ಭಗವಂತನ ಆರಾಧನೆಯಿಂದ ಸಂಕಷ್ಟ ಪರಿಹಾರ

ಗೋಕಾಕ: ಭಗವಂತನ ಆರಾಧನೆಯಿಂದ ಜೀವನದ ಸಂಕಷ್ಟಗಳ ಪರಿಹಾರವಾಗುತ್ತವೆ ಎಂದು ಇಲ್ಲಿನ ಶಾರದಾ ಶಕ್ತಿಪೀಠದ ಶಿವಮಯಿ ಮಾತಾಜಿ ಹೇಳಿದ್ದಾರೆ.

ಮಂಗಳವಾರ ಇಲ್ಲಿಯ ವಿವೇಕಾನಂದ ನಗರದ ಶಿವಲಿಂಗೇಶ್ವರ ಜಾತ್ರೆ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಭಕ್ತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶಿವಲಿಂಗೇಶ್ವರ ವಿಕಾಸ ಸಮಿತಿ ಅಧ್ಯಕ್ಷ ಬಿ.ಬಿ.ಕಾಪಸಿ, ಕಸಾಪ ತಾಲೂಕಾದ್ಯಕ್ಷ ಮಹಾಂತೇಶ ತಾಂವಶಿ, ನಿವೃತ್ತ ಅಭಿಯಂತ ಎಂ.ಎಸ್. ವಾಲಿ, ನಗರಸಭೆ ಸದಸ್ಯ ಶ್ರೀಶೈಲ ಯಕ್ಕುಂಡಿ, ಸಮಿತಿಯ ಪದಾಧಿಕಾರಿಗಳಾದ ಜೀವಪ್ಪ ಬಡಿಗೇರ, ವೀರಭದ್ರ ಶೇಬಣ್ಣವರು, ಅಶೋಕ ಗೋಣಿ, ಉದಯ ಬನ್ನಿಶೆಟ್ಟಿ, ಈಶ್ವರ ಪಾಟೀಲ, ಸುನಂದಾ ಮನ್ನಿಕೇರಿ, ಜಗದೇವಿ ಬೋಸಗಾ, ಲಕ್ಕಪ್ಪ ಕೊತ್ತಲ್, ಬಾಳೇಶ ಕರಿಗಾರ, ಶಿದ್ಲಿಂಗಪ್ಪ ದಾಸಪ್ಪನವರ, ಅಮರಗೊಂಡ ಬಿಜ್ಜಳ, ಭೀಮಪ್ಪ ಗೋಲಬಾವಿ, ಉಮಾದೇವಿ ಹಿರೇಮಠ, ಪ್ರೇಮಲತಾ ಕಡಗದ ಇತರರು ಇದ್ದರು.

ಶೈಲಾ ಕೊಕ್ಕರಿ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಕೊಲ್ಲಾಪುರೆ ವಂದಿಸಿದರು.