ಶಿರಾಡಿ ಘಾಟ್‌ನಲ್ಲಿ ಮೂರ್ನಾಲ್ಕು ತಿಂಗಳು ಸಂಚಾರ ಬಂದ್‌

ಹಾಸನ: ಸಕಲೇಶಪುರದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್‌ನಲ್ಲಿ ಸತತವಾಗಿ ಗುಡ್ಡ ಕುಸಿಯುತ್ತಿದೆ. ಶಿರಾಡಿಘಾಟ್‌ ಉತ್ತಮ ಸ್ಥಿತಿಗೆ ತರಲು 4, 5 ತಿಂಗಳು ಬೇಕಾಗಿದ್ದು, ಕಾಮಗಾರಿ ಮುಗಿಯುವವರೆಗೂ ಯಾವುದೇ ಸಂಚಾರವಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ.

ಹೊಳೆನರಸೀಪುರದಲ್ಲಿ ಮಾತನಾಡಿ, ಭಾರಿ ಮಳೆ ಹಿನ್ನೆಲೆ ಹಲವು ಗ್ರಾಮಗಳ ಜನರ ಸ್ಥಳಾಂತರ ಮಾಡಬೇಕಿದ್ದು, ಅತ್ತಿಹಳ್ಳಿ, ಹೊಂಗಡಹಳ್ಳ, ಮಾಗೇರಿ, ಪಟ್ಲ, ಹೆತ್ತೂರು ಗ್ರಾಮಸ್ಥರಿಗಾಗಿ ಗಂಜಿಕೇಂದ್ರ ತೆರೆಯಲು ಸೂಚಿಸಿದರು.

ಮಳೆಯಿಂದಾಗಿ ಉಂಟಾಗಿರುವ ಹಾನಿಯಿಂದಾಗಿ ಲೋಕೋಪಯೋಗಿ ಇಲಾಖೆಗೆ ಅಂದಾಜು 150 ಕೋಟಿ ರೂ. ನಷ್ಟ ಸಂಭವಿಸಿದೆ. ಕೊಡಗಿನಲ್ಲಿ ರಸ್ತೆ ಹಾನಿಯಿಂದ ಅಂದಾಜು 138 ಕೋಟಿ ರೂ. ನಷ್ಟ ಸಂಭವಿಸಿದೆ. ನಿನ್ನೆ ನಾನೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿದ್ದೆ. ಜಿಲ್ಲಾಧಿಕಾರಿಯಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದರು.

ನಿನ್ನೆ ಜಿಲ್ಲಾಧಿಕಾರಿ ಜತೆ ಮಾತನಾಡಿ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಜನರನ್ನು ರಕ್ಷಿಸಲು ಎರಡು ಹೆಲಿಕಾಪ್ಟರ್ ನ್ನು ಕಳುಹಿಸಲಾಗಿದೆ. ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ಒದಗಿಸಲಾಗಿದೆ, ಸರ್ಕಾರದಿಂದ ಎಲ್ಲ ನೆರವು ಒದಗಿಸಲಾಗಿದೆ, ಹಾಸನ ಜಿಲ್ಲೆಯಲ್ಲಿ ಪ್ರವಾಹ ನಷ್ಟದ ಬಗ್ಗೆ ಸಂಪೂರ್ಣ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. (ದಿಗ್ವಿಜಯ ನ್ಯೂಸ್)