ನಯವಾಗಿ ತಿರಸ್ಕರಿಸಿದ ಬಹುದೊಡ್ಡ ವ್ಯಕ್ತಿತ್ವ ಶ್ರೀಗಳದ್ದು. ಸೇವೆ ಮಾಡುವುದು ಕರ್ತವ್ಯ ಮತ್ತು ಬದ್ಧತೆ ಎಂದು ಸ್ವಾಮೀಜಿ ನಂಬಿದ್ದರು.

ನಗು ಕೊಡುವ ವಿಜ್ಞಾನ ಬೇಕು…

ಜಾತಿ ವ್ಯವಸ್ಥೆ ಸಮಾಜವನ್ನು ದುರ್ಬಲಗೊಳಿಸುತ್ತಿರುವ ಇಂದಿನ ಸಮಾಜದ ಬಗ್ಗೆ ಒಂದಿಷ್ಟಾದರೂ ಆಶಾಭಾವನೆ ಮೂಡಬೇಕಾದರೆ ಸಿದ್ಧಗಂಗೆಯ ವಿಸ್ತಾರ ಅಂಗಣದಲ್ಲಿ ಸಮವಸ್ತ್ರದೊಂದಿಗೆ ಪ್ರಾರ್ಥನೆಗೆ ಕುಳಿತುಕೊಳ್ಳುವ ಸಾವಿರಾರು ಪುಟಾಣಿಗಳ ಒಕ್ಕೊರಲ ದನಿ ಕೇಳಬೇಕು. ಜಾತಿ ವ್ಯವಸ್ಥೆ ಹಾಗೂ ಅನಕ್ಷರತೆ ಇಂದಿನ ಹಲವು ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ‘ಹಸಿವು, ಬಡತನ, ನಿರುದ್ಯೋಗ ಮೊದಲಾದ ಸಮಸ್ಯೆಗಳಿದ್ದರೂ ಅವುಗಳ ನಿವಾರಣೆ ಬದಲು ನಾವು ಜಾತಿ ವ್ಯವಸ್ಥೆಯಲ್ಲಿ ಮುಳುಗಿಹೋಗಿದ್ದೇವೆ’ ಎಂಬ ಶ್ರೀವಾಣಿ ಸಮಾಜವನ್ನು ಎಚ್ಚರಿಸಬೇಕಿದೆ. ‘ಸಕಲ ಜೀವರಿಗೆ ಲೇಸನ್ನೇ ಬಯಸುವ ವಿಜ್ಞಾನವಿಂದು ಬೇಕಾಗಿದೆ. ಬಾಂಬುಗಳು, ಅಣುಬಾಂಬುಗಳ ಮೂಲಕ ಮನುಕುಲವನ್ನು ನಾಶಮಾಡುವ ಯುದ್ಧದ ಅಸ್ತ್ರಕ್ಕಿಂತ ನರಳುತ್ತಿರುವ ಜೀವಿಗಳಿಗೆ ನಗು ತಂದುಕೊಡುವ ವಿಜ್ಞಾನ ಇಂದು ಬೇಕಾಗಿದೆ’ ಎಂಬ ಶ್ರೀಗಳ ಮಾತಂತೂ ಇಂದಿನ ಆಧುನಿಕ ಯುಗಕ್ಕೆ ಅನಿವಾರ್ಯವಿರುವ ವಿವೇಕದ ಕನ್ನಡಿ.

ಬೆರಗುಗೊಳಿಸುವ ಕರ್ತೃತ್ವ ಶಕ್ತಿ

ಪ್ರತಿನಿತ್ಯ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಭಕ್ತಾದಿಗಳಿಗೆ ಅನ್ನದಾಸೋಹ ಕಲ್ಪಿಸುವುದು ಸುಲಭದ ಮಾತಲ್ಲ. ಆದರೆ, ಶಿವಕುಮಾರ ಶ್ರೀಗಳ ಬದ್ಧತೆ ಹಾಗೂ ಕರ್ತೃತ್ವ ಶಕ್ತಿ ಮಠದ ಎಲ್ಲ ಕೆಲಸಗಳನ್ನೂ ಸುಲಭವಾಗಿಸಿತ್ತು. ದಾಸೋಹಕ್ಕಾಗಿ ಪ್ರತಿದಿನ 30 ಕ್ವಿಂಟಾಲ್ ಅಕ್ಕಿ, 15 ಕ್ವಿಂಟಾಲ್ ರಾಗಿಹಿಟ್ಟು, 3 ಕ್ವಿಂಟಾಲ್ ತೊಗರಿಬೇಳೆ, 4 ಕ್ವಿಂಟಾಲ್ ತರಕಾರಿ, 3 ಕ್ವಿಂಟಲ್ ಈರುಳ್ಳಿ, 5 ಕ್ವಿಂಟಾಲ್ ಉಪ್ಪಿಟ್ಟು ರವೆ, 1 ಕ್ವಿಂಟಾಲ್ ಉಪ್ಪು, 1 ಕ್ವಿಂಟಾಲ್ ಸಾಂಬಾರು ಹಾಗೂ ಖಾರದಪುಡಿ, 1 ಕ್ವಿಂಟಾಲ್ ಕಡಲೆಕಾಯಿ ಎಣ್ಣೆ, 60 ಕೆಜಿ ಹುಣಸೇಹಣ್ಣು, 25 ಕೆಜಿ ಮೆಣಸಿನಕಾಯಿ, 300 ಲೀಟರ್ ಹಾಲು(ಮಜ್ಜಿಗೆಗೆ), 300 ತೆಂಗಿನಕಾಯಿ ಬಳಸಲಾಗುತ್ತದೆ. ಹಬ್ಬ, ಜಾತ್ರೆ ಹಾಗೂ ವಿಶೇಷ ದಿನಗಳಂದು ಇವುಗಳ ಪ್ರಮಾಣ ಇನ್ನಷ್ಟು ಜಾಸ್ತಿಯಾಗುತ್ತಿತ್ತು.

ನೀವು ಸಿದ್ಧಗಂಗಾ ಮಠದಲ್ಲಿ ಓದಿದ್ದೀರಾ..

ಸಿದ್ಧಗಂಗಾ ಮಠದಲ್ಲಿ ಉಳಿದುಕೊಂಡು ಓದಿದ ಅನೇಕರು ಜೀವನದ ನಾನಾ ರಂಗಗಳಲ್ಲಿ ಉನ್ನತ ಹಂತಕ್ಕೆ ಏರಿದ್ದಾರೆ. ಅವರು ಅಲ್ಲಿನ ಜೀವನಕ್ರಮವನ್ನು ಸದಾ ನೆನಪಿಸಿಕೊಳ್ಳುತ್ತಾರೆ. ಹಲವಾರು ಕೆಎಎಸ್, ಐಎಎಸ್ ಅಧಿಕಾರಿಗಳು ಹಾಗೂ ಉನ್ನತ ಹುದ್ದೆಯಲ್ಲಿರುವವರು ಬಹಳ ಶಿಸ್ತಿನಿಂದ ನಡೆದುಕೊಂಡರೆ ‘ನೀವು ಸಿದ್ಧಗಂಗಾ ಮಠದಲ್ಲಿ ಓದಿದ್ದೀರಾ’ ಎಂದು ಕೇಳುವುದು ಸಾಮಾನ್ಯ.

ಶ್ರೀವಾಣಿ

  • ಮನುಷ್ಯ ಜೀವನದಲ್ಲಿ ಕಾಯಕ ಮಾಡಿಯೇ ಬದುಕಬೇಕು. ವಂಚನೆ, ದ್ರೋಹ ಮಾಡಬಾರದು. ಸನ್ಮಾರ್ಗದಲ್ಲಿ ನಡೆದುಕೊಂಡರೆ ಭವಿಷ್ಯ ಬಂಗಾರವಾಗುತ್ತದೆ.
  • ಪ್ರತಿ ವ್ಯಕ್ತಿಯೂ ತನ್ನ ಸ್ಥಾನದಲ್ಲಿ ತಾನು ಮಾಡುವ ಕಾರ್ಯವನ್ನು ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಮಾಡಬೇಕು. ಅದೇ ದೇಶಕ್ಕೆ ಸಲ್ಲಿಸುವ ನಿಜವಾದ ಸೇವೆ.
  • ಪ್ರತಿನಿತ್ಯ ಮಲಗುವ ಮುನ್ನ ನಡೆ-ನುಡಿಗಳು ನಡೆಸಿದ ಒಳಿತು ಕೆಡಕುಗಳ ಜಮಾ-ಖರ್ಚನ್ನು ಅವಲೋಕಿಸಬೇಕು. ಮರುದಿನ ತುಳಿಯಬೇಕಾದ ಗುರುಪಥವನ್ನು ಹುಡುಕುವುದರ ಮೂಲಕ ಶಿವಪಥದ ಕಡೆಗೆ ಸಾಗಬೇಕು.

ಬದುಕು ಕೊಟ್ಟ ಕ್ಷೇತ್ರ

ತಪೋವನ ಸದೃಶವಾದ ತುಮಕೂರಿನ ‘ಸಿದ್ಧಗಂಗೆ’ಯ ಪರಿಸರದಲ್ಲಿ ನಾನೊಬ್ಬ ವಿದ್ಯಾರ್ಥಿಯಾಗಿ ಕಳೆದ ಕಾಲವನ್ನು ನೆನೆದರೆ ಧನ್ಯತೆ, ಕೃತಜ್ಞತಾ ಭಾವನೆ ಮೂಡುತ್ತದೆ. ಬಡತನದಿಂದಾಗಿ ವಿದ್ಯಾಭ್ಯಾಸವೇ ಗಗನಕುಸುಮವಾಗಿದ್ದ ನಾನು, ನನ್ನಂಥವರು ಇಂದು ತಲೆಯೆತ್ತಿ ಬದುಕಲು ಸಾಧ್ಯವಾಗಿರುವುದು, ಶ್ರೀಕ್ಷೇತ್ರ ಒದಗಿಸಿದ ಅಶನ-ವಸತಿಗಳ ಆಶ್ರಯದಿಂದಲೇ.

19ನೇ ಶತಮಾನದಲ್ಲಿ ಅರಣ್ಯವಾಸಿ ಅಟವೀಸ್ವಾಮಿಗಳು, ಈ ಕ್ಷೇತ್ರಕ್ಕೆ ಬಂದುಹೋಗುವ ಭಕ್ತಾದಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಪ್ರಾರಂಭಿಸಿ ಹೊತ್ತಿಸಿದ ಒಲೆ ಇಂದಿಗೂ ಆರಿಲ್ಲ. ಕಾರ್ಯನಿಮಿತ್ತ ಬಂದು ದರ್ಶನ ಪಡೆದವರಿಗೆ ಶಿವಕುಮಾರ ಸ್ವಾಮಿಗಳು ಹೇಳುತ್ತಿದ್ದ ಮೊದಲ ಮಾತು ‘ಊಟ ಮಾಡಿಕೊಂಡು ಹೋಗ್ರಪ್ಪಾ. ನಾನು 40ರ ದಶಕದಲ್ಲಿ ಈ ಮಠದಲ್ಲಿದ್ದಾಗ, ರಾತ್ರಿ 10 ಗಂಟೆ ನಂತರ ಕೇಳುತ್ತಿದ್ದ ಘೊಷಣೆ, ‘ಊಟ ಮಾಡೋರು ಯಾರಾದರೂ ಇದ್ದರೆ ಬರ್ರಪ್ಪ.’ ಇಷ್ಟೊಂದು ಜನಕ್ಕೆ ಊಟಹಾಕಲು ಈ ಮಠ ಅಕ್ಷಯಪಾತ್ರೆಯೇ? ಎಂದು ನನಗೆ ಅಚ್ಚರಿಯಾಗಿದ್ದಿದೆ. ಆದರೆ ಜನರೇ ಈ ಮಠದ ಅಕ್ಷಯಪಾತ್ರೆ ಎಂಬುದು ಸೋಜಿಗವೇನಲ್ಲ. ದಾಸೋಹ ಪ್ರಾರಂಭಿಸಿದ ಮೊದಲಲ್ಲಿ, ಅಟವೀ ಸ್ವಾಮಿಗಳೂ, ಉದ್ಧಾನ ಸ್ವಾಮಿಗಳೂ ಜೋಳಿಗೆ ಹಿಡಿದು ಸುತ್ತಲ ಹಳ್ಳಿಗಳಿಂದ ಭಿಕ್ಷಾರೂಪದಲ್ಲಿ ದವಸ-ಧಾನ್ಯ ಸಂಗ್ರಹಿಸಿ ತರುತ್ತಿದ್ದರು. ಶಿವಕುಮಾರ ಸ್ವಾಮಿಗಳೂ ಕಾರ್ಯಕ್ಷೇತ್ರ ವಿಸ್ತರಿಸಿದಾಗ ಮೊದಲು ಮಾಡಿದ ಕೆಲಸವೇ ಇದು. ಇಲ್ಲಿನ ನಿತ್ಯದಾಸೋಹ, ಶಿಕ್ಷಣಕಾರ್ಯ ಕಂಡವರು ತಾವಾಗಿಯೇ ಗಾಡಿಗಳಲ್ಲಿ ದವಸ-ಧಾನ್ಯ ತಂದು ಉಗ್ರಾಣಕ್ಕೆ ಕಾಣಿಕೆಯಾಗಿ ಅರ್ಪಿಸುವುದನ್ನು ಕಂಡಿದ್ದೇನೆ. ಮಠದ ಸಾಮಾಜಿಕ ಜವಾಬ್ದಾರಿಯಲ್ಲಿ ತಮ್ಮ ಪಾತ್ರವೂ ಇದೆ ಎಂಬ ವಿಶ್ವಾಸವನ್ನು ಜನರಲ್ಲಿ ಉಳಿಸಿ ಬೆಳೆಸಿರುವುದು ಶಿವಕುಮಾರ ಸ್ವಾಮಿಗಳ ವ್ಯಕ್ತಿತ್ವವೇ.

ನಾನು ಈ ಮಠದಲ್ಲಿದ್ದಾಗ, ಇಲ್ಲಿ ಆಶ್ರಯ ಪಡೆದವರ ಸಂಖ್ಯೆ ಸುಮಾರು 400ರಷ್ಟಿತ್ತು. ಬಹುಶಃ ಯಾವುದೇ ಸಂಸ್ಥೆ ಇಷ್ಟು ವಿದ್ಯಾರ್ಥಿಗಳಿಗೆ ಉಚಿತ ಅಶನ-ವಸತಿಯ ಅವಕಾಶ ಕಲ್ಪಿಸಿದ ನಿದರ್ಶನ, ಆ ಕಾಲಕ್ಕಂತೂ ಇರಲಿಲ್ಲ. ಈಗ ವಿದ್ಯಾರ್ಥಿಗಳ ಸಂಖ್ಯೆ ಇಪ್ಪತೆôದು ಪಟ್ಟು ಮಿಗಿಲಾಗಿದೆ. ಕೆಲಸದ ದಟ್ಟಣೆಯಿದ್ದರೂ, ಶಿಷ್ಯರೊಂದಿಗೆ ಪ್ರಾರ್ಥನೆಗೆ ಕೂರುವ ಈ ಸಂದರ್ಭವನ್ನು ಶಿವಕುಮಾರ ಸ್ವಾಮಿಗಳು ತಪ್ಪಿಸಿಕೊಳ್ಳುತ್ತಿರಲಿಲ್ಲ. ಜತೆಗೆ ಅಧ್ಯಯನ, ಚಿಂತನೆ. ಯಾವುದೇ ವಿಷಯದ ಕುರಿತು ಉಪನ್ಯಾಸಕ್ಕೆ ನಿಂತರೆ, ತತ್ವಜ್ಞಾನ ಕ್ಷೇತ್ರಗಳಲ್ಲಿನ ತಿಳಿವಳಿಕೆ, ತಮ್ಮ ಸಮಕಾಲೀನತೆಯಲ್ಲಿ ಅವುಗಳಿಗೆ ತೋರುವ ಪ್ರತಿಕ್ರಿಯೆ ಮತ್ತು ಅವುಗಳ ಕುರಿತ ವ್ಯಾಖ್ಯಾನದಿಂದ ಬೆರಗುಗೊಳಿಸುತ್ತಿದ್ದರು.

ದಿನವೂ ಬರುವ ಭಕ್ತಾದಿಗಳ ಯೋಗಕ್ಷೇಮ ವಿಚಾರಿಸುವ, ಗ್ರಾಮೀಣ ಜನರ ನಂಬಿಕೆಗಳನ್ನು ಆಘಾತಗೊಳಿಸದೆ ಅವರಿಗೆ ಅಂತ್ರ-ತಂತ್ರಾದಿಗಳನ್ನು ಬರೆದುಕೊಟ್ಟು ಸಮಾಧಾನಗೊಳಿಸುವ, ಸಮಯಬಿದ್ದರೆ ತಾವೇ ಕೂಲಿಗಾರರ ಜತೆ ಕೆಲಸ ಮಾಡುವ, ಊಟದ ಪಂಕ್ತಿಯ ನಡುವೆ ನಿಂತು ಮಕ್ಕಳೂ, ಭಕ್ತಾದಿಗಳೂ ಊಟ ಮಾಡುವುದನ್ನು ಪ್ರೀತಿಯಿಂದ ವೀಕ್ಷಿಸುವ ಚಟುವಟಿಕೆಗಳಲ್ಲಿನ ಅವರ ಪುಟಿಯುವ ಜೀವಕಾರುಣ್ಯಕ್ಕೆ ಬೆರಗಾಗಿದ್ದೆೆ. ವೈರಾಗ್ಯ ಅಥವಾ ಸಂನ್ಯಾಸ ಎಂದರೆ ಸಂಸಾರ ಮತ್ತು ಸಮಾಜವನ್ನು ತೊರೆದು, ಜನಸಂಗ ದೂರವಾದ ಕಾಡುಮೇಡಲ್ಲೋ,

ಯಾರೂ ಪ್ರವೇಶಿಸಲಾಗದ ಗಿರಿ ದರಿಗಳ ಗುಹಾಂತರಗಳಲ್ಲೋ ಧ್ಯಾನ-ತಪಸ್ಸುಗಳಲ್ಲಿ ನಿರತರಾಗಿ ಅಧ್ಯಾತ್ಮ ಸಾಧನೆಯಲ್ಲಿ ತೊಡಗುವುದು ಎಂಬರ್ಥವಿದ್ದ ಒಂದು ಕಾಲವಿತ್ತು. ಆದರೆ, ಧರ್ಮ ಎಂದರೆ ಬಹುಜನ ಹಿತ ಮತ್ತು ಸುಖಕ್ಕಾಗಿ ತಮ್ಮನ್ನು ಸೇವಾ ಮನೋಭಾವದಿಂದ ತೊಡಗಿಸಿಕೊಳ್ಳುವಿಕೆ ಎಂಬ ಬುದ್ಧನ ಮಾತಿಗೆ ಶಿವಕುಮಾರ ಸ್ವಾಮಿಗಳು ಮೂರ್ತರೂಪವಾಗಿದ್ದರು. ಬುದ್ಧನ ಮಾನವಕಾರುಣ್ಯವನ್ನೂ, ಬಸವನ ತೀವ್ರ ಸಾಮಾಜಿಕ ಕಾಳಜಿಗಳನ್ನೂ ಒಟ್ಟಿಗೇ ಕಾಣಬಹುದಾದದ್ದು ಸಿದ್ಧಗಂಗೆಯಂಥ ಅಪರೂಪದ ಕ್ಷೇತ್ರಗಳಲ್ಲಿ ಹಾಗೂ ಶ್ರೀ ಶಿವಕುಮಾರ ಸ್ವಾಮಿಗಳಂಥವರ ವ್ಯಕ್ತಿತ್ವದಲ್ಲಿ ಮಾತ್ರ.

(ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಧಿವಶರಾಗುವ ಕೆಲ ತಿಂಗಳ ಮುನ್ನ ಸ್ಮರಣ ಸಂಚಿಕೆಯೊಂದಕ್ಕೆ ಶ್ರೀಗಳ ಬಗ್ಗೆ ಬರೆದಿದ್ದ ಬರಹ)

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...