ಕಾರವಾರ: ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ಮೃತರಾದ ಹಾಗೂ ನಾಪತ್ತೆಯಾದ ಎಲ್ಲರ ಕುಟುಂಬಸ್ಥರಿಗೆ ರಾಷ್ಟಿçÃಯ ಹೆದ್ದಾರಿ ಚತುಷ್ಪಥ ಗುತ್ತಿಗೆ ಪಡೆದ ಐಆರ್‌ಬಿ ಕಂಪನಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಏಪ್ರಿಲ್ 2 ರಿಂದ ಧರಣಿ ನಡೆಸಲಾಗುವುದು ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಚತುಷ್ಪಥ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಕೈಗೊಂಡ ಐಆರ್‌ಬಿ ಕಂಪನಿಯಿAದಲೇ ಶಿರೂರು ದುರಂತ ಸಂಭವಿಸಿದೆ. ಆದರೆ, ಕಂಪನಿ ಮಾತ್ರ ಸೌಜನ್ಯಕ್ಕೂ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ.
ಪೊಲೀಸ್ ಇಲಾಖೆ ಐಆರ್‌ಬಿ ಕಂಪನಿಯ ಕೈಗೊಂಬೆಯAತೆ ವರ್ತಿಸುತ್ತಿದೆ. ಕಂಪನಿಯ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದರೂ ಎಫ್‌ಐಆರ್ ಮಾಡಿಕೊಂಡಿಲ್ಲ. ನಂತರ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಿ, ನ್ಯಾಯಾಲಯ ಎರಡೆರಡು ಬಾರಿ ಸೂಚನೆ ನೀಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ. ನಂತರ ಪೊಲೀಸ್ ಠಾಣೆಗೆ ತೆರಳಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಬೇಕಾಯಿತು.
ಈಗ ಐಆರ್‌ಬಿ 8 ನಿರ್ದೇಶಕರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿ ಹಲವು ದಿನ ಕಳೆದರೂ ಅವರನ್ನು ಬಂಽಸಿಲ್ಲ. ಬದಲಾಗಿ, ದೂರು ನೀಡಿನ ನನ್ನನ್ನೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಈಡಿಗ ಸಮುದಾಯಕ್ಕೆ ಸೇರಿದ ನನ್ನ ಜಾತಿಯನ್ನು ಬುಡಗ ಜಂಗಮ ಎಂದು ಎಫ್‌ಐಆರ್‌ನ ದೂರುದಾರನ ಕಾಲಂನಲ್ಲಿ ನಮೂದಿಸಿ, ಪ್ರಕರಣದ ಹಾದಿ ತಪ್ಪಿಸಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ದೂರಿದರು.
ಜಿಲ್ಲೆಯ ಆಡಳಿತ ಹಾಗೂ ಜನಪ್ರತಿನಿಽಗಳು ಕಂಪನಿಯ ಜತೆ ನಿಂತಿದ್ದಾರೆ. ಅದರಿಂದ ಅಮಾಯಕ ಮೃತರ ಕುಟುಂಬದವರಿಗೆ ನ್ಯಾಯ ಸಿಗುತ್ತಿಲ್ಲ. ಹಾಗಾಗಿ ಪ್ರಕರಣದ ತನಿಖಾಽಕಾರಿಯನ್ನು ಬದಲಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದೇನೆ. ಪ್ರಕರಣದ ಆರೋಪಿಗಳಾದ ಐಆರ್‌ಬಿ ನಿರ್ದೇಶಕರನ್ನು ತಕ್ಷಣ ಬಂಽಸಬೇಕು. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಇಡೀ ಪ್ರಕರಣ ಸಿಬಿಐ ತನಿಖೆ ನಡೆಯಬೇಕು. ನಾಪತ್ತೆಯಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ಮರಣ ಪ್ರಮಾಣಪತ್ರ ನೀಡಬೇಕು ಎಂಬುದು ನನ್ನ ಪ್ರಮುಖ ಆಗ್ರಹವಾಗಿದೆ.
ಎನ್‌ಎಚ್‌ಎಐ, ಐಆರ್‌ಬಿ ವಿರುದ್ಧ ಸಾಕಷ್ಟು ದಾಖಲೆ ಕಲೆ ಹಾಕಿದ್ದು, ಕಾನೂನು ಹೋರಾಟ ಮಾಡಲಿದ್ದೇನೆ. ಎಂದು ದಾಖಲೆಗಳನ್ನು ತಲೆಯ ಮೇಲೆ ಹೊತ್ತು ಪ್ರದರ್ಶಿಸಿದರು. ಸಚಿನ್ ನಾಯ್ಕ, ದೇವರಾಜ ನಾಯ್ಕ, ಶ್ರೀಧರ ನಾಯ್ಕ, ಮನಿಷಾ ಶ್ರೀನಿವಾಸ, ವಿನೋದ ನಾಯ್ಕ ಹಾಗೂ ಪ್ರಶಾಂತ ಸುದ್ದಿಗೋಷ್ಠಿಯಲ್ಲಿದ್ದರು.
ಏಪ್ರಿಲ್ 2 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

Toilet ಬಳಸಿದ ನಂತರ ಈ ತಪ್ಪು ಎಂದಿಗೂ ಮಾಡಬೇಡಿ: ಅಪಾಯ ಕಾದಿದೆಯಂತೆ!
Toilet : ನಮಲ್ಲಿ ಹಲವರು ಶೌಚಾಲಯ (ಪಾಶ್ಚಾತ್ಯ ಶೌಚಾಲಯ) ಬಳಸಿದ ನಂತರ ಟಾಯ್ಲೆಟ್ನ ಮುಚ್ಚುಳ ಮುಚ್ಚದೇ…
ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips
Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…
Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು
Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…