VIDEO|ಶಿರಾ ಬೈ ಎಲೆಕ್ಷನ್​: ಮತ ಕೇಳೋಕೆ ಬಂದ ಮಾಜಿ ಶಾಸಕರಿಗೆ ಹಿಗ್ಗಾಮುಗ್ಗಾ ತರಾಟೆ!

ತುಮಕೂರು: ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್​ ಗೌಡಗೆ ಮತದಾರರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್​ ಆಗಿದೆ. ಶಿರಾ ವಿಧಾನಸಭೆ ಕ್ಷೇತ್ರದಲ್ಲಿ ಉಪಚುನಾವಣೆ ಕಾವೇರುತ್ತಿದೆ. ಈ ನಡುವೆ ಶಿರಾ ತಾಲೂಕಿನ ಬಂದಗುಂಟೆ ಗ್ರಾಮಕ್ಕೆ ಬಂದ ಸುರೇಶ್ ಗೌಡಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಗ್ಯಾಸ್ ಸಬ್ಸಿಡಿ ಯಾಕೆ ವಾಪಸ್ ತೆಗೆದುಕೊಂಡಿದ್ದೀರಾ? ಬಿಜೆಪಿಯಿಂದ ರೈತರಿಗೆ ಅನುಕೂಲವಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿರಿ ಶಿರಾ ಕಣಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಂಟ್ರಿ … Continue reading VIDEO|ಶಿರಾ ಬೈ ಎಲೆಕ್ಷನ್​: ಮತ ಕೇಳೋಕೆ ಬಂದ ಮಾಜಿ ಶಾಸಕರಿಗೆ ಹಿಗ್ಗಾಮುಗ್ಗಾ ತರಾಟೆ!