ಸುಮಲತಾ ಅವರ ಸ್ಫರ್ಧೆ ಹಾಗೂ ಪ್ರಚಾರದ ಕುರಿತು ನಟ ಶಿವರಾಜ್​ ಕುಮಾರ್​ ಹೇಳಿದ್ದೇನು?

ಬೆಂಗಳೂರು: ಮಂಡ್ಯದಲ್ಲಿ ಸುಮಲತಾ ಅವರ ಸ್ಪರ್ಧೆ ಅವರ ವೈಯಕ್ತಿಕ ನಿರ್ಧಾರವಾಗಿದೆ. ಅವರ ಕುರಿತು ಪ್ರಚಾರಕ್ಕೆ ಹೋಗುವ ಬಗ್ಗೆ ನಾನಿನ್ನೂ ನಿರ್ಧಾರ ಮಾಡಿಲ್ಲ ಎಂದು ನಟ ಶಿವ ರಾಜ್​ಕುಮಾರ್ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು​​ ಅಂಬರೀಶ್ ನನ್ನ ತಂದೆಯ ಸಮಾನ. ಅವರ ಬಗ್ಗೆ ನನಗೆ ಗೌರವ ಇದ್ದೇ ಇರುತ್ತದೆ. ಸುಮಲತಾ ಪರ ಪ್ರಚಾರಕ್ಕೆ ಹೋಗುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಈ ಹಿಂದೆ ನನ್ನ ಪತ್ನಿ ಗೀತಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಅವರ ವೈಯಕ್ತಿಕ ನಿರ್ಧಾರ ಆಗಿತ್ತು. ಒಬ್ಬ ಪತಿಯಾಗಿ ನಾನು ಬೆಂಬಲ ನೀಡಿದ್ದೆ ಅಷ್ಟೇ ಎಂದು ತಿಳಿಸಿದರು.

ಇದೇ ವೇಳೆ ಸುಮಲತಾ ಕುರಿತು ಸಚಿವ ರೇವಣ್ಣ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿ, ರೇವಣ್ಣ ಅವರು ಮಾತನಾಡಿದ್ದು ತಪ್ಪು. ಯಾವುದೇ ಹೆಣ್ಣಿಗಾದರೂ ಅಂತಹ ಪದಬಳಕೆ ಮಾಡಬಾರದು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)