ಸಿದ್ಧಗಂಗಾಶ್ರೀಗೆ ನಿಶ್ಶಕ್ತಿ

ತುಮಕೂರು: ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ.ಶಿವಕುಮಾರ ಸ್ವಾಮೀಜಿಗೆ ನಿಶ್ಯಕ್ತಿಯಿಂದ ಸಹಜ ಉಸಿರಾಟಕ್ಕೆ ಕಷ್ಟವಾಗಿದೆ. ಶ್ವಾಸಕೋಶದ ಸೋಂಕು, ನೀರಿನ ಸಂಗ್ರಹ ಕಡಿಮೆ ಆಗಿದೆ ಎಂದು ಆಸ್ಪತ್ರೆ ಎಂಡಿ ಡಾ. ಪರಮೇಶ್ ಮಾಹಿತಿ ನೀಡಿದ್ದಾರೆ. ಸುತ್ತೂರು ಶ್ರೀಗಳು ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಸ್ವಾಮೀಜಿ ಆರೋಗ್ಯ ವಿಚಾರಿಸಿದರು. ಸಿದ್ಧಗಂಗಾ ಶ್ರೀಗಳ ಅನಾರೋಗ್ಯದ ಸ್ಥಿತಿಯಲ್ಲೂ ಜವರಾಯನೊಂದಿಗೆ ನೀನಾ? ನಾನಾ? ಎಂದು ಗುದ್ದಾಡುತ್ತಾ ಆತ್ಮವಿಶ್ವಾಸದಿಂದ ಚಿಕಿತ್ಸೆಗೆ ಸ್ಪಂದಿಸುತ್ತಿರುವುದೇ ಪವಾಡ ಎನ್ನಿಸುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿದರು.