ತೆರೆದ ವಾಹನದಲ್ಲಿ ಉದಾಸಿ ಮೆರವಣಿಗೆ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ

ಲೋಕಸಭೆ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ ಸಂಸದ ಶಿವಕುಮಾರ ಉದಾಸಿ ಅವರನ್ನು ತೆರೆದ ವಾಹನದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.

ಚುನಾವಣೆಯ ಮತಗಳ ಎಣಿಕೆ ಕಾರ್ಯ ಪೂರೈಸಿದ ನಂತರ ಹಾನಗಲ್ಲಿಗೆ ಆಗಮಿಸಿದ ಶಿವಕುಮಾರ, ಕುಮಾರೇಶ್ವರ ವಿರಕ್ತ ಮಠಕ್ಕೆ ತೆರಳಿ ಶ್ರೀಗಳ ಗದ್ದುಗೆಯ ದರ್ಶನ ಪಡೆದರು. ನಂತರ ಮಠದಿಂದ ಪ್ರಮುಖ ಬೀದಿಗಳಲ್ಲಿ ಹಾಯ್ದು ಮಹಾತ್ಮಾ ಗಾಂಧಿ ವೃತ್ತದವರೆಗೆ ಮೆರವಣಿಗೆಯಲ್ಲಿ ತೆರಳಿ ವಿಜಯೋತ್ಸವದಲ್ಲಿ ಪಾಲ್ಗೊಂಡರು.

ಶಾಸಕ ಸಿ.ಎಂ. ಉದಾಸಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ, ತಾಲೂಕು ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ತಾಪಂ ಸದಸ್ಯ ಬಸಣ್ಣ ಬೂದಿಹಾಳ, ಕಲ್ಯಾಣಕುಮಾರ ಶೆಟ್ಟರ್, ಸಂತೋಷ ಟೀಕೋಜಿ, ಕೃಷ್ಣಾ ಈಳಿಗೇರ, ಚಂದ್ರಪ್ಪ ಜಾಲಗಾರ, ಶಿವಲಿಂಗಪ್ಪ ತಲ್ಲೂರ, ರಾಜು ಗೌಳಿ, ಪ್ರಶಾಂತ ಕಾಮನಹಳ್ಳಿ, ಚಂದ್ರಪ್ಪ ಹರಿಜನ, ನಾಗನಗೌಡ ಪಾಟೀಲ, ಮಲ್ಲಿಕಾರ್ಜುನ ಅಗಡಿ, ರಾಜಣ್ಣ ಪಟ್ಟಣದ, ಉದಯ ವಿರುಪಣ್ಣನವರ, ವಿಜಯೇಂದ್ರ ಕನವಳ್ಳಿ, ಮನೋಜ ದೇಸಾಯಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ರವಿಚಂದ್ರ ಪುರೋಹಿತ, ಗಣೇಶ ಮೂಡ್ಲಿ, ಭಾಸ್ಕರ ಹುಲಮನಿ, ಸಂತೋಷ ಬಸವಂತಕರ, ಎಸ್.ಎಂ. ಕೋತಂಬ್ರಿ ಇತರರು ಪಾಲ್ಗೊಂಡಿದ್ದರು. ಕಾರ್ಯಕರ್ತರು ಕೇಸರಿ ಬಣ್ಣ ಹಚ್ಚಿಕೊಂಡು, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *