More

    ಶಿವಮೊಗ್ಗದಲ್ಲಿ ರಥಸಪ್ತಮಿಗೆ ಕಳೆಗಟ್ಟಿದ ಸೂರ್ಯಥಾನ್

    ಶಿವಮೊಗ್ಗ: ರಥ ಸಪ್ತಮಿ, ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಬೃಹತ್ ಸೂರ್ಯಥಾನ್ ಮತ್ತು ಸಾಮೂಜಿಕ 108 ನಮಸ್ಕಾರ ವಿಶೇಷ ಕಾರ್ಯಕ್ರಮಕ್ಕೆ ಭಾನುವಾರ ನಗರದ ಆದಿಚುಂಚನಗಿರಿ ಶಾಲಾ ಕ್ರೀಡಾಂಗಣ ಸಾಕ್ಷಿಯಾಯಿತು. ನೂರಾರು ವಿದ್ಯಾರ್ಥಿಗಳು, ಮಹಿಳೆಯರು ಸೇರಿ ಎಲ್ಲ ವರ್ಗದವರೂ ಮುಂಜಾನೆಯೇ ಸೂರ್ಯನಿಗೆ ನಮಸ್ಕರಿಸಿದರು.
    ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಶನ್, ಸರ್ಜಿ ಫೌಂಡೇಶನ್, ಪರೋಪಕಾರಂ, ಯೋಗ ಶಿಕ್ಷಣ ಸಮಿತಿ ಹಾಗೂ ಆದಿಚುಂಚನಗಿರಿ ಶಾಲೆ ಸಹಕಾರದೊಂದಿಗೆ ವಿವಿಧ ಆಸನಗಳ ಮೂಲಕ 8ನೇ ಆವೃತ್ತಿಯ ಸೂರ್ಯಥಾನ್ ಮತ್ತು ಸಾಮೂಹಿಕ 108 ಬಾರಿ ಸೂರ್ಯನಿಗೆ ನಮಸ್ಕರಿಸಿದರು.
    ಸೂರ್ಯಥಾನ್ ಕಾರ್ಯಕ್ರಮವನ್ನು ಗಣ್ಯರು ಸೂರ್ಯ ನಮಸ್ಕಾರ ಮಾಡುವ ಮೂಲಕ ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು. 9 ಮಂಡಲಗಳಲ್ಲಿ ನಡೆದ 108 ಸೂರ್ಯ ನಮಸ್ಕಾರವನ್ನು ಕೇವಲ ಆಸನ- ಪ್ರಾಣಾಯಾಮಗಳ ಹೆಸರು ಹೇಳುವುದಕ್ಕೆ ಸೀಮಿತಗೊಳಿಸಲಿಲ್ಲ. ಬದಲಾಗಿ ಶಿವಮೊಗ್ಗ ಸುತ್ತಮುತ್ತಲಿನ ಪ್ರೆಕ್ಷಣೀಯ ಸ್ಥಳ, ಪ್ರವಾಸಿ ತಾಣಗಳು, ಪ್ರಾಣಿ-ಪಕ್ಷಿ ಸಂಕುಲ, ಪರಿಸರ ಕಾಳಜಿ, ಕೌಟುಂಬಿಕ, ಸಾಮಾಜಿಕ ಸಂಬಂಧಗಳ ಅರಿವು, ಸಂಸ್ಕಾರ, ಋಷಿಮುನಿಗಳು, ಮಾತೃ ದೇವತೆಗಳ ಮಾಹಿತಿ, ಆರೋಗ್ಯಕರ ತಂಪುಪಾನೀಯ, ನದಿಗಳು, ತರಕಾರಿ, ಯೋಗದ ಬಗೆಗಳು ಹಾಗೂ ಯೋಗದಿಂದ ಆಗುವ ಪ್ರಯೋಜನಗಳನ್ನು ಮಕ್ಕಳಿಗೆ ಕೇಳಿ-ಹೇಳಿ ಚಟುವಟಿಕೆಗಳ ಮೂಲಕ ಮಾಡಿಸಿದ್ದು ಕಾರ್ಯಕ್ರಮವನ್ನು ಕಳೆಗಟ್ಟುವಂತೆ ಮಾಡಿತು.
    ಯುವ ನೃತ್ಯ ಕಲಾವಿದ ಎನ್.ಶಶಿಕುಮಾರ್ ಅವರು ವಿವಿಧ ಚಲನಚಿತ್ರ ಗೀತೆಗಳ ತುಣುಕುಗಳಿಗೆ ಯೋಗ ನೃತ್ಯ ಮಾಡಿಸಿ, ಮನ ರಂಜಿಸಿದರು. ಗೀತೆಗಳ ತಾಳಕ್ಕೆ ತಕ್ಕಂತೆ ಎಲ್ಲರೂ ಹೆಜ್ಜೆ ಹಾಕಿದರು. ಯುವ ಜನರಲ್ಲಿ ಯೋಗ-ಆರೋಗ್ಯ, ದೇಹಭಕ್ತಿ-ದೇಶಭಕ್ತಿ ಜಾಗೃತಿಗಾಗಿ ನಡೆದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಲೆ, ಭಾರತೀಯ ವಿದ್ಯಾಭವನ, ನ್ಯಾಷನಲ್ ಪಬ್ಲಿಕ್ ಸ್ಕೂಲ್, ಸೆಂಟ್ ಜೋಸೆಫ್ ಅಕ್ಷರ ಧಾಮ, ಜ್ಞಾನದೀಪ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ನೂರಾರು ನಾಗರಿಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts