ಶಿರಗುಪ್ಪಿ: ಕ್ರೀಡೆಗಳಿಂದ ಆತ್ಮವಿಶ್ವಾಸ ಹೆಚ್ಚಳ

ಶಿರಗುಪ್ಪಿ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ರಾಮಗೌಡ ಪಾಟೀಲ ಹೇಳಿದ್ದಾರೆ.

ಸುಭಾಷ ನೇಮಣ್ಣ ಕಾತ್ರಾಳೆ ಸ್ಮರಣಾರ್ಥ ಜೈ ಹನುಮಾನ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶಿರಗುಪ್ಪಿಯ ಸಿದ್ದೇಶ್ವರ ವಿದ್ಯಾಲಯದ ಕ್ರೀಡಾಂಗಣದಲ್ಲಿ ಭಾನುವಾರದಿಂದ ಮೇ. 2 ರ ವರೆಗೆ ಐದು ದಿನಗಳ ಕಾಲ ನಡೆಯಲಿರುವ ುಲ್ ಪಿಚ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಯುವ ಧುರೀಣ ಮಹಾವೀರ ಕಾರ್ತಾಳೆ ಮಾತನಾಡಿದರು. ಮುಖಂಡರಾದ ಪಂಡಿತ ವಡ್ಡರ, ಅಮೋಲ ಸರಡೆ, ವಿದ್ಯಾಧರ ಕಾಂಬಳೆ, ಬಾಳು ಕುಸನಾಳೆ, ಬಾಬುರಾವ ಕಾರದಗೆ, ರಾಮು ವಡ್ಡರ, ರಾಮಾ ಕಾಂಬಳೆ, ಬಾಹುಬಲಿ ಭನಾಜ ಉಪಸ್ಥಿತರಿದ್ದರು.

ಐದು ದಿನಗಳ ಕಾಲ ನಡೆಯಲಿರುವ ಪ್ರಥಮ ಬಹುಮಾನ 33,333 ರೂ. ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 22,222 ರೂ. ಮತ್ತು ಟ್ರೋಫಿ, ತೃತೀಯ ಬಹುಮಾನ 11,111 ರೂ ಹಾಗೂ ಟ್ರೋಫಿ, ನಾಲ್ಕನೇ ಬಹುಮಾನ 5,555 ರೂ. ಮತ್ತು ಟ್ರೋಫಿ ನೀಡಲಾಗುವುದು ಎಂದು ಕಮಿಟಿ ತಿಳಿಸಿದೆ.

Leave a Reply

Your email address will not be published. Required fields are marked *