18.1 C
Bangalore
Saturday, December 7, 2019

ಕಾಯಕ ಮಹಿಮೆ ಸಾರಿದ ಚೇತನ

Latest News

ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೃಷಿ ಮಾರಾಟ ಇಲಾಖೆ

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಹಾಗೂ ಏಜೆನ್ಸಿ ನಿಗದಿಪಡಿಸಲು ಕೋರಿ ಕೃಷಿ ಮಾರಾಟ...

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ಶ್ರೀಕೃಷ್ಣನ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ

ಬಾಗಲಕೋಟೆ: ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಶ್ರೀಕೃಷ್ಣನ ನೀಡಿದ ಗೀತೋಪದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಉಡುಪಿ ಶ್ರೀಕೃಷ್ಣಮಠದ ಭಾವಿ ಪರ್ಯಾಯ ಪೀಠಾಧೀಶ, ಅದಮಾರು ಶ್ರೀ ಈಶಪ್ರಿಯತೀರ್ಥ...

ಅವರ ಜೀವನವೇ ಸಂದೇಶವಾಗಿತ್ತು. ಮಾನವೀಯತೆಯ ಸಾಕ್ಷಾತ್ ಮೂರ್ತಿಯಾಗಿ ಲಕ್ಷೋಪಲಕ್ಷ ಜನರನ್ನು ಉದ್ಧರಿಸಿದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಸಾರ್ಥಕತೆಯ ಜೀವನಧರ್ಮವನ್ನು ಪರಿಚಯಿಸಿದರು. ಇತರರಿಗಾಗಿ ಬಾಳುವುದರಲ್ಲಿನ ಧನ್ಯತೆಯನ್ನು ತೋರಿಸಿಕೊಟ್ಟು ತ್ರಿವಿಧ ದಾಸೋಹದ ಮೂಲಕ ಕರುನಾಡಿನ ಕೀರ್ತಿಯನ್ನು ಎತ್ತರಕ್ಕೆ ಏರುವಂತೆ ಮಾಡಿದ ಅವರು ಅಕ್ಷರಶಃ ನಡೆದಾಡುವ ದೇವರಾಗಿದ್ದರು. ಅವರ ಮಾತು, ಬದುಕು, ಸಂದೇಶ ಶತಶತಮಾನಗಳಿಗೆ ಉಜ್ವಲ ಬೆಳಕು ಒದಗಿಸುವಂಥದ್ದು.

ಶಿಲೆಯೊಳಗಣ ಪಾವಕದಂತೆ, ಉದಕದೊಳಗಣ ಪ್ರತಿಬಿಂಬದಂತೆ…

ಅಲ್ಲಮಪ್ರಭುವಿನ ಈ ವಚನ ಕೇಳಿದಾಗಲೆಲ್ಲ ‘ನಡೆದಾಡುವ ದೇವರು’ ಎಂದೇ ಪ್ರಸಿದ್ಧರಾದ ತುಮಕೂರಿನ ಸಿದ್ಧಗಂಗಾ ಮಠಾಧೀಶ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ನೆನಪಾಗುತ್ತಾರೆ. ಆಡದಲೆ ಮಾಡುವ ರೂಢಿಯೊಳಗುತ್ತಮರಾಗಿದ್ದರು. ಸಿದ್ಧಗಂಗಾ ಶ್ರೀಗಳು ಸಾರಿದ ತತ್ತ್ವ, ಬದುಕಿದ ಪರಿ ಇಡೀ ವಿಶ್ವಕ್ಕೇ ಮಾದರಿ. ‘ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ’ ಎಂಬ ಅಲ್ಲಮನ ವಚನ ಸಾರವನ್ನು ಚಾಚೂ ತಪ್ಪದೆ ಕಾರ್ಯರೂಪಕ್ಕಿಳಿಸಿದವರಲ್ಲಿ ಶ್ರೀಗಳು ಅಗ್ರಗಣ್ಯರಾಗಿದ್ದರು. ಸಿದ್ಧಗಂಗಾ ಶ್ರೀಗಳು ಈ ನಾಡಿನ ಅಪರೂಪದ ಅಚ್ಚರಿ. ತ್ರಿವಿಧ ದಾಸೋಹದ ಸಾಕಾರಮೂರ್ತಿ. ಪ್ರೀತಿ-ವಾತ್ಸಲ್ಯದ ಮಹಾಮೇರು. ಬಡವ-ಬಲ್ಲಿದರೆನ್ನದೆ ಎಲ್ಲರನ್ನೂ ಸಮಭಾವದಿಂದ ಕಾಣುತ್ತಿದ್ದ್ದ ಸಮದರ್ಶಿ. ಜಾತಿ, ಮತ ಭೇದವಿಲ್ಲದೆ ತ್ರಿವಿಧ ದಾಸೋಹದಿಂದ, ಇಳಿವಯಸ್ಸಿನಲ್ಲೂ ಪಾದರಸದಂತಿದ್ದು ಜಗತ್ತಿನ ಜನರನ್ನೇ ಬೆರಗುಗೊಳಿಸುತ್ತಿದ್ದ ಶ್ರೀಗಳು, ಲಕ್ಷಾಂತರ ಜನರ ಬದುಕಿನ ನಂದಾದೀಪವಾಗಿದ್ದರು. ‘ವಿಶ್ರಾಂತಿಯೆಂದರೆ ಗಂಟೆಗಟ್ಟಲೆ ಹಾಸಿಗೆ ಮೇಲೆ ಮಲಗಿ ನಿದ್ರಿಸುವುದಲ್ಲ. ಹರಟೆ ಬಿಟ್ಟು ಬೇಸರವಿಲ್ಲದೆ ಹಲವು ಕಾರ್ಯಗಳಲ್ಲಿ ತೊಡಗಿಕೊಳ್ಳುವುದು. ಕೆಲಸದ ಪಲ್ಲಟವೇ ವಿಶ್ರಾಂತಿ’ ಎನ್ನುತ್ತಿದ್ದರು ಸಿದ್ಧಗಂಗಾ ಶ್ರೀಗಳು.

ಕರ್ಮಯೋಗಿ: ‘ಮಹಾತ್ಮರು ಯಾವುದೇ ಒಂದು ಯುಗ, ದೇಶಕ್ಕೆ ಸೇರಿದವರಲ್ಲ. ಅವರ ಇರುವಿಕೆ ಸಾರ್ವಕಾಲಿಕ, ಸರ್ವತ್ರವಾದದ್ದು’ ಎಂದು ಆಂಗ್ಲ ಸಾಹಿತಿ ಬೆನ್ ಜಾನ್ಸನ್ ಹೇಳಿದ್ದು ತುಮಕೂರಿನ ಸಿದ್ಧಗಂಗಾ ಸ್ವಾಮೀಜಿಯವರಿಗೆ ಅಕ್ಷರಶಃ ಅನ್ವಯವಾಗುತ್ತದೆ. ಸ್ವಾಮೀಜಿ ಎಂದರೆ ಹೀಗಿರಬೇಕೆಂದು ಕೊಂಡಾಡುವ ರೀತಿ ಬಾಳಿದರು ಸಿದ್ಧಗಂಗಾ ಶ್ರೀಗಳು. ಬದುಕಿನಲ್ಲಿ ಸಾರ್ಥಕತೆ ಮೆರೆದ ಸಾಧಕರಿವರು. ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಕರ್ಮಯೋಗಿ. ಅವರ ಕಾಯಕ ತಪಸ್ಸು ಶ್ರೀಮಠವನ್ನು ಇಂದು ವಿಶ್ವ ಭೂಪಟದಲ್ಲಿ ಕಾಣುವಂತೆ ಮಾಡಿದೆ.

‘ಕರ್ಮಣ್ಯೇ ವಾಧಿಕಾರಸ್ಥೇ ಮಾ ಫಲೇಷು ಕದಾಚನ’ ಎಂಬ ಭಗವದ್ಗೀತೆಯ ನುಡಿಯಂತೆ ಸ್ವಾಮೀಜಿಯವರ ಕೈಂಕರ್ಯವೆಲ್ಲವೂ ಲೋಕಕಲ್ಯಾಣಕ್ಕೇ ಮೀಸಲಾಗಿತ್ತು. ಹಸಿದವರಿಗೆ ಅನ್ನ ನೀಡಿದರು, ಅಕ್ಷರಾಕಾಂಕ್ಷಿಗಳಿಗೆ ವಿದ್ಯಾದಾನ ಮಾಡಿದರು, ಆಶ್ರಯ ಬಯಸಿದವರಿಗೆ ವಸತಿ ನೀಡಿ ‘ತ್ರಿವಿಧ ದಾಸೋಹಿ’ಗಳಾಗಿದ್ದರು.

ಶಿಸ್ತಿಗೆ ಪರ್ಯಾಯ: ಮಠ-ಪೀಠಗಳ ಮೂಲ ಆಶಯ ಸಮಾಜಕ್ಕೆ ಸನ್ಮಾರ್ಗ ತೋರುವ, ಸಂಸ್ಕಾರ ನೀಡುವುದೇ ಆಗಿದೆ. ಇದ್ದವರಿಂದ ಪಡೆದು ಇಲ್ಲದವರಿಗೆ ಹಂಚುವ ಗುರುತರ ಜವಾಬ್ದಾರಿ ಮಠಗಳಿಗಿದೆ. ಈ ಆಶಯಕ್ಕೆ ಧಕ್ಕೆಯಾಗದಂತೆ, ಆಚರಣೆಗೆ ಚ್ಯುತಿಯಾಗದಂತೆ, ಅನೂಚಾನ ಪದ್ಧತಿ, ಪರಂಪರೆಗಳು ಮುಕ್ಕಾಗದಂತೆ ಸಿದ್ಧಗಂಗೆಯ ಪವಿತ್ರ ಪರಂಪರೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಕೀರ್ತಿ ಶಿವಕುಮಾರ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಸುದೀರ್ಘ ಸಂನ್ಯಾಸ ಜೀವನದಲ್ಲಿ ಕಿಂಚಿತ್ತೂ ಲೋಪವಿಲ್ಲದಂತೆ ಶ್ರೀಮಠವನ್ನು ನಡೆಸಿದ್ದಾರೆ. 22ನೇ ವಯಸ್ಸಿನಲ್ಲೇ ವಿರಕ್ತ ದೀಕ್ಷೆ ಸ್ವೀಕರಿಸಿದ ಶಿವಕುಮಾರ ಸ್ವಾಮೀಜಿಗೆ ಗೊತ್ತಿದ್ದದ್ದು ಕೇವಲ ಸೇವೆ, ಶಿಸ್ತು ಮತ್ತು ಕಾಯಕ. ಸೇವೆಗೆ ಅನ್ವರ್ಥಕ, ಶಿಸ್ತಿನ ಪರ್ಯಾಯ ರೂಪ. ಶಿವಕುಮಾರ ಸ್ವಾಮೀಜಿ ನಮ್ಮ ನಾಡಿನ ಕೀರ್ತಿಕಲಶ. ಕಾರಣ ನಾಡಿನ ಶೈಕ್ಷಣಿಕ ಸಾಧನೆಗೆ, ದಾಸೋಹದ ಪರಿಕಲ್ಪನೆಗೆ, ಸಂನ್ಯಾಸಧರ್ಮದ ಇತಿಹಾಸಕ್ಕೆ ಹೊಸ ವ್ಯಾಖ್ಯಾನ ಕೊಟ್ಟ ಶ್ರೇಷ್ಠರು. ಮಠಗಳೆಂದರೆ ಕೇವಲ ಭಕ್ತರ ಮನೆಯ ಬಿನ್ನಹ, ಪಾದಪೂಜೆ, ಪಲ್ಲಕ್ಕಿ, ಧರ್ಮಸಂದೇಶ ಎಂಬುದನ್ನು ಮೀರಿ ತ್ರಿವಿಧ ದಾಸೋಹದ ಮೂಲಕ ಈ ನಾಡಿನ ಗೌರವವನ್ನು ಹೆಚ್ಚಿಸಿದ್ದಾರೆ. ಕೇವಲ ವೃತ್ತಿಪರ ಕಾಲೇಜುಗಳನ್ನು ತೆರೆದು ಆರ್ಥಿಕ ಸಬಲತೆಗೆ ಹವಣಿಸುವ ಸಂಘ-ಸಂಸ್ಥೆಗಳ ನಡುವೆ ಶಿವಕುಮಾರ ಸ್ವಾಮೀಜಿ ಬಡಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡುವುದನ್ನೇ ಮೊದಲ ಆದ್ಯತೆಯನ್ನಾಗಿಸಿಕೊಂಡಿದ್ದರು. ಅವರ ಈ ಸತ್ಕಾಳಜಿಯ ವಿರಾಟ ದರ್ಶನಕ್ಕೆ ಸಾಕ್ಷಿಯಾಗಿ ಶ್ರೀಮಠದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಭಾರತದ ಅನರ್ಘ್ಯ  ರತ್ನ

ಅನ್ನ, ಅಕ್ಷರ, ವಸತಿ ದಾಸೋಹಗಳ ಮೂಲಕ ಜಗತ್ಪ್ರಸಿದ್ಧಿಯಾಗಿದ್ದ ಸಿದ್ಧಗಂಗಾ ಶ್ರೀಗಳು ಅನನ್ಯ ಸೇವೆ ಮೂಲಕ ಭಾರತದ ಅರ್ನ್ಯಘ ರತ್ನ ಎನಿಸಿದ್ದರು. ಯುಗದ ಸಂತ ಶಿವಕುಮಾರ ಶ್ರೀಗಳಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತರತ್ನ ಸಿಗಬೇಕೆಂಬುದು ಲಕ್ಷಾಂತರ ಭಕ್ತರ ಆಶಯವಾಗಿತ್ತು. ಆದರೆ, 2015ರ ಗಣರಾಜ್ಯೋತ್ಸದಂದು ಕೇಂದ್ರ ಸರ್ಕಾರ ಪದ್ಮಭೂಷಣ ಘೊಷಣೆ ಮಾಡಿದಾಗ ಶ್ರೀಮಠದಲ್ಲಿ ಸಂಭ್ರಮ ಕಾಣಲಿಲ್ಲ. ಭಕ್ತರಲ್ಲಿ ನಿರಾಸೆಯ ಭಾವ ಮೂಡಿತ್ತು. ಪದ್ಮಭೂಷಣ ಪ್ರಶಸ್ತಿ ಬಂದಿದೆ ಎಂದು ಜಿಲ್ಲಾಡಳಿತ ಸುದ್ದಿ ಮುಟ್ಟಿಸಿದಾಗಲೂ ಶ್ರೀಗಳು ನಿರ್ಮಲಚಿತ್ತರಾಗಿದ್ದರು. ಎಂದಿನಂತೆ ಮಠದ ಕಾರ್ಯದಲ್ಲಿ ತೊಡಗಿದ್ದ ಶ್ರೀಗಳಿಗೆ ಪ್ರಶಸ್ತಿಗಿಂತ ಕಾಯಕವೇ ದೊಡ್ಡದೆನಿಸಿತ್ತು. ಕಾಯಕವೇ ಕೈಲಾಸವೆಂಬ ತತ್ತ್ವವನ್ನು ಅಕ್ಷರಶಃ ಮೈಗೂಡಿಸಿಕೊಂಡಿರುವ ಕರ್ಮಯೋಗಿಗೆ ಭಾರತರತ್ನ ಪ್ರಶಸ್ತಿ ಗೌರವ ಸಿಗಲಿಲ್ಲವೆಂಬ ನೋವು ಲಕ್ಷಾಂತರ ಭಕ್ತರಲ್ಲಿತ್ತು. ಶ್ರೀಗಳು ಎಂದೂ ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋದವರಲ್ಲ. ನೂರಾರು ಪ್ರಶಸ್ತಿಗಳು ಅವರನ್ನೇ ಹುಡುಕಿಕೊಂಡು ಬಂದಿವೆ.

ಪ್ರಶಸ್ತಿಗಿಂತ ಹಿರಿಯರು: ಶ್ರೀಗಳು ಪದ್ಮಭೂಷಣ ಪ್ರಶಸ್ತಿ ನಿರಾಕರಿಸಬೇಕೆಂಬ ಒತ್ತಡ ಭಕ್ತರದ್ದಾಗಿತ್ತು. ಶ್ರೀಗಳು ಒತ್ತಡಕ್ಕೆ ಮಣಿಯಲಿಲ್ಲ. ಅವರು ಪ್ರಶಸ್ತಿಗೆ ಅಗೌರವ ತೋರುವ ಕಾರ್ಯಕ್ಕೆ ಮುಂದಾಗಲಿಲ್ಲ. ಶ್ರೀಗಳ ಮೌನ ಭಕ್ತರನ್ನು ಕಟ್ಟಿಹಾಕಿತ್ತು. ಮಠದಲ್ಲಿ ಕವಿದಿದ್ದ ನಿರಾಶೆಯ ಮೋಡ ನಿಧಾನವಾಗಿ ಕರಗಿಹೋಗಿತ್ತು. ಸಿದ್ಧಗಂಗಾ ಶ್ರೀಗಳು ಪ್ರಶಸ್ತಿ ಸ್ವೀಕರಿಸಲು ವಯೋಸಹಜ ಕಾರಣ ದೆಹಲಿಗೆ ತೆರಳಲಿಲ್ಲ. ಶಿಷ್ಟಾಚಾರದಂತೆ ಇಲಾಖೆ ಅಧಿಕಾರಿಗಳೇ ಶ್ರೀಮಠಕ್ಕೆ ಬಂದು ಶ್ರೀಗಳಿಗೆ ಪದ್ಮಭೂಷಣ ಪ್ರಶಸ್ತಿ ಗೌರವ ಸಮರ್ಪಿಸಿದ್ದರು.

ಮಠಾಧೀಶರಿಗೆ ಮಾದರಿ

ಭಾರತವನ್ನು ಇಡೀ ಜಗತ್ತು ವಿಶ್ವಗುರುವೆಂದು ಕರೆಯುತ್ತದೆ. ಗುರುವಿನ ಮಾನದಂಡ ಸರಸ್ವತಿ. ಯಾರಲ್ಲಿ ವಿದ್ಯೆ ಇದೆಯೋ, ಯಾರಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ಇದೆಯೋ ಅವರನ್ನು ಗುರುವೆಂದು ಕರೆಯುತ್ತಾರೆ. ಇಡೀ ಜಗತ್ತಿಗೆ ಬೇಕಾದ ಜ್ಞಾನ ಭಾರತದಲ್ಲಿದೆ ಎಂಬ ಕಾರಣಕ್ಕೆ ಭಾರತವನ್ನು ವಿಶ್ವಗುರುವೆಂದು ಬಣ್ಣಿಸಲಾಗುತ್ತದೆ. ಅಂತೆಯೇ ನಮ್ಮ ಶ್ರೀಮಂತ ಸಂಸ್ಕೃತಿಯಲ್ಲಿ ಗುರುವಿನ ಮಹತ್ವ ಅತ್ಯಂತ ಹಿರಿದು. ಅಂತಹ ಹಿರಿಯ ಸಂಸ್ಕೃತಿಗೆ ಮತ್ತಷ್ಟು ಮೆರುಗು ತಂದ ಸಂತ ಮಹಾಂತರೇ ನಮ್ಮ ಸಮಾಜದ ಸದ್ಗತಿಗೆ ಕಾರಣೀಭೂತರು. ಈ ಭರತ ಭೂಮಿಯಲ್ಲಿ ಆಗಿಹೋಗಿರುವ ಮಹಾತ್ಮರ, ಗುರುಗಳ ಸ್ಥಾನ ಏನೆಂಬುದು ಗೊತ್ತು. ಆದರೆ ಭೂತ, ಭವಿಷ್ಯ, ವರ್ತಮಾನದಲ್ಲಿ ಎಲ್ಲ ಕಾಲಕ್ಕೂ; ಗುರುವೆಂದರೆ ಹೇಗಿರಬೇಕು, ಗುರುವೆಂದರೆ ಹೀಗಿದ್ದಿರಬಹುದು, ಗುರುವೆಂದರೆ ಹೀಗೇ ಇರಬೇಕು ಎಂಬ ಚಿತ್ರಣವನ್ನು ಗುರುಪುಂಗವ ಸಿದ್ಧಗಂಗೆಯ ಸಿದ್ಧಿಪುರುಷ, ವೀರಾಪುರದ ವಿರಾಗಿ, ಸಂನ್ಯಾಸಧರ್ಮದ ಶಿವಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಸಂತರ ಸಾಲಿಗೆ ನೀಡಿದ್ದರು.

ಆದರ್ಶ ಗುರು

ಪಾಂಡಿತ್ಯಪೂರ್ಣ ವಿಚಾರಗಳನ್ನು ಜನರೆದುರು ಸಾದರಪಡಿಸುತ್ತಿದ್ದ ಶತಾಯುಷಿ ಶ್ರೀಗಳು, ಸರಳ ಜೀವಿಗಳು, ಬಸವಣ್ಣನ ತತ್ತ್ವಗಳಲ್ಲಿ ಅಪಾರ ನಂಬಿಕೆಯುಳ್ಳವರಾಗಿದ್ದರು. ಧರ್ಮಶಾಸ್ತ್ರಗಳ ಬಗ್ಗೆ ಪ್ರಭುತ್ವದಿಂದ ಮಾತನಾಡಬಲ್ಲ ಆದರ್ಶ ಗುರುವಾಗಿದ್ದರು. ಶಿವಕುಮಾರ ಶ್ರೀಗಳನ್ನು ಕಂಡವರು, ಕೇಳಿದವರು, ಕಲ್ಪಿಸಿದವರು, ಚಿತ್ರಿಸಿಕೊಂಡಿರುವ ದಿವ್ಯ ವ್ಯಕ್ತಿತ್ವವನ್ನು ಹತ್ತು ಹಲವು ರೀತಿಗಳಲ್ಲಿ ನಮ್ಮ ಎಲ್ಲ ಭಾಷಾಸಂಪತ್ತನ್ನು ಬಳಸಿಕೊಂಡು ವರ್ಣಿಸಿದರೂ ಮುಗಿಯದ, ಒಂದು ಅಪರೂಪದಲ್ಲಿ ಅಪರೂಪವಾದ ಮಹಾವ್ಯಕ್ತಿತ್ವ ಅವರದಾಗಿತ್ತು. ಎಲ್ಲದಕ್ಕಿಂತ ಮಿಗಿಲಾಗಿ ಶ್ರೀಗಳು ವಿದ್ಯಾರ್ಥಿಗಳ ಸರ್ವ ಶ್ರೇಯೋಭಿವದ್ಧಿಗಾಗಿ ರೂಪಿಸಿರುವ ಭವ್ಯ ಗುರುಕುಲ, ಅಲ್ಲಿನ ಮಹತ್ವದ ಸಾಧನೆಗಳು, ಉತ್ಸವಗಳು, ಯೋಜನೆಗಳು, ಎಂದೂ ನಿಲ್ಲದ ನಿತ್ಯ ಅನ್ನದಾಸೋಹ ಎಂಥವರನ್ನೂ ಮೂಕವಿಸ್ಮಿತರನ್ನಾಗಿಸುವಂತಿತ್ತು. ಅವರೊಬ್ಬ ಏಕಾಮೇವಾದ್ವಿತೀಯ ದಿವ್ಯಶಕ್ತಿಯಾಗಿದ್ದರು.

ಒಂಟಿ ಕಾಲಲ್ಲಿ ನಿಲ್ಲುವ ಶಿಕ್ಷೆ

ಇಳಿವಯಸ್ಸಿನಲ್ಲೂ ಶ್ರೀಗಳು ಜನರ ಭಾವನೆಗಳಿಗೆ ಧಕ್ಕೆ ಬಾರದ ಹಾಗೆ ಅಮಾವಾಸ್ಯೆಯ ಕಟ್ಲೆಕಾಯಿ, ಯಂತ್ರಗಳನ್ನು ಬರೆಯುತ್ತಿದ್ದದ್ದನ್ನು ನೋಡಿದರೆ ಅವರಿಗೆ ಜನರ ಭಾವನೆಗಳಿಗೆ ಸ್ಪಂದಿಸುವ ತಪೋಶಕ್ತಿ ಇತ್ತು ಎನಿಸುತ್ತಿತ್ತು. ಅವರ ಗುರುಗಳು ಎಷ್ಟೊಂದು ಶಿಸ್ತನ್ನು ಅವರಿಗೆ ಕಲಿಸಿದ್ದರೆಂದರೆ, ಒಮ್ಮೆ ಶ್ರೀಗಳು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕಾರ್ಯಕ್ರಮವೊಂದಕ್ಕೆ ಹೋದ ಸಂದರ್ಭ. ಅಲ್ಲಿ ಅವರು ನೀಡಿದ ಉಪನ್ಯಾಸಕ್ಕಾಗಿ ಸಂಘಟಕರು ಗೌರವಧನ ನೀಡಿದರು. ಈ ಹಣವನ್ನು ಶ್ರೀಗಳು ಮಠಕ್ಕೆ ತರದೆ ವಿಶ್ವವಿದ್ಯಾಲಯದಲ್ಲಿ ಪುಸ್ತಕಗಳನ್ನು ಖರೀದಿ ಮಾಡಿದ್ದರು. ಈ ವಿಷಯ ತಿಳಿದ ಇವರ ಗುರುಗಳು ಶ್ರೀಗಳನ್ನು ಒಂಟಿಕಾಲಿನಲ್ಲಿ ನಿಲ್ಲಿಸಿದ್ದರಂತೆ. ಅಂದರೆ ಮಠದ ಪರವಾಗಿ ಹೋಗಿ ಉಪನ್ಯಾಸ ನೀಡಿದ ಮೇಲೆ ಆ ಹಣ ಮಠಕ್ಕೆ ತರಬೇಕಿತ್ತು. ಪುಸ್ತಕ ಖರೀದಿಸಿದ್ದು ಏಕೆ ಎಂದು ಪ್ರಶ್ನಿಸಿದ್ದರು.

ಬೆತ್ತದಿಂದ ಪೆಟ್ಟು…

ಶ್ರೀಗಳು ವಿದ್ಯಾರ್ಥಿನಿಲಯದಲ್ಲಿರುವ ಪ್ರತಿ ಕೊಠಡಿಯ ಬಾಗಿಲನ್ನು ತಮ್ಮ ಬೆತ್ತದಿಂದ ಬಡಿದು ಮಕ್ಕಳನ್ನು ಎಬ್ಬಿಸುತ್ತಿದ್ದರು. ಮಕ್ಕಳಿಗೂ ಅವರ ಆವುಗೆ ಹಾಗೂ ಬೆತ್ತದ ಶಬ್ದ ಕೇಳುತ್ತಿದ್ದ ಹಾಗೆ ಎಚ್ಚರವಾಗುತ್ತಿತ್ತು. ಮಕ್ಕಳು ಕಲಿಕೆಯಲ್ಲಿ ನಿರಾಸಕ್ತಿ ತೋರಿದರೆ ಅಥವಾ ಅತಿಯಾದ ತುಂಟತನ ಮಾಡಿದರೆ ಶ್ರೀಗಳು ಬೆತ್ತದಿಂದ ಪೆಟ್ಟನ್ನೂ ನೀಡಿ ಬುದ್ಧಿ ಹೇಳುತ್ತಿದ್ದರು. ಉದಾಹರಣೆಗೆ, ಬೆಂಗಳೂರಿನಲ್ಲಿರುವ ವೀರಶೈವ ವಿದ್ಯಾಭಿವೃದ್ಧಿ ಕ್ಷೇತ್ರದಲ್ಲಿ ಲಕ್ಷಾಂತರ ಮಕ್ಕಳಿಗೆ ವಿದ್ಯೆ ಹಾಗೂ ವಸತಿ ಸೌಕರ್ಯ ನೀಡುತ್ತಿರುವ ಬಿ.ಎಸ್. ಪರಮಶಿವಯ್ಯ ಅವರು ‘ಸಿದ್ಧಗಂಗಾ ಶ್ರೀಗಳ ಬೆತ್ತದ ಏಟನ್ನು ತಿಂದಿದ್ದೇನೆ. ಹಾಗಾಗಿ ನಾನು ಇಂದು ಜಾಗೃತ ಮನಸ್ಸುಳ್ಳವನಾಗಿ, ಈ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗಿರುವುದು’ ಎಂದು ಸ್ಮರಿಸಿಕೊಳ್ಳುತ್ತಾರೆ.

ಹೀಗಿತ್ತು ಶ್ರೀಗಳ ದಿನಚರಿ

ಬೆಳಗಿನ ನಾಲ್ಕು ಗಂಟೆಗೇ ಎದ್ದು ಸ್ನಾನ ಪೂರೈಸಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಶ್ರೀಗಳ ದಿನಚರಿ ಆರಂಭವಾಗುತ್ತಿತ್ತು. ಮುಂಜಾನೆ ಮಿತಾಹಾರ ಸೇವನೆಯ ನಂತರ ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದ ಶ್ರೀಗಳು ನಂತರ ಕಚೇರಿಗೆ ಆಗಮಿಸಿ ಭಕ್ತರಿಗೆ ದರ್ಶನ ನೀಡುತ್ತಿದ್ದರು, ಕುಶಲೋಪರಿ ವಿಚಾರ, ಗಣ್ಯರ ಭೇಟಿ, ಆಡಳಿತದ ಕಡೆ ಗಮನ, ಭಕ್ತರ ಕಷ್ಟ-ಸುಖಕ್ಕೆ ಸ್ಪಂದನ ಹೀಗೆ ಮಧ್ಯಾಹ್ನ ಮೂರರವರೆಗೂ ಸಾಗುತ್ತಿತ್ತು. ಬಳಿಕ ಮತ್ತೆ ಸ್ನಾನ, ಪೂಜೆ ನಂತರ ಮಿತ ಭೋಜನ. ಪುನಃ ಭಕ್ತಗಣದ ಭೇಟಿ, ಮಠದ ಮಕ್ಕಳ ಕುಶಲೋಪರಿ, ದಾಸೋಹದ ಮಾಹಿತಿ ಪಡೆಯುವ ಕಾರ್ಯ ರಾತ್ರಿ 11ರವರೆಗೂ ಸಾಗುತ್ತಿತ್ತು.

ಗಂಗಾಸಂಗಮ ಎಂದಿದ್ದರು ವಾಜಪೇಯಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ‘ಸಿದ್ಧಗಂಗಾ ಹಲವು ‘ಗಂಗಾ’ಗಳ ಸಂಗಮ ಪ್ರವಾಹ. ಇಲ್ಲಿ ಕರ್ಮದ ಗಂಗಾ ಕಾಯಕ, ಜ್ಞಾನಗಂಗಾ, ಗೌರವಗಂಗಾ ಮತ್ತು ಕಾರುಣ್ಯ ಗಂಗಾ ಸಮರಸಗೊಂಡು ಹರಿಯುತ್ತಿವೆ. ಇಲ್ಲಿ ಜ್ಞಾನಯಜ್ಞ ಶತಮಾನಗಳ ಪರ್ಯಂತ ಮುಂದುವರಿದಿದೆ. ಇದು ಇತಿಹಾಸಕ್ಕೆ ಸುಯೋಗ್ಯವಾದ ನಿದರ್ಶನ’ ಎಂದಿದ್ದರು.

ಶ್ರೀವಾಣಿ

  • ನಿಜಜೀವನದಲ್ಲಿ ಅಧಿಕಾರಿಗಳಲ್ಲಿ, ಮುಖಂಡರಲ್ಲಿ ಸಮಯಪ್ರಜ್ಞೆಯೇ ಇಲ್ಲ. ಕಾರ್ಯಕ್ರಮಕ್ಕೆ ಗಂಟೆಗಟ್ಟಲೆ ತಡವಾಗಿ ಬರುತ್ತಾರೆ. ಇದು ಅವ್ಯವಸ್ಥೆಯ ಪ್ರಪಂಚ. ಹಿಂದೆ ಸಮಯ ಪರಿಪಾಲನೆ ದೊಡ್ಡವರ ಜೀವನದಲ್ಲಿ ಬಹುಮುಖ್ಯವಾಗಿತ್ತು.
  • ಮನುಷ್ಯನ ಜೀವನದಲ್ಲಿ ಚಿಂತೆ ಎನ್ನುವ ಮಹಾವ್ಯಾಧಿ ಹಾನಿಕಾರಕವಾದದ್ದು, ಕಷ್ಟಕರವಾದದ್ದು. ಮನುಷ್ಯ ಸಾಧ್ಯವಾದಮಟ್ಟಿಗೆ ಚಿಂತೆ ಮಾಡುವಂತಹ ಪ್ರವೃತ್ತಿಯನ್ನು ಬಿಟ್ಟುಬಿಡಬೇಕು.
  • ಅಧ್ಯಯನಶೀಲನಾಗದ ಶಿಕ್ಷಕ ವಿದ್ಯಾರ್ಥಿಗಳನ್ನು ಸ್ಪೂರ್ತಿಗೊಳಿಸಲಾರ. ಅಧ್ಯಯನ ವಿಮುಖನಾದ ವಿದ್ಯಾರ್ಥಿ ಉತ್ತಮ ಭವಿಷ್ಯ ಕಾಣಲಾರ. ಪರಿಣಾಮದಾಯಕ ಶಿಕ್ಷಣ ವ್ಯವಸ್ಥೆ ಮಾಡದ ದೇಶ ಪ್ರಗತಿ ಸಾಧಿಸಲಾರದು.

ಜನರ ಬದುಕಿನ ದಾರಿದೀಪ ಶ್ರೀವಾಣಿ

ಶ್ರೀ ಶಿವಕುಮಾರ ಮಹಾಸ್ವಾಮಿಗಳ ಶತಸಹಸ್ರ ಚಿಂತನೆಗಳನ್ನು ‘ಶ್ರೀವಾಣಿ’ ರೂಪದಲ್ಲಿ ಕರುಣಿಸಿರುವುದರ ವೈಶಾಲ್ಯ, ವೈವಿಧ್ಯ, ಉದಾತ್ತತೆಯನ್ನು ಪರಿಶೀಲಿಸಿದಾಗ, ಹಿಂದಿನ ಸರ್ವ ಶರಣರ ‘ವಚನಗಳ ಸಾರ’, ‘ಆಧುನಿಕ ಬದುಕಿನ ಆದರ್ಶ ಸಾರ’ವಷ್ಟೇ ಅಲ್ಲದೆ, ಶ್ರೀಸಾಮಾನ್ಯರ ಬದುಕಿಗೆ ದಾರಿದೀಪವಾಗುವ ಮೌಲ್ಯ ಪಡೆದಿರುವುದು ಸುವೇದ್ಯ. ಶ್ರೀವಾಣಿಯಲ್ಲಿನ ‘ಜೀವನದರ್ಶನ’ ಬೋಧನೆಯ ಸರಳತೆ ಎಂದಿಗೂ ಮಾನವರಿಗೆ ಮಾರ್ಗದರ್ಶಕ.

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...