Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಕಳೆದ ಸಲ ಶಿವರಾಜ್​ ಕುಮಾರ್​ ದಂಡು ಕಟ್ಟಿಕೊಂಡು ಬಂದು ಕುಣಿದರೂ ಗೆಲ್ಲಲಾಗಲಿಲ್ಲ

Monday, 15.10.2018, 2:59 PM       1 Comment

ಶಿವಮೊಗ್ಗ: ಕಾಂಗ್ರೆಸ್​ ಮತ್ತು ಜೆಡಿಎಸ್​ಗೆ ಲೋಕಸಭಾ ಚುನಾವಣೆ ಎಂದರೆ ಹುಡುಗಾಟವಾಗಿದೆ ಎಂದು ಬಿಜೆಪಿ ಶಾಸಕ ಕುಮಾರ್​​ ಬಂಗಾರಪ್ಪ ಕಿಡಿಕಾರಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದೆ ನಡೆದ ಚುನಾವಣೆ ವೇಳೆ ಜೆಡಿಎಸ್​ನಿಂದ ನನ್ನ ತಂಗಿ ಸ್ಪರ್ಧಿಸಿದ್ದಳು. ಆಗ ಶಿವರಾಜ್ ಕುಮಾರ್‌ ದಂಡು ಕಟ್ಟಿಕೊಂಡು ಬಂದು ಕುಣಿದುಕೊಂಡು ಪ್ರಚಾರ ಮಾಡಿದ್ದರು. ಅವರಿಗೆ ಚುನಾವಣೆಗೆ ಸ್ಪರ್ಧಿಸುವ ಮೊದಲು ಅಭಿವೃದ್ಧಿ ಪರ ಚಿಂತನೆ ಇರಬೇಕು. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್​ಗೆ ಇಲ್ಲ ಎಂದು ಟೀಕಿಸಿದರು.

ಮಧು ಬಂಗಾರಪ್ಪ ಸ್ಪರ್ಧಿಸಿದಾಕ್ಷಣ ಜಾತಿ ಒಂದಾಗುತ್ತದೆ ಎಂಬುದು ಸರಿಯಲ್ಲ. ಕಳೆದ ಬಾರಿಯೇ ಜೆಡಿಎಸ್​ಗೆ ಜಾತಿ ಒಗ್ಗೂಡಿಸಲು ಸಾಧ್ಯವಾಗಲಿಲ್ಲ. ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಇಲ್ಲ. ಕಾಂಗ್ರೆಸ್​ಗೆ ಅಭ್ಯರ್ಥಿಯು ಇಲ್ಲ. ಹಾಗಾಗಿ ಪ್ರಸ್ತುತ ಕಾಂಗ್ರೆಸ್ ಹಾಗೂ ಜೆಡಿಎಸ್ ಜಾತಿ ಧರ್ಮದ ಆಧಾರದಲ್ಲಿ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಮಧು ಬಂಗಾರಪ್ಪ ಎದುರಾಳಿ ಆಗಲು ಸಾಧ್ಯವಿಲ್ಲ
ಮಧು ಬಂಗಾರಪ್ಪ ಹೇಗೆ ನಮಗೆ ಎದುರಾಳಿ ಆಗಲು ಸಾಧ್ಯ. ಸೊರಬ ಜನ ಮಧುಗೆ ಉತ್ತರ ನೀಡಿ ಮನೆಯಲ್ಲಿ ಕೂರಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜನ ಕಾಂಗ್ರೆಸ್ ಬಾಗಿಲನ್ನು ಮುಚ್ಚಿದ್ದಾರೆ. ಮಧು ಬಂಗಾರಪ್ಪ ಇನ್ನು ಹದಿನೈದು ದಿನ ಆರಾಮಾಗಿ ವಿದೇಶದಲ್ಲಿರುತ್ತಿದ್ದರು. ಆದರೆ, ಮಾರಮ್ಮನ ಜಾತ್ರೆಗೆ ಕುರಿ ಕರೆದುಕೊಂಡು ಬಂದಂತೆ ಕರೆತರಲಾಗಿದೆ ಎಂದು ಕೆ.ಎಸ್​ ಈಶ್ವರಪ್ಪ ವ್ಯಂಗ್ಯವಾಡಿದರು.

One thought on “ಕಳೆದ ಸಲ ಶಿವರಾಜ್​ ಕುಮಾರ್​ ದಂಡು ಕಟ್ಟಿಕೊಂಡು ಬಂದು ಕುಣಿದರೂ ಗೆಲ್ಲಲಾಗಲಿಲ್ಲ

Leave a Reply

Your email address will not be published. Required fields are marked *

Back To Top