ಹಾವೇರಿ: ದೇಶದ ಐತಿಹಾಸಿಕ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲಬಲ್ಲ ಶ್ರೇಷ್ಠ ವ್ಯಕ್ತಿತ್ವವಾಗಿರುವ ಶಿರಸಂಗಿ ಲಿಂಗರಾಜರಿಂದ ಸಮಾಜಕ್ಕೆ ಅದ್ವೀತಿಯ ಕೊಡುಗೆ ಸರ್ಮಪಿತವಾಗಿರುವುದು ದಾಖಲೆಯ ವಿಷಯವಾಗಿದೆ ಎಂದು ಹುಬ್ಬಳ್ಳಿ ಕೆಎಲ್ಇ ಪಿ.ಸಿ. ಜಾಬಿನ್ ಕಾಲೇಜ್ನ ನಿವೃತ್ತ ಗ್ರಂಥಪಾಲಕ ಬಿ.ಎಸ್. ಮಾಳವಾಡ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಪದವಿ, ಪದವಿಪೂರ್ವ, ಬಿಸಿಎ ಮತ್ತು ಎಂ.ಕಾಂ ಸ್ನಾತಕೋತ್ತರ ಕೇಂದ್ರಗಳ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಶಿರಸಂಗಿ ಲಿಂಗರಾಜರ 164ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿರಸಂಗಿ ಮಹಾರಾಜರು ಕೃಷಿ, ಸಮಾಜ ಮತ್ತು ಶಿಕ್ಷಣ ಸೇರಿ ಹಲವಾರು ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಸಂಸಾರಕ್ಕಿಂತ ಸಂಸ್ಕಾರ ದೊಡ್ಡದು. ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು ಎಂಬುದನ್ನು ಮನಗಂಡ ಲಿಂಗರಾಜರು ತಮ್ಮ ಸರ್ವಸ್ವವನ್ನೂ ಸಮಾಜಕ್ಕಪಿರ್ಸಿ ಚಿರಸ್ಥಾಯಿಯಾಗುಳಿದವರು ಎಂದರು.
ಪ್ರಾಚಾಯೆರ್ ಡಾ. ಸಂಧ್ಯಾ ಕುಲಕಣಿರ್ ಮಾತನಾಡಿ, ಶಿರಸಂಗಿ ಲಿಂಗರಾಜರು ತಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು ಸಮಾಜದ ಬಗ್ಗೆ ಅಪಾರವಾದ ಕಳಕಳಿಯುಕ್ತ ಕಾರ್ಯಗಳನ್ನು ಸಾಕಾರಗೊಳಿಸಿದ್ದು ಎಂದಿಗೂ ಸ್ಮರಣೀಯವಾದುದು. ತ್ಯಾಗ ಮತ್ತು ದಾನದಿಂದಲೇ ಹೆಸರಾಗಿರುವ ಅವರು ಸಮಾಜದ ಅಭ್ಯುದಯ ಬಯಸಿದವರು. ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ರೂಪಿಸಿ ಕಾರ್ಯಸಾಧನೆ ಮಾಡಿದ್ದು ಅವರ ಜೀವತ ಕಾಲದ ಮಹತ್ತರ ಕೊಡುಗೆ. ಅವರ ಅಗಲಿಕೆಯ ನಂತರವೂ ಸಾಕಷ್ಟು ಕಾರ್ಯಗಳು ಪ್ರಗತಿಗೆ ಬಂದಿರುವುದು ಸ್ವಾಗತಾರ್ಹ ಎಂದರು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಜೆ. ಎಸ್. ಅರಣಿ ಅಧ್ಯಕ್ಷತೆ ವಹಿಸಿದ್ದರು.
ಪದವಿಪೂರ್ವ ಪ್ರಾಚಾರ್ಯ ಡಾ. ಜೆ.ಆರ್. ಶಿಂಧೆ, ಡಿ.ಎ. ಕೊಲ್ಲಾಪುರೆ, ಎಸ್.ಜಿ. ಹುಣಸಿಕಟ್ಟಿಮಠ, ಜಿ.ಕೆ. ಮಂಕಣಿ ಹಾಗೂ ಸಿಬ್ಬಂದಿ ಇದ್ದರು.
ಶಿರಸಂಗಿ ಲಿಂಗರಾಜರ ಜಯಂತಿ ಆಚರಣೆ

You Might Also Like
ಹೋಟೆಲ್ ಸ್ಟೈಲ್ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe
ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…
ಚಿನ್ನದ ಮೇಲೆ ಲೋನ್ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan
Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…
ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips
ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…