ಕಾರವಾರ: ಶಿರೂರು ಗುಡ್ಡ ಕುಸಿತದ ಸಂತ್ರಸ್ಥರಿಗೆ ಪರಿಹಾರ ನೀಡುವಂತೆ ಆಗ್ರಹಿಸಲು ಡಾ.ಪ್ರಣವಾನಂದ ಸ್ವಾಮಿಗಳು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಎನ್ ಎಚ್ ಎಐನಿಂದ ಕೈಗೊಂಡ ರಾಷ್ಟ್ರೀಯ ಹೆದ್ದಾರಿ 66 ರ ಅವೈಜ್ಞಾನಿಕ ಕಾಮಗಾರಿಯಿಂದಲೇ ಗುಡ್ಡ ಕುಸಿದಿದೆ. ಅದರಲ್ಲಿ 11 ಜನ ನಾಪತ್ತೆಯಾಗಿದ್ದ ಇನ್ನೂ ಮೂವರ ಶವ ಸಹ ಸಿಕ್ಕಿಲ್ಲ. ಆದರೆ, ದುರಂತಕ್ಕೆ ಎನ್ ಎಚ್ ಎಐ ಹಾಗೂ ಅದರ ಗುತ್ತಿಗೆ ಕಂಪನಿ ನೇರ ಹೊಣೆ ಎಂದು ಆರೋಪಿಸಿರುವ ಸ್ವಾಮೀಜಿ ಕಂಪನಿ ನಿರ್ದೇಶಕರು, ಎನ್ ಎಚ್ ಎಐ ಚೇರ್ಮನ್ ಸೇರಿ 8 ಜನರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಪೊಲೀಸರು ದೂರನ್ನು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಇನ್ನೊಂದೆಡೆ ತಮ್ಮ ಹೋರಾಟ ಮುಂದುವರಿಸಿದ್ದು, ಎನ್ ಎಚ್ ಎಐ ಬೆಂಗಳೂರಿನ ವ್ಯವಸ್ಥಾಪಕರನ್ನು ಭೇಟಿಯಾವಿ ಸಂತ್ರಸ್ಥರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದರು. ಈಗ ಎಮ್ ಎಚ್ ಎಐ ಚೇರ್ಮನ್ ಅವರನ್ನು ಭೇಟಿಯಾಗುವ ಸಲುವಾಗಿ ಸಂತ್ರಸ್ಥರ ಕುಟುಂಬಗಳ ಜತೆ ದೆಹಲಿಗೆ ಸೋಮವಾರ ಗೋವಾ ಮೂಲಕ ತೆರಳಿದರು.
ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ರಾಜ್ಯ ಯುವ ಘಟಕದ ಅಧ್ಯಕ್ಷ ಸಚಿನ್ ನಾಯಕ್ ಮತ್ತು ಕುಂಬಾರ ಜಗದ್ಗುರು ಪೀಠದ ಪೂಜ್ಯ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮಿಗಳು ಜತೆಗಿದ್ದರು.