ಶೀರೂರು ಶ್ರೀ ಲಿವರ್​ ಡ್ಯಾಮೇಜ್​, ಅನ್ನನಾಳದಲ್ಲಿ ರಂಧ್ರಗಳು?

ಉಡುಪಿ: ಶೀರೂರು ಶ್ರೀ ಅಸಹಜ ಸಾವು ಪ್ರಕರಣ ಮತ್ತಷ್ಟು ವೇಗ ಪಡೆದಿದ್ದು, ಪೊಲೀಸರಿಗೆ ತಾತ್ಕಾಲಿಕ ಮರಣೋತ್ತರ ಪರೀಕ್ಷೆ ವರದಿ ಲಭಿಸಿದೆ ಎನ್ನಲಾಗಿದೆ.

ಈ ವರದಿಯಲ್ಲಿ ಶೀರೂರು ಶ್ರೀಗಳ ಲಿವರ್ ಸಂಪೂರ್ಣ ಹಾನಿಯಾಗಿರುವುದರ ಕುರಿತು ಮತ್ತು ಸ್ವಾಮೀಜಿಯ ಅನ್ನನಾಳದಲ್ಲಿ ರಂಧ್ರಗಳಾಗಿರುವ ಕುರಿತು ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸ್ವರ್ಣಾ ನದಿಯಲ್ಲಿ ಡಿವಿಆರ್​ ಪತ್ತೆಯಾಗಿದ್ದು, ಆ ಡಿವಿಆರ್ ಎಫ್​ಎಸ್​ಎಲ್​ನ್ನು ಸೈಬರ್ ವಿಭಾಗಕ್ಕೆ ರವಾನಿಸಲಾಗಿದೆ. ಪತ್ತೆಯಾದ ಡಿವಿಆರ್​ಗಳು​ ಶೀರೂರು ಮೂಲಮಠ ಮತ್ತು ರಥಬೀದಿಯ ಮಠದ್ದಾಗಿವೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)