ಕದ್ದ ಮೊಬೈಲ್ ಪತ್ತೆ ಮಾಡಿ ಹಸ್ತಾಂತರಿದ ರೈಲ್ವೆ ಪೊಲೀಸರು

ಶಿವಮೊಗ್ಗ: ರೈಲಿನಲ್ಲಿ ಪ್ರಯಾಣ ಮಾಡುವಾಗ ಕಳ್ಳತನವಾಗಿದ್ದ ಮೊಬೈಲ್‌ನ್ನು ರೈಲ್ವೆ ಪೊಲೀಸರು ಪತ್ತೆ ಮಾಡಿ ಹಿಂದಿರುಗಿಸಿದರು.
ಕುಂಸಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಅರವಿಂದಕುಮಾರ್ ಅವರು ಬೆಂಗಳೂರಿನಿಂದ ಕಳೆದ ಜೂನ್‌ನಲ್ಲಿ ಶಿವಮೊಗ್ಗಕ್ಕೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಭದ್ರಾವತಿ ರೈಲು ನಿಲ್ದಾಣದಿಂದ ರೈಲು ಹೊರಡುವಾಗ ಕಳ್ಳ ಅವರ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಅರವಿಂದಕುಮಾರ್ ಅವರು ಶಿವಮೊಗ್ಗ ಸೈಬರ್ ಠಾಣೆಗೆ ದೂರು ನೀಡಿದ್ದರು.
ಸೈಬರ್ ಠಾಣೆ ಪೊಲೀಸರು ಮತ್ತು ರೈಲ್ವೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕಳ್ಳತನ್ನು ಪತ್ತೆ ಮಾಡಿ ಮೊಬೈಲ್ ಜಪ್ತಿ ಮಾಡಿದ್ದರು. ಬುಧವಾರ ರೈಲ್ವೆ ಇನ್‌ಸ್ಪೆಕ್ಟರ್ ಇಂದಿರಾ ಅವರು ಅರವಿಂದಕುಮಾರ್ ಅವರನ್ನು ಠಾಣೆಗೆ ಕರೆಯಿಸಿ ಸಿಬ್ಬಂದಿ ಸಮ್ಮುಖದಲ್ಲಿ ಮೊಬೈಲ್ ಹಸ್ತಾಂತರಿಸಿದರು.

Share This Article

ಈರುಳ್ಳಿ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ! ಸಿಪ್ಪೆ ವೇಸ್ಟ್​ ಎಂದು ಬಿಸಾಡೋ ಬದಲು ಹೀಗೆ ಮಾಡಿ

ಯಾವುದೇ ಅಡುಗೆ ಮಾಡಿದ್ರು ಈರುಳ್ಳಿ ಬೇಕೆ... ಬೇಕು. ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ…

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ಅಪ್ಪಿತಪ್ಪಿಯೂ ಭಾನುವಾರದಂದು ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ! ದೇವರ ಕೋಪಕ್ಕೆ ಗುರಿಯಾಗ್ತೀರ ಹುಷಾರ್​

ಬೆಂಗಳೂರು: ಭಾನುವಾರ ಸಾಮಾನ್ಯವಾಗಿ ರಜಾ ದಿನ. ಇದು ಎಲ್ಲರಿಗೂ ತಿಳಿದಿದೆ. ಆದ್ದರಿಂದಲೇ ಇಂದು ಬಹುತೇಕ ಎಲ್ಲರೂ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ