ಶಿವಮೊಗ್ಗ: ಹಣವಿರುವ ಬ್ಯಾಗನ್ನು ಆಟೋದಲ್ಲೇ ಬಿಟ್ಟುಹೋಗಿದ್ದ ಮಹಿಳೆಗೆ ಬ್ಯಾಗ್ ಮರಳಿಸುವ ಮೂಲಕ ಆಟೋ ಚಾಲಕ ನಾಗರಾಜ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಗಳವಾರ ಬೆಳಗ್ಗೆ ಚನ್ನಗಿರಿ ತಾಲೂಕು ತಾವರೆಕೆರೆಯ ಮೊಹಸಿನ್ ಎಂಬಾಕೆ ಶಿವಮೊಗ್ಗಕ್ಕೆ ಬಸ್ನಲ್ಲಿ ಬಂದಿಳಿದಿದ್ದಾರೆ. ನಾಗರಾಜ್ ಅವರ ಆಟೋದಲ್ಲಿ ಆಕೆ ತಿಲಕನಗರದ ಆಸ್ಪತ್ರೆಯೊಂದಕ್ಕೆ ಪ್ರಯಾಣಿಸಿದ್ದು ಆಟೋ ಇಳಿಯುವಾಗ 8,500 ರೂ. ನಗದು ಇರಿಸಿದ್ದ ಪರ್ಸ್ ಹಾಗೂ ಬ್ಯಾಗನ್ನು ಆಟೋದಲ್ಲಿ ಬಿಟ್ಟುಹೋಗಿದ್ದಾರೆ.
ಕೆಲ ಸಮಯದ ಬಳಿಕ ಬ್ಯಾಗ್ ಅನ್ನು ಗಮನಿಸಿದ ನಾಗರಾಜ್, ಸಂಚಾರ ಠಾಣೆ ಪೊಲೀಸರಿಗೆ ಬ್ಯಾಗ್ ಒಪ್ಪಿಸಿ ಮಹಿಳೆ ಆಸ್ಪತ್ರೆ ಹೋಗಿದ್ದನ್ನು ತಿಳಿಸಿದರು. ಇದಿಷ್ಟು ನಡೆದ ಕೆಲವೇ ತಾಸಿನಲ್ಲಿ ಮಹಿಳೆಯನ್ನು ಪತ್ತೆ ಮಾಡಿದ ಪೊಲೀಸರು ಠಾಣೆಗೆ ಕರೆಸಿಕೊಂಡಿದ್ದಾರೆ. ಅತ್ತ ನಾಗರಾಜ್ ಅವರನ್ನೂ ಕರೆಸಿಕೊಂಡು ಅವರ ಮೂಲಕವೇ ಮಹಿಳೆಗೆ ಬ್ಯಾಗ್ ಮರಳಿಸಿದ್ದಾರೆ. ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್ಕುಮಾರ್ ಸಮ್ಮುಖದಲ್ಲಿ ಮಹಿಳೆಗೆ ಹಣವಿದ್ದ ಬ್ಯಾಗ್ ಅನ್ನು ನಾಗರಾಜ್ ಮರಳಿಸಿದರು.
ಹಳೇ ಸ್ಕೂಟರ್ನಲ್ಲಿ ದೇಶ ಸುತ್ತಿದ ತಾಯಿ-ಮಗನಿಂದ ಕುಕ್ಕೆಯಲ್ಲಿ ವಿಶೇಷ ಪೂಜೆ
ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಅವಘಡ: ಮಾಲ್ಗುಡಿ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಮಹಿಳೆಯರಿಬ್ಬರ ದುರ್ಮರಣ