ಸ್ಕೂಬಾ ಡೈವಿಂಗ್​ ಅವಘಡ: ಕ್ಯಾಲಿರ್ಫೋನಿಯಾದಲ್ಲಿ ಕೋಮಾಗೆ ಜಾರಿದ ಶಿವಮೊಗ್ಗ ಮಹಿಳೆ

ಶಿವಮೊಗ್ಗ: ಶಿವಮೊಗ್ಗ ಮೂಲದ ಮಹಿಳೆಯೊಬ್ಬಳು ಸ್ಕೂಬಾ ಡೈವಿಂಗ್​ ವೇಳೆ ನೀರಲ್ಲಿ ಮುಳಗಿ ಕೋಮಾ ಸ್ಥಿತಿಗೆ ಜಾರಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ಶಿವಮೊಗ್ಗ ಮೂಲದ ಶೃತಿ ಎಂಬಾಕೆ ಆಂಧ್ರ ಪ್ರದೇಶದ ವಿಜಯವಾಡದ ಸೀತಾರಾಮಕೃಷ್ಣ ಎಂಬುವವರೊಂದಿಗೆ ಎಂಟು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ವಿವಾಹದ ಬಳಿಕ ದಂಪತಿಗಳಿಬ್ಬರು ಕ್ಯಾಲಿಫೋರ್ನಿಯಾದಲ್ಲಿ ನೆಲಸಿದ್ದರು.

ವೀಕೆಂಡ್ ಹಿನ್ನೆಲೆಯಲ್ಲಿ ದಂಪತಿಗಳಿಬ್ಬರು ಹವಾಯ್‌ಗೆ ಹೋಗಿದ್ದರು. ಈ ವೇಳೆ ಸ್ಕೂಬಾ ಡೈವಿಂಗ್​ ಮಾಡುವ ವೇಳೆ ಶೃತಿ ಅವರು ನೀರಿನಲ್ಲಿ ಮುಳುಗಿದ್ದಾರೆ. ಪರಿಣಾಮ ಅವರು ಕೋಮಾ ಸ್ಥಿತಿಗೆ ಜಾರಿದ್ದಾರೆ. ಹವಾಯ್‌ನ ಆಸ್ಪತ್ರೆಗೆ ಶೃತಿ ಅವರನ್ನು ದಾಖಲು ಮಾಡಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಶಾಸಕ ರಾಘವೇಂದ್ರರಿಂದ ನೆರವು

ದಂಪತಿಗಳಿಬ್ಬರ ಸಮರ್ಪಕ ಮಾಹಿತಿ ಸಿಗದೆ ಪಾಲಕರು ಕಂಗಾಲಾಗಿದ್ದಾರೆ. ಶ್ರುತಿ ಕುಟುಂಬಕ್ಕೆ ಶಾಸಕ ಬಿ.ವೈ.ರಾಘವೇಂದ್ರ ನೆರವು ನೀಡುವ ಭರವಸೆ ನೀಡಿದ್ದಾರೆ. ಶ್ರುತಿ ಪೋಷಕರನ್ನು ಕ್ಯಾಲಿಫೋರ್ನಿಯಾ ಕಳುಹಿಸಲು ಸಂಸದ ಯಡಿಯೂರಪ್ಪರೊಂದಿಗೆ ಮಾತನಾಡಿ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದಾರೆ.

ಇನ್ನು ಶ್ರುತಿ ಸ್ಥಿತಿಯ ಬಗ್ಗೆ ದಿಗ್ವಿಜಯ ನ್ಯೂಸ್​ ವರದಿ ಪ್ರಸಾರ ಮಾಡ್ತಿದ್ದಂತೆ ಎಚ್ಚೆತ್ತ ಜಿಲ್ಲಾಧಿಕಾರಿಗಳು ಶ್ರುತಿ ಪೋಷಕರನ್ನು ಕಚೇರಿಗೆ ಕರೆಸಿಕೊಂಡು ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *